ಕನ್ನಡಪ್ರಭ ವಾರ್ತೆ ವಿಜಯಪುರ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿಷ್ಠ ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ಧ ಗಾಂಧೀಜಿಯವರು ಅಹಿಂಸೆ,‌ ಸತ್ಯಾಗ್ರಹ, ಅಸಹಕಾರದಂತಹ ಶಾಂತಿಯ ಹೋರಾಟದ ಮೂಲಕ ಭಾರತ ಸ್ವಾತಂತ್ರ್ಯ ಪಡೆಯಲು ಕಾರಣರಾದರು ಎಂದು ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಎ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸ್ವಾತಂತ್ರ್ಯ ಹೋರಾಟದಲ್ಲಿ ಬಲಿಷ್ಠ ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ಧ ಗಾಂಧೀಜಿಯವರು ಅಹಿಂಸೆ,‌ ಸತ್ಯಾಗ್ರಹ, ಅಸಹಕಾರದಂತಹ ಶಾಂತಿಯ ಹೋರಾಟದ ಮೂಲಕ ಭಾರತ ಸ್ವಾತಂತ್ರ್ಯ ಪಡೆಯಲು ಕಾರಣರಾದರು ಎಂದು ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಎ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಜ್ಯ ಸರ್ಕಾರದ ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ನಗರದ ಸಿಕ್ಯಾಬ್ ಎ.ಆರ್.ಎಸ್ ಇನಾಮದಾರ ಕಾಲೇಜು ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಇವುಗಳ‌ ಸಂಯುಕ್ತ ಆಶ್ರಯದಲ್ಲಿ ಗಾಂಧೀಜಿ ಆತ್ಮಕತೆ ನೂರರ ಸಂಭ್ರಮ ಭೂದಾನ ಚಳವಳಿ 75 ವರ್ಷ

ಸ್ಮರಣೆಗಾಗಿ ಯುವಜನರಿಗೆ ಗಾಂಧೀಜಿಯವರ ವಿಚಾರಗಳ ಪ್ರಸ್ತುತತೆ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜೀಯವರ ಕಾರ್ಯಗಳನ್ನು ಹಾಗೂ ಸ್ವತಂತ್ರ್ಯ ಹೋರಾಟವನ್ನು ಇಂದಿನ ಯುವಜನಾಂಗ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇದು ಜಗತ್ತಿನ

ಶಾಂತಿಗೆ ದೊಡ್ಡ ಕೊಡುಗೆಯಾಗಿದೆ ಎಂದರು.

ಮುಖ್ಯ ಅತಿಥಿ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಸಂಚಾಲಕ ಡಾ.ಆಬಿದಾ ಬೇಗಮ್ ಮಾತನಾಡಿ, ಗಾಂಧೀಜಿಯವರ ಸತ್ಯಾಗ್ರಹ ತತ್ವಗಳು

ಆಚಾರ ವಿನೋಬಾ ಭಾವೆ ಅವರ ಮೇಲೆ ಪ್ರಭಾವ ಬೀರಿ ಭೂದಾನ ಚಳವಳಿಗೆ ಕಾರಣವಾದ ಬಗೆಯನ್ನು ವಿಶೇಷ ಉಪನ್ಯಾಸದ ಮೂಲಕ ವಿವರಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇತ್ರಿ ಮಾತನಾಡಿ, ಗಾಂಧೀಜಿ ಹಾಗೂ ಸತ್ಯಾಗ್ರಹ ತತ್ವಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪ್ರಾಧ್ಯಾಪಕ ಪ್ರೊ.ಪಿ.ಬಿ. ಬಿರಾದಾರ ಗಾಂಧೀಜಿ ಹಾಗೂ ಅಂಹಿಸೆ ಕುರಿತು ವಿಶೇಷ ಉಪನ್ಯಾಸ ಪ್ರಸ್ತುತ ಪಡಿಸಿದರು.

ಡಾ.ಶುಜಾ ಪುಣೇಕರ, ಪ್ರಾಚಾರ್ಯ ಡಾ.ಎಚ್.ಕೆ.ಯಡಹಳ್ಳಿ, ಎಮ್.ಎಮ್.ಬಾಗಲಕೋಟ, ಉಪಪ್ರಾಚಾರ್ಯೆ ಡಾ.ಹಾಜೀರಾ ಪರವೀನ್, ಡಾ.ಮಹಮ್ಮದ ಸಮೀಯುದ್ದೀನ್, ಡಾ.ಮುಸ್ತಾಕ ಅಹ್ಮದ, ಜೈನುಲ್ಲಾಬೆದೀನ್ ಪುಣೆಕರಣ ಆಫ್ಸಾ, ಪ್ರೊ.ಗಂಗಾಧರ ಭಟ್, ಸಿಕ್ಯಾಬ್ ಮಹಿಳಾ

ಮಹಾವಿದ್ಯಾಲಯ ಹಾಗೂ ಸಿಕ್ಯಾಬ್ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.