ಗಾಂಧೀಜಿ ಹುತಾತ್ಮ ದಿನ; ಮಾನವ ಸರಪಳಿ ರಚಿಸಿ ಜಾಗೃತಿ

| Published : Feb 04 2024, 01:31 AM IST

ಗಾಂಧೀಜಿ ಹುತಾತ್ಮ ದಿನ; ಮಾನವ ಸರಪಳಿ ರಚಿಸಿ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಸೌಹಾರ್ದ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿವಿಧ ಪ್ರಗತಿ ಪರ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನದ ಅಂಗವಾಗಿ ಹರಿಹರದ ಗಾಂಧಿ ವೃತ್ತದಲ್ಲಿ ಸೌಹಾರ್ದತಾ ಮಾನವ ಸರಪಳಿ ರಚಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿವಿಧ ಪ್ರಗತಿ ಪರ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ನಗರದ ಗಾಂಧಿ ವೃತ್ತದಲ್ಲಿ ಸೌಹಾರ್ದತಾ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಿದರು.

ಬಳಿಕ ಮಾತನಾಡಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಮಾಜವನ್ನು ಬುದ್ಧ, ಬಸವ, ಡಾ.ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ಶರಣರು, ಸೂಫಿ ಸಂತರ ಆದರ್ಶ, ತತ್ವದಂತೆ ಮುನ್ನೆಡೆಸಬೇಕಿದೆ. ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿಸಬೇಕಿದೆ. ನಾವು ಎಲ್ಲಾ ಧರ್ಮಗಳಿಗೂ ಸಮದೃಷ್ಟಿಯಿಂದ ಕಾಣುವ, ಪರಧರ್ಮಗಳ ಬಗ್ಗೆ ಗೌರವ ನೀಡುವ ದೇಶದ ಏಕತೆ, ಸಮಾನತೆ, ಸಹೋದರತೆ, ಸಾರ್ವಭೌಮತ್ವ ಕಾಪಾಡಿಕೊಂಡು ಬದುಕುವ ವಾತಾವರಣ ಸೃಷ್ಟಿಯಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದರೆಡ್ಡಿ ಸಂವಿಧಾನದ ಆಶಯಗಳ ಪ್ರತಿಜ್ಞಾವಿಧಿ ಬೋಧಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜೆ.ಕಲೀಂಬಾಷಾ, ಎಚ್.ಕೆ.ಕೊಟ್ರಪ್ಪ, ಎಚ್.ನಿಜಗುಣ, ಡಾ.ಜಗನ್ನಾಥ್, ಎಲ್.ಬಿ.ಹನುಮಂತಪ್ಪ, ನಗರಸಭಾ ಸದಸ್ಯ ಎಂ.ಎಸ್.ಬಾಬುಲಾಲ್, ಬಿ.ಮಗ್ದುಮ್ ಸಾಬ್, ಬಿ.ಕೆ.ಅನ್ವರ್ ಬಾಷಾ, ಅಜೀಜ್ ಉರ್ ರಹಮಾನ್, ಬಾಂಬೆ ರಹಮಾನ್ ಸಾಬ್, ಸಿ.ಎನ್.ಹುಲಿಗೇಶ್, ರಹಮತ್ ಉರ್ ರಹಮಾನ್, ಪೈ.ಮಹಾದೇವ, ಪೈ. ಸುರೇಶ್ ವೈ., ಎಚ್.ಶಿವಪ್ಪ, ಪ್ರಭಾಕರ, ಶಂಕರಮೂರ್ತಿ, ಎಚ್.ಸುರೇಶ್, ಎಸ್.ಗೋವಿಂದ, ರಮೇಶ್ ಮಾನೆ, ಮೊಹ್ಮದ್ ಇಲಿಯಾಸ್, ಪ್ರೀತಮ್ ಬಾಬು, ಸಿಕಂದರ್, ಅಡಿಕೆ ನಿಜಗುಣ, ಕಡಲೆಗೊಂದಿ ತಿಮ್ಮಪ್ಪ ಇತರರಿದ್ದರು.