ಸಾರಾಂಶ
ಸವಣೂರು: ಅಧಿಕಾರಿಗಳು ಅಹಂ ಬಿಟ್ಟು ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಗಾಂಧೀಜಿ ಕಂಡ ಕನಸು ನನಸಾಗಲು ಸಾಧ್ಯವಾಗಲಿದೆ ಎಂದು ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಮಹಾತ್ಮಾ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹೂದ್ದೂರ ಶಾಸ್ತ್ರೀಜಿ ಜಯಂತಿ ಉದ್ಘಾಟಿಸಿ ಮಾತನಾಡಿದರು.ಸ್ವಚ್ಛ ಭಾರತ ಮಿಷನ್‌ಯಡಿ ಸೆ. ೧೭ರಿಂದ ಅ. ೧ರ ವರೆಗೆ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಕೆಲ ಅಹಂ ಹೊಂದಿದ ಅಧಿಕಾರಿಗಳಿಂದಾಗಿ ವಿಫಲವಾಗಿದೆ ಎನ್ನುವ ಭಾವನೆ ಎದುರಾಗುವಂತಾಗಿದೆ. ಯಾವುದೇ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೇ ಆಗಲಿ ಸಾರ್ವಜನಿಕರ ಸಹಭಾಗಿತ್ವ ಪಡೆದು ಸ್ವಚ್ಛತೆಗೆ ಮುಂದಾದಲ್ಲಿ ಮಾತ್ರ ಮಹಾತ್ಮ ಗಾಂಧೀಜಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಂಡ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಲಿದೆ. ಆದ್ದರಿಂದ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸ್ವಚ್ಛತೆಗೆ ಆದ್ಯತೆ ನೀಡುವಂತಾಗಲಿ ಎಂದರು. ತಹಸೀಲ್ದಾರ್ ಭರತರಾಜ್ ಕೆ.ಎನ್., ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರೇಡ್ ೨ ತಹಸೀಲ್ದಾರ್ ಗಣೇಶ ಸವಣೂರ, ಬಿಇಒ ಎಂ.ಎಫ್. ಬಾರ್ಕಿ, ಎಇ ಹಾಜಿಮಲಂಗ್ ಚಪ್ಪರಬಂದ್, ಕರವೇ ತಾಲೂಕು ನಿಕಟಪೂರ್ವ ಅಧ್ಯಕ್ಷ ಪರಶುರಾಮ ಈಳಗೇರ, ಕಂದಾಯ ಇಲಾಖೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.ಗಾಂಧಿ ನಡಿಗೆ ಸತ್ಯದೆಡೆಗೆ ಜಾಥಾ
ರಾಣಿಬೆನ್ನೂರು: ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ 100ನೇ ವರ್ಷಾಚರಣೆ ಪ್ರಯುಕ್ತ ಮಹಾತ್ಮಾ ಗಾಂಧಿ ಜಯಂತಿಯ ಅಂಗವಾಗಿ ಬುಧವಾರ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಗಾಂಧಿ ನಡಿಗೆ ಸತ್ಯದೆಡೆಗೆ ಜಾಥಾ ಜರುಗಿತು.ಇಲ್ಲಿಯ ಕೆಇಬಿ ಗಣೇಶ ದೇವಸ್ಥಾನದಿಂದ ಆರಂಭವಾದ ಜಾಥಾ ಪಿ.ಬಿ. ರಸ್ತೆಯ ಮೂಲಕ ಬಸ್ ನಿಲ್ದಾಣ ಎದುರಿನ ಸ್ವಾತಂತ್ರ‍್ಯ ಹೋರಾಟಗಾರ ಮೆಣಸಿನಹಾಳ ತಿಮ್ಮನಗೌಡರ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿತು. ನಂತರ ಮೆಡ್ಲೇರಿ ರಸ್ತೆ, ಅಶೋಕ ನಗರ, ವಿನಾಯಕ ನಗರದಲ್ಲಿ ಸಂಚರಿಸಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯಕ್ಕೆ ಬಂದು ಸೇರಿತು.
ಶಾಸಕ ಪ್ರಕಾಶ ಕೋಳಿವಾಡ, ಪುಟ್ಟಪ್ಪ ಮರಿಯಮ್ಮನವರ, ಬಸವರಾಜ ಹುಚ್ಚಗೊಂಡರ, ಕೃಷ್ಣಪ್ಪ ಕಂಬಳಿ, ನಾಗರಾಜ ಕುಸಗೂರ, ತಿರುಪತಿ ಅಜ್ಜನವರ, ಮಧು ಕೋಳಿವಾಡ, ಬೀರಪ್ಪ ಲಮಾಣಿ, ಶಿವಾನಂದ ಕನ್ನಪ್ಪಳವರ, ರಾಜು ಹೊನ್ನಾಳ್ಳಿ, ಆನಂದ ಹುಲಬನ್ನಿ, ರಾಮಣ್ಣ ನಾಯಕ, ಎಫ್.ಎಸ್.ಪಾಟೀಲ, ರವೀಂದ್ರಗೌಡ ಪಾಟೀಲ, ಇರ್ಫಾನ್ ದಿಡಗೂರ, ಸಣ್ಣತಮ್ಮಪ್ಪ ಬಾರ್ಕಿ, ಭರತರೆಡ್ಡಿ, ಮಂಜನಗೌಡ ಪಾಟೀಲ, ಮಲ್ಲೇಶಪ್ಪ ಮದ್ಲೇರ, ನೀಲಕಂಠಪ್ಪ ಕುಸಗೂರ, ಗಂಗಾಧರ ಬಣಕಾರ, ಚಂದ್ರಣ್ಣ ಬೇಡರ, ವೆಂಕಟೇಶ ಬಣಕಾರ ಮತ್ತಿತರರಿದ್ದರು.