ವಿಜೃಂಭಣೆಯ ಗಣೇಶ ಚತುರ್ಥಿ ಆಚರಣೆ

| Published : Sep 09 2024, 01:34 AM IST

ಸಾರಾಂಶ

ಶಿರಾಳಕೊಪ್ಪ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ ಗಣಪನ ಮೂರ್ತಿ

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಪಟ್ಟಣದಲ್ಲಿ ಗಣೇಶ ಚತುರ್ಥಿಯ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಪಟ್ಟಣದ ಕೆಲವು ಸ್ಥಳಗಳಲ್ಲಿ ಸಾವರ್ಜನಿಕ ಗಣೇಶನನ್ನು ಪ್ರತಿಷ್ಠಾಪಿಸುವ ಸಡಗರ ಹಬ್ಬಕ್ಕೆ ವಿಶೇಷ ಮೆರಗನ್ನು ತಂದಿತು.

ಬಸವೇಶ್ವರ ದೇವಾಲಯ ಗಣಪತಿ, ಬಸ್ ನಿಲ್ದಾಣದ ಗಣಪತಿ, ನೆಹರು ಕಾಲೋನಿ, ದೇವರಾಜ ಅರಸ್‌ ಬಡವಣೆ ಸೇರಿ ಹಲವಾರು ಕಡೆ ಸಾವರ್ಜನಿಕ ಗಣೇಶಗಳನ್ನು ಪ್ರತಿಷ್ಠಾಪಿಸಲಾಯಿತು.

ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ 61ನೇ ವರ್ಷದ ಗಣೇಶ ಪ್ರತಿಷ್ಠಾಪನೆ ವೀರಶೈವ ಸಮಾಜ ಹಾಗೂ ಅಕ್ಕಮಹಾದೇವಿ ಪ್ರಷ್ಠಾನದ ಆಶ್ರಯದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಮುನ್ನ ಬೃಹತ್ ಗಾತ್ರದ ಗಣಪನನ್ನು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಲಾಯಿತು.

ನಂತರ ಸಂಜೆ 4ಗಂಟೆಗೆ ದೇವಾಲಯದಲ್ಲಿ ನೂರಾರು ಯುವಕರು ಸೇರಿ ಸಂಕಲ್ಪ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಲಾಯಿತು.

ನಂತರ ಮಹಾ ಮಂಗಳಾರತಿ ಮಾಡಿ ಪ್ರಸಾದ ವಿತರಿಸಲಾಯಿತು. ಮೆರವಣಿಗೆಯಲ್ಲಿ ಗಣಪತಿ ಸಮಿತಿ ಅಧ್ಯಕ್ಷ ವಿಜಯಕುಮಾರ್, ಯುವ ಘಟಕದ ಅಧ್ಯಕ್ಷ ಗಿರೀಶ್ ವಸ್ತ್ರಕ್ಕರ್, ದರ್ಶನ ಬೆನ್ನೂರ, ಆನಂದ ಪಿ.ಬಿ.ನಾಗರಾಜ್ ಚಕ್ರಸಾಲಿ, ಶರತ್ ನ್ಯಾಮತಿ ಸೇರಿ ಹಲವರಿ ಭಾಗವಹಿಸಿದ್ದರು.