ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ನಿರಾಧಾರ ಆರೋಪಗಳನ್ನು ಮಾಡಲಾಗುತ್ತಿದೆ. ಈ ಆರೋಪ ಮತ್ತು ಕಳಂಕಗಳಿಂದ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳು ಮುಕ್ತರಾಗಲಿ ಎಂದು ಡಾ. ವೀರೇಂದ್ರ ಹೆಗ್ಗಡೆ ಹೆಸರಿನಲ್ಲಿ ಪೂಜೆ ಸಲ್ಲಿಸಲಾಯಿತು.
ಧಾರವಾಡ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮೇಲಿನ ಕಳಂಕ ನಿವಾರಣೆಗಾಗಿ ಶನಿವಾರ ನಗರದ ಕರ್ನಾಟಕ ಕಾಲೇಜು ವೃತ್ತದಲ್ಲಿರುವ ವಿದ್ಯಾ ಗಣೇಶ ದೇವಸ್ಥಾನದಲ್ಲಿ ಭಕ್ತರಿಂದ ಸಾಮೂಹಿಕ ಪೂಜೆ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ನಿರಾಧಾರ ಆರೋಪಗಳನ್ನು ಮಾಡಲಾಗುತ್ತಿದೆ. ಈ ಆರೋಪ ಮತ್ತು ಕಳಂಕಗಳಿಂದ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳು ಮುಕ್ತರಾಗಲಿ ಎಂದು ಡಾ. ವೀರೇಂದ್ರ ಹೆಗ್ಗಡೆ ಹೆಸರಿನಲ್ಲಿ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪೂಜೆಯ ನೇತೃತ್ವ ವಹಿಸಿದ್ದ ಸವಿತಾ ಅಮರಶೆಟ್ಟಿ, ಕ್ಷೇತ್ರದ ಬಗ್ಗೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಕೋಟ್ಯಾಂತರ ಭಕ್ತರ ನಂಬಿಕೆಯ ಕೇಂದ್ರ ಧರ್ಮಸ್ಥಳದ ವಿರುದ್ಧದ ಆರೋಪಗಳು ನಿವಾರಣೆಯಾಗಲಿ ಎಂದರು.
ಹಿರಿಯ ಮುಖಂಡ ವಸಂತ ಅರ್ಕಾಚಾರ ಮಾತನಾಡಿ, ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಿಸಿರುವ ಎಸ್‌ಐಟಿ ತನಿಖಾ ವರದಿಯನ್ನು ಜನರ ಮುಂದಿಡಬೇಕು ಮತ್ತು ಸುಳ್ಳು ಆರೋಪಗಳನ್ನು ಮಾಡುತ್ತಿರುವ ಜನರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.ಈ ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಚೆನ್ನವೀರಗೌಡ ಪಾಟೀಲ, ಮಹಾವೀರ ಉಪಾದ್ಯೆ, ಅಡಿವೆಪ್ಪ ಹೊನ್ನಪ್ಪನವರ, ಕರಿಯಪ್ಪ ಅಮ್ಮಿನಬಾವಿ, ಸುರೇಂದ್ರ ದೇಸಾಯಿ, ಮಹಾವೀರ ಜೈನರ, ಕವಿತಾ ತೇರದಾಳ, ನಿರ್ಮಲಾ ಕನ್ನಿನಾಯ್ಕರ್, ಮಂಜುಳಾ ಕುಶಪ್ಪನವರ, ಮಹಾಂತೇಶ ಸೀಮಿಕೇರಿಮಠ, ಪುಂಡಲೀಕ ಹಡಪದ, ಶಕುಂತಲಾ ಕಟ್ಟಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.