ಗಣೇಶೋತ್ಸವ ಮೆರವಣಿಗೆ: ಕಲ್ಲು ತೂರಾಟಕ್ಕೆ ಪ್ರಚೋದಿಸಿದ ಜಾಫರ್ ನಾಪತ್ತೆ

| Published : Sep 10 2025, 01:03 AM IST

ಗಣೇಶೋತ್ಸವ ಮೆರವಣಿಗೆ: ಕಲ್ಲು ತೂರಾಟಕ್ಕೆ ಪ್ರಚೋದಿಸಿದ ಜಾಫರ್ ನಾಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಮಸೀದಿ ಮುಂದೆ ಗಣೇಶ ಮೆರವಣಿಗೆ ನಡೆಯುತ್ತಿದ್ದರೂ ನಮಗೆ ಏನೂ ಮಾಡಲು ಆಗುತ್ತಿಲ್ಲವಲ್ಲ ಎಂದು ಇರ್ಫಾನ್ ಟೀಂಗೆ ಕಲ್ಲುತೂರಾಟ ನಡೆಸಲು ಜಾಫರ್ ಪ್ರಚೋದಿಸಿದ್ದನು ಎಂದು ಹೇಳಲಾಗುತ್ತಿದ್ದು, ಅವನ ಮಾತು ಕೇಳಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲು ಇರ್ಫಾನ್, ಜಾಫರ್, ಸಲ್ಮಾನ್ ಸೇರಿ ೬ ಮುಸ್ಲಿಂ ಯುವಕರು ಪೂರ್ವ ಸಿದ್ಧತೆ ನಡೆಸಿದ್ದರು ಎಂದು ಮೂಲಗಳಿಂದ ಗೊತ್ತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು

ಗಣೇಶ ಉತ್ಸವದ ಮೆರವಣಿಗೆ ವೇಳೆ ಕಲ್ಲು ತೂರಾಟಕ್ಕೆ ಪ್ರಚೋದನೆ ನೀಡಿದ್ದನೆನ್ನಲಾದ ಪ್ರಮುಖ ಆರೋಪಿ ಜಾಫರ್‌ಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ ಎಂದು ಜಿಲ್ಲಾ ಆರಕ್ಷಕ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಮಸೀದಿ ಮುಂದೆ ಗಣೇಶ ಮೆರವಣಿಗೆ ನಡೆಯುತ್ತಿದ್ದರೂ ನಮಗೆ ಏನೂ ಮಾಡಲು ಆಗುತ್ತಿಲ್ಲವಲ್ಲ ಎಂದು ಇರ್ಫಾನ್ ಟೀಂಗೆ ಕಲ್ಲುತೂರಾಟ ನಡೆಸಲು ಜಾಫರ್ ಪ್ರಚೋದಿಸಿದ್ದನು ಎಂದು ಹೇಳಲಾಗುತ್ತಿದ್ದು, ಅವನ ಮಾತು ಕೇಳಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲು ಇರ್ಫಾನ್, ಜಾಫರ್, ಸಲ್ಮಾನ್ ಸೇರಿ ೬ ಮುಸ್ಲಿಂ ಯುವಕರು ಪೂರ್ವ ಸಿದ್ಧತೆ ನಡೆಸಿದ್ದರು ಎಂದು ಮೂಲಗಳಿಂದ ಗೊತ್ತಾಗಿದೆ.

ಮೊದಲೇ ರೂಪಿಸಿದ ಯೋಜನೆಯಂತೆ ಮೆರವಣಿಗೆ ಮಸೀದಿ ದಾಟುತ್ತಿದ್ದಂತೆ ಸಲ್ಮಾನ್ ಬೀದಿದೀಪಗಳನ್ನು ಆರಿಸಿದ್ದು, ಮಸೀದಿಯಿಂದ ೫೦ ಮೀಟರ್ ಮುಂದೆ ಡಿಜೆಗೆ ನೃತ್ಯ ಮಾಡುತ್ತಿದ್ದ ಹಿಂದೂ ಯುವಕರ ಗುಂಪಿನ ಮೇಲೆ ಮಸೀದಿ ಪಕ್ಕ, ಹಿಂಬದಿ ಅವಿತುಕೊಂಡು ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗುವುದನ್ನು ಸಹಿಸಲಾಗದೆ ಕೃತ್ಯವೆಸಗಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದ್ದು, ಸದ್ಯ ತಲೆಮರೆಸಿಕೊಂಡಿರುವ ಜಾಫರ್‌ಗಾಗಿ ಹುಡುಕಾಟ ನಡೆದಿದೆ.

ಕಿಡಿಗೇಡಿಗಳ ಇಂಚಿಂಚು ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದು, ಆರೋಪಿಗಳು ಯಾವುದಾದರೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆಯೇ, ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದರ ಜೊತೆಗೆ ಆರೋಪಿಗಳ ಮೊಬೈಲ್ ಕಾಲ್ ಲಿಸ್ಟ್‌ನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆ ಹಿಂದೆ ಸಂಘಟನೆಗಳ ಕೈವಾಡ ಇದೆಯೇ ಎಂಬುದನ್ನು ತಿಳಿಯಲು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ನಾಪತ್ತೆಯಾಗಿರುವ ನಾಲ್ವರಿಗೆ ಶೋಧ: ಎಸ್‌ಪಿ

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಪ್ರಮುಖ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರಕ್ಷಕ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ೨೬ ಆರೋಪಿಗಳನ್ನು ಪಟ್ಟಿ ಮಾಡಿದ್ದೇವೆ. ಈ ಪೈಕಿ ೨೨ ಮಂದಿಯನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಅರ ಪತ್ತೆಗೆ ಹುಡುಕಾಟ ನಡೆಸುತ್ತಿದ್ದೇವೆ. ಇನ್ನೂ ಹಲವು ಸಿಸಿ ಕ್ಯಾಮೆರಾ ದೃಶ್ಯ ವೀಕ್ಷಣೆ ಮಾಡುತ್ತಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ. ಇದಕ್ಕಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇವೆ ಎಂದು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದರು.

ಕಲ್ಲು ತೂರಾಟ ಪ್ರಕರಣದ 22 ಮಂದಿ ಆರೋಪಿಗಳು ಮತ್ತು ವಿಳಾಸ

ಮದ್ದೂರು: ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆಸಿದ ಕಲ್ಲು ತೂರಾಟ ಪ್ರಕರಣದಲ್ಲಿ ಒಟ್ಟು 22 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಎಲ್ಲಾ ಆರೋಪಿಗಳ ವಿವರ.

ಆರ್.ಆರ್.ನಗರ ಉರ್ದು ಸ್ಕೂಲ್ ಹಿಂಭಾಗದ 1ನೇ ಕ್ರಾಸ್ ನ ಮಹಮ್ಮದ್ ಅವೇಜ್ ಅಲಿಯಾಸ್ ಮುಳ್ಳು(22) ವೆಲ್ಡಿಂಗ್ ಕೆಲಸ, ಚನ್ನಪಟ್ಟಣ ಟೌನ್ ಕೋಟೆ ದೊಡ್ಡಬೀದಿಯ ಹಾಲಿ ವಾಸ ಮದ್ದೂರು ಚನ್ನೇಗೌಡ ಬಡಾವಣೆ 4ನೇ ಕ್ರಾಸ್ ಮಹಮದ್ ಇರ್ಫಾನ್ ಅಲಿಯಾಸ್ ಮಿಯಾ(28) ಪಾತ್ರೆ ವ್ಯಾಪಾರ, ಮದ್ದೂರು ಸಿದ್ಧಾರ್ಥನಗರದ 4ನೇ ಕ್ರಾಸ್ ನ ನವಾಜ್ ಖಾನ್ ಅಲಿಯಾಸ್ ನವಾಜ್(22) ಗ್ಯಾರೇಜ್ ಮಾಲೀಕ, ಮದ್ದೂರು ಮುಸ್ಲಿಂ ಪ್ಲಾಕ್ 1ನೇ ಕ್ರಾಸ್ ಇಮ್ರಾನ್‌ಪಾಷಾ ಅಲಿಯಾಸ್ ಇಮ್ರಾನ್(33) ಪೈಯಿಂಟ್ ಕೆಲಸ, ಸಿದ್ದಾರ್ಥ ನಗರದ 4ನೇ ಕ್ರಾಸ್ ನ ಉಮರ್ ಫಾರೂಕ್ ಅಲಿಯಾಸ್ ಉಮರ್)23) ಗುಜರಿ ವ್ಯಾಪಾರ, ಚನ್ನೇಗೌಡ ಬಡಾವಣೆ 4ನೇ ಕ್ರಾಸ್ ನ ಸೈಯದ್ ದಸ್ತಗೀರ್(38) ಪಾತ್ರೆ ವ್ಯಾಪಾರ, ಆರ್ ಆರ್ ನಗರದ 5ನೇ ಕ್ರಾಸ್ ನ ಖಾಸೀಫ್ ಅಹಮದ್ ಅಲಿಯಾಸ್ ಖಾಸಿಫ್(29) ವೆಲ್ಡಿಂಗ್ ಕೆಲಸ, ಚನ್ನೇಗೌಡ ಬಡಾವಣೆ 4ನೇ ಕ್ರಾಸ್ ನ ಅಹಮದ್ ಸಲ್ಮಾನ್ ಅಲಿಯಾಸ್ ಮುಕ್ಕುಲ್ಲಾ(21) ವೆಲ್ಡಿಂಗ್ ಕೆಲಸ, ಆರ್ ಆರ್ ನಗರದ 2ನೇ ಕ್ರಾಸ್ ಮುಸವೀರ್ ಪಾಷಾ ಅಲಿಯಾಸ್ ಒಡೆಯ(32) ಪಾತ್ರೆ ವ್ಯಾಪಾರ, ಆರ್ ಆರ್ ನಗರ 4ನೇ ಕ್ರಾಸ್ ಖಲಂದರ್‌ಖಾನ್ (39) ವೆಲ್ಡಿಂಗ್ ಕೆಲಸ, ಆರ್ ಆರ್ ನಗರ ಮಹಮದ್ ಅಜೀಜ್(29) ವೆಲ್ಡಿಂಗ್ ಕೆಲಸ, ಆರ್ ಆರ್ ನಗರದ 7ನೇ ಕ್ರಾಸ್ ನ ಇನಾಯತ್ ಪಾಷಾ(29) ರೇಷ್ಮೆಗೂಡು ವ್ಯಾಪಾರ, ಚನ್ನೇಗೌಡ ಬಡಾವಣೆ 5ನೇ ಕ್ರಾಸ್ ನ ಸುಮೇರ್ ಪಾಷಾ(25) ಫ್ಲವರ್ ಡೆಕೊರೆಷನ್ ಕೆಲಸ, ಚನ್ನೇಗೌಡ ಬಡಾವಣೆಯ 4ನೇ ಕ್ರಾಸ್ ಮಹಮದ್ ಖಲೀಂ ಅಲಿಯಾಸ್ ಕೈಫ್(22) ಗುಜರಿ ವ್ಯಾಪಾರಿ, ಆರ್ ಆರ್ ನಗರದ 1ನೇ ಕ್ರಾಸ್ ನ ಸಕ್ಲೇನ್ ಪಾಷ(19) ವೆಲ್ಡಿಂಗ್ ಕೆಲಸ, ಆರ್.ಆರ್ ನಗರದ 3ನೇ ಕ್ರಾಸ್ ನ ಸಿಖಂದರ್ ಅಲಿಖಾನ್ (39) ವೆಲ್ಡಿಂಗ್ ಕೆಲಸ, ಸಿದ್ದಾರ್ಥನಗರ 7ನೇ ಕ್ರಾಸ್ ನ ಸಾಧಿಕ್ ಉಲ್ಲಾ (27) ಗುಜರಿ ವ್ಯಾಪಾರಿ, ಮುಸ್ಲಿಂ ಬ್ಲಾಕ್ ನ 1ನೇ ಕ್ರಾಸ್ ನ ಹರ್ಷ್ ಖಾನ್ (30) ಗುಜರಿ ವ್ಯಾಪಾರ, ಆರ್ ಆರ್ ನಗರದ 7ನೇ ಕ್ರಾಸ್ ನ ಮೆಹಬೂಬ್ ಪಾಷ(28) ಟಾಟಾ ಏಸ್ ಡ್ರೈವರ್ , ಆರ್ ಆರ್ ನಗರದ 4ನೇ ಕ್ರಾಸ್ ಪರ್ವಿಜ್ ಪಾಷ (31) ಆಟೋ ಚಾಲಕ, ಆರ್.ಆರ್.ನಗರ 1ನೇ ಕ್ರಾಸ್ ನ ಇರ್ಫಾನ್ ಪಾಷ(24) ಸ್ಕೂಟರ್ ಗ್ಯಾರೇಜ್ ಕೆಲಸ, ಮೈಸೂರು ಹಳೇಕೆಸರೆ, 2 ಮೇನ್ 1ನೇ ಕ್ರಾಸ್ ನ ಸುಹೇಬಾ ಖಾನ್ (26) ವೆಲ್ಡಿಂಗ್ ಕೆಲಸ.