ಸಾರಾಂಶ
ಕಳೆದೊಂದು ವಾರದಿಂದ ಮಲೆನಾಡಿನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತಿರುವ ಪರಿಣಾಮ ಹರಿಹರದಲ್ಲಿ ಮೈದುಂಬಿ ಹರಿಯುತ್ತಿರುವ ಜೀವನದಿ ತುಂಗಭದ್ರೆಗೆ ಭಾಗೀರಥಿ ಹಬ್ಬದ ನಿಮಿತ್ತ ಮಹಿಳೆಯರು ಮಂಗಳವಾರ ಗಂಗಾಪೂಜೆ ನೆರೆವೇರಿಸಿದರು.
ಕನ್ನಡಪ್ರಭ ವಾರ್ತೆ ಹರಿಹರ
ಕಳೆದೊಂದು ವಾರದಿಂದ ಮಲೆನಾಡಿನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತಿರುವ ಪರಿಣಾಮ ಹರಿಹರದಲ್ಲಿ ಮೈದುಂಬಿ ಹರಿಯುತ್ತಿರುವ ಜೀವನದಿ ತುಂಗಭದ್ರೆಗೆ ಭಾಗೀರಥಿ ಹಬ್ಬದ ನಿಮಿತ್ತ ಮಹಿಳೆಯರು ಮಂಗಳವಾರ ಗಂಗಾಪೂಜೆ ನೆರೆವೇರಿಸಿದರು.ಪ್ರತಿ ವರ್ಷ ಆಷಾಢ ಮಾಸದಲ್ಲಿ ಆಚರಿಸುವ ಭಾಗೀರಥಿ ಹಬ್ಬವನ್ನು ನಗರದ ಜನ ನದಿ ದಡದಲ್ಲಿ ಆಚರಿಸಿದರೆ, ಗ್ರಾಮೀಣ ಭಾಗದ ಜನ ಕೆರೆ, ಕಟ್ಟೆಗೆ ತೆರಳಿ ಗಂಗಾಪೂಜೆ ಸಲ್ಲಿಸಿದರು. ನದಿ ದಡದ ರಾಘವೇಂದ್ರ ಸ್ವಾಮಿ ಮಠ, ಮೆಟ್ಟಿಲು ಹೊಳೆ, ಹರಿಹರೇಶ್ವರ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಜನರು ಪೂಜೆ ನೆರೆವೇರಿಸಿ, ಬಾಗಿನ ಅರ್ಪಿಸಿದರು.
ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಆಗುತ್ತಿರುವುದರಿಂದ ನದಿ ಮೈದುಂಬಿ ಹರಿಯುತ್ತಿದೆ. ನಗರದ ಮಹಿಳೆಯರು, ಮಕ್ಕಳು ಸಮೇತರಾಗಿ ಜಿಟಿಜಿಟಿ ಮಳೆಯಲ್ಲಿ ಆಗಮಿಸಿದ್ದ ಜನರು ನದಿಯ ಸೊಬಗನ್ನು ಕಣ್ತುಂಬಿಕೊಂಡರು.- - - -೧೬ಎಚ್‌ಆರ್‌ಆರ್೬:
ಹರಿಹರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರೆಗೆ ಭಾಗೀರಥಿ ಹಬ್ಬದ ನಿಮಿತ್ತ ಮಹಿಳೆಯರು ಮಂಗಳವಾರ ಗಂಗಾಪೂಜೆ ನೆರೆವೇರಿಸಿದರು.