ಸಾರಾಂಶ
ತಾಲೂಕಿನ ಸಿ.ಎನ್. ದುರ್ಗಾ ಹೋಬಳಿಯ ಜಟ್ಟಿಅಗ್ರಹಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡನೇ ಅವಧಿಗೆ ನೂತನ ಅಧ್ಯಕ್ಷೆಯಾಗಿ ಗಂಗಾದೇವಿ ಸಿದ್ದಗಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಸಿ.ಎನ್. ದುರ್ಗಾ ಹೋಬಳಿಯ ಜಟ್ಟಿಅಗ್ರಹಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡನೇ ಅವಧಿಗೆ ನೂತನ ಅಧ್ಯಕ್ಷೆಯಾಗಿ ಗಂಗಾದೇವಿ ಸಿದ್ದಗಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಗ್ರಹಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಗೋವಿಂದರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಗಂಗಾದೇವಿ ಸಿದ್ದಗಂಗಯ್ಯ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಈ ಹಿಂದೆ ಆಯ್ಕೆಯಾಗಿದ್ದ ಗೋವಿಂದರಾಜು ಮುಂದುವರೆಯಲಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರಿ ಅಧಿಕಾರಿ ಗುರುರಾಜು ಘೋಷಣೆ ಮಾಡಿದರು.ನೂತನ ಅಧ್ಯಕ್ಷೆ ಗಂಗಾದೇವಿ ಸಿದ್ದಗಂಗಯ್ಯ ಮಾತನಾಡಿ ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರ ಆಶೀರ್ವಾದ ಮತ್ತು ಸಂಘದ ಎಲ್ಲಾ ನಿರ್ದೇಶಕ ಸಹಕಾರದಿಂದ ಇಂದು ನನ್ನ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಂಘದಿಂದ ಬರುವ ಸವಲತ್ತುಗಳನ್ನ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ ಗ್ರಾಮೀಣ ಭಾಗದ ಸಣ್ಣ ಸಣ್ಣ ರೈತರಿಗೆ ಸಹಕಾರ ಸಂಘಗಳು ಅತ್ಯಂತ ಉಪಯುಕ್ತ ಕೇಂದ್ರಗಳಾಗಿದ್ದು, ಸಹಕಾರ ಸಂಘದಿಂದ ಶೂನ್ಯ ಬಡ್ಡಿ ಸೇರಿದಂತೆ ಅನೇಕ ಯೋಜನೆಗಳನ್ನ ರಾಜ್ಯ ಸಹಕಾರಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಂದಿದ್ದು, ಇಂತಹ ಹತ್ತು ಹಲವು ಯೋಜನೆಗಳನ್ನ ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ನೂತನವಾಗಿ ಆಯ್ಕೆಯಾದ ಗಂಗಾದೇವಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.ಇದೆ ಸಂದರ್ಭದಲ್ಲಿ ಡಿಸಿಸಿ ಮೇಲ್ವಿಚಾರಕರಾದ ತಿಮ್ಮರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗ್ರಾಪಂ ಉಪಾದ್ಯಕ್ಷ ಹಾಗೂ ಸಂಘದ ನಿರ್ದೇಶಕ ಮಂಜುನಾಥ್ ನಿರ್ದೇಶಕರಾದ ಸಣ್ಣಕಾಮಯ್ಯ, ಭೀಮಣ್ಣ, ಪುಟ್ಟರಾಜು, ಮಂಜುನಾಥ್, ಶಿವಶಂಕರ್, ವೆಂಕಟೇಶ್, ವನಿತ, ಸಿದ್ದಗಂಗಮ್ಮ, ಸುನೀತ, ತಿಮ್ಮರಾಜು, ಕಾರ್ಯದರ್ಶಿ ರಮೇಶ್, ಮುಖಂಡರಾದ ಬಸವರಾಜು, ಶಿವಣ್ಣ, (ಕೇಬಲ್) ಸಿದ್ದಗಂಗಯ್ಯ, ವೀರಕ್ಯಾತಯ್ಯ, ನಾಗರಾಜು, ಮಧು, ಮಂಜುನಾಥ್. ವೆಂಕಟೇಶ್, ಚಲುವರಾಜು, ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ) ೨೩ ಕೊರಟಗೆರೆ ಚಿತ್ರ ೦೧;- ಕೊರಟಗೆರೆ ತಾಲೂಕಿನ ಜಟ್ಟಿಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಗಂಗಾದೇವಿಸಿದ್ದಗಂಗಯ್ಯ ಅವಿರೋಧ ಆಯ್ಕೆಯಾಗಿದ್ದಾರೆ.