ಕಲಾ ವಿಭಾಗದಲ್ಲಿ ಗಂಗವ್ವಗೆ ರಾಜ್ಯಕ್ಕೆ 5ನೇ ರ್‍ಯಾಂಕ್‌

| Published : Apr 12 2024, 01:03 AM IST

ಸಾರಾಂಶ

ಸವದತ್ತಿ: ತಾಲೂಕಿನ ಮುನವಳ್ಳಿಯ ಮುರಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಂಗವ್ವ ಸುಣಧೋಳಿ ಕಲಾ ವಿಭಾಗದ ದ್ವಿತೀಯ ಪಿಯು ಪರೀಕ್ಷೆಯಲ್ಲಿ 592 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದುಕೊಂಡಿದ್ದಾಳೆ.

ಸವದತ್ತಿ: ತಾಲೂಕಿನ ಮುನವಳ್ಳಿಯ ಮುರಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಂಗವ್ವ ಸುಣಧೋಳಿ ಕಲಾ ವಿಭಾಗದ ದ್ವಿತೀಯ ಪಿಯು ಪರೀಕ್ಷೆಯಲ್ಲಿ 592 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದುಕೊಂಡಿದ್ದಾಳೆ. ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ ಶಾಸ್ತ್ರದಲ್ಲಿ ನೂರಕ್ಕೆ ನೂರು, ಕನ್ನಡ-99, ಇಂಗ್ಲಿಷ್‌-95 ಹಾಗೂ ಇತಿಹಾಸ 98 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ.

ತಾಲೂಕಿನ ಗೊರಗುದ್ದಿ ಗ್ರಾಮದ ಬಡ ಕೃಷಿ ಕೂಲಿಕಾರ್ಮಿಕರಾದ ನಾಗೇಶ-ಸಾವಕ್ಕ ದಂಪತಿಯ ಪುತ್ರಿಯಾಗಿದ್ದು, ತಂದೆ-ತಾಯಿ ಇಚ್ಛೆಯಂತೆ ಪದವಿ ಪೂರ್ಣಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಚೆನ್ನಾಗಿ ಮಾಡಿ ಉತ್ತಮ ಸರ್ಕಾರಿ ಅಧಿಕಾರಿಯಾಗಬೇಕೆಂಬ ಗುರಿ ಹೊಂದಿದ್ದಾಳೆ. ಸಂಸ್ಥೆಯ ಅಧ್ಯಕ್ಷ ಶ್ರೀ ಮುರಘೇಂದ್ರ ಮಹಾಸ್ವಾಮೀಜಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ, ಗೌರವಿಸುವುದರ ಜೊತೆಗೆ ವಿದ್ಯಾರ್ಥಿನಿಯ ಮುಂದಿನ ಭವಿಷ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.