ಸಾರಾಂಶ
ಗಂಗೊಓಳ್ಳಿ ಅನುದಾನಿತ ಶಾಲೆಯೊಂದರಲ್ಲಿ ಕ್ರಿಸ್‌ಮಸ್ ಆಚರಣೆ ವೇಳೆ ಮಕ್ಕಳಿಗೆ ಕೇಸರಿ ಮುಂಡಾಸು ಧರಿಸಿ ನೃತ್ಯ ರೂಪಕವೊಮದನ್ನು ಪ್ರದರ್ಶಿಸಿದ್ದು, ಇದು ಹಿಂದೂಗಳ ಭಾವಣೆಗೆ ಧಕ್ಕೆ ತಂದಿದೆ. ಆದ್ದರಿಂದ ಶಾಲಾ ಆಡಳಿತ ಕ್ಷಮೆ ಯಾಚಿಸಬೇಕೆಂದು ಆಗ್ರಹ.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಗಂಗೊಳ್ಳಿಯ ಖಾಸಗಿ ಅನುದಾನಿತ ಪ್ರೌಢ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಯ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ನೃತ್ಯರೂಪಕವೊಂದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.ಡಿ.22ರಂದು ಶಾಲೆಯ ಸಭಾಂಗಣದಲ್ಲಿ ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ 7 ನಿಮಿಷಗಳ ಕಾಲ ನಡೆದ ನೃತ್ಯ ರೂಪಕವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ನೃತ್ಯ ರೂಪಕದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಶಾಲಾ ಆಡಳಿತ ಮಂಡಳಿ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.* ಏನಿದು ನೃತ್ಯರೂಪಕ ?
ಈ ನೃತ್ಯ ರೂಪಕದಲ್ಲಿ ದೇವರಿಂದ ದೂರವಾದರು.. ಬಲು ದೂರವಾದರು.. ಎದ್ದು ದಂಗೆ ಎದ್ದರು... ಎನ್ನುವ ಗೀತೆಗೆ ಮೂವರು ಮಕ್ಕಳು ಕೇಸರಿ ಮುಂಡಾಸು ಧರಿಸಿ ನೃತ್ಯ ಮಾಡಿದ್ದರು. ಇಲ್ಲಿ ಕೇಸರಿ ಬಟ್ಟೆ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಕೇಸರಿ ಬಟ್ಟೆ ಬದಲು ಕ್ರಾಸ್ ಹಾಕಿ ಹೊಡೆದಾಡಿ ಎಂದೆಲ್ಲ ಸಂದೇಶ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.ಪ್ರೌಢಶಾಲೆಯಲ್ಲಿ ಕ್ರಿಸ್ಮಸ್ ಹಿನ್ನೆಲೆ ನಡೆದ ನೃತ್ಯ ರೂಪಕ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ. ಈಗ ವಿರೋಧ ವ್ಯಕ್ತವಾದ ಮೇಲೆ, ವಿದ್ಯಾರ್ಥಿಗಳ ಮನೆಗೆ ಕರೆ ಮಾಡಿ ಬಿಳಿ ಶಾಲು ತರಲು ಹೇಳಿದ್ದೇವೆ ಎಂದು ಹೇಳುವಂತೆ ಒತ್ತಾಯಿಸುತ್ತಿದ್ದಾರೆ. ನಾವು ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಶಾಲಾಡಳಿತ ಮಂಡಳಿಯ ಈ ವರ್ತನೆ ಸಹಿಸಲ್ಲ. ಆಡಳಿತ ಮಂಡಳಿ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಕೈಗೆತ್ತಿಕೊಳ್ಳುತ್ತೇವೆ.
। ನವೀನ್ ಗಂಗೊಳ್ಳಿ, ಹಿಂಜಾವೇ ಮುಖಂಡ