ಗ್ಯಾಂಗ್ ರೇಪ್ ಪ್ರಕರಣ, ಠಾಣೆ ಮುಂದೆ ಪ್ರತಿಭಟನೆ

| Published : Mar 11 2025, 12:45 AM IST

ಸಾರಾಂಶ

ಅಂಜನಾದ್ರಿ ಪರ್ವತದಂತಹ ಒಂದು ವಿಶ್ವವಿಖ್ಯಾತ ಸ್ಥಳಗಳ ಅಕ್ಕಪಕ್ಕ ಇರುವ ರೆಸಾರ್ಟ್‌ಗಳಲ್ಲಿ ವಿದೇಶಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಂಗಾಪುರ, ಆನೆಗೊಂದಿ, ಸಾಣಾಪುರ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕೆಲವು ಅಕ್ರಮ ರೆಸಾರ್ಟ್‌ಗಳು ತಲೆಎತ್ತಿವೆ.

ಗಂಗಾವತಿ:

ತಾಲೂಕಿನ ಸಾಣಾಪುರ ಗ್ರಾಮದ ಬಳಿ ವಿದೇಶಿ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ಗ್ಯಾಂಗ್ ರೇಪ್ ಖಂಡಿಸಿ ಕರವೇ ಕಾರ್ಯಕರ್ತರು ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಅಂಜನಾದ್ರಿ ಪರ್ವತದಂತಹ ಒಂದು ವಿಶ್ವವಿಖ್ಯಾತ ಸ್ಥಳಗಳ ಅಕ್ಕಪಕ್ಕ ಇರುವ ರೆಸಾರ್ಟ್‌ಗಳಲ್ಲಿ ವಿದೇಶಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಂಗಾಪುರ, ಆನೆಗೊಂದಿ, ಸಾಣಾಪುರ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕೆಲವು ಅಕ್ರಮ ರೆಸಾರ್ಟ್‌ಗಳು ತಲೆಎತ್ತಿವೆ. ಅನೈತಿಕ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಎರಡು-ಮೂರು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲಾಡಳಿತ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಿತ್ತು. ಈ ಭಾಗದಲ್ಲಿ ಅಕ್ರಮ ರೆಸಾರ್ಟ್‌ಗಳ ಬದಲಾಗಿ ಹೋಂಸ್ಟೇ ನೆಪದಲ್ಲಿ ಮತ್ತೆ ಅನೈತಿಕ ಚಟುವಟಿಕೆ ಆರಂಭಗೊಂಡಿದೆ ಎಂದು ದೂರಿದರು.

ಸಾಣಾಪುರ ಘಟನೆ ಕಿಷ್ಕಿಂದಾ ನಗರಕ್ಕೆ ಕಪ್ಪುಚುಕ್ಕಿಯಾಗಿದೆ. ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಾರತಿ ಅಗಳೂರ, ಈರಮ್ಮ , ರಾಜೇಶ್ವರಿ, ವಿಜಯಲಕ್ಷ್ಮಿ, ಮುತ್ತು ಇಳಿಗೇರ, ಗ್ರಾಮ ಘಟಕ ಅಧ್ಯಕ್ಷ ಬಸವರಾಜ ನಾಯಕ, ತಾಲೂಕು ಅಧ್ಯಕ್ಷ ಕೃಷ್ಣ ಅಗಲೂರು, ಬಾಷಾ ಸಂಗಾಪುರ, ಯಲ್ಲಮ್ಮ, ಮೋಹನ ಬಾಬು, ಶಿವಾನಂದ, ಧನರಾಜ, ಕೃಷ್ಣ ಚಂದ್ರಗಿರಿ, ಪುಂಡಲೀಕ, ವೆಂಕಟೇಶ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.