ಸಾರಾಂಶ
ಹಿಂದೂ ಮಹಾಗಣಪತಿ ಭಗವಾಧ್ವಜ ಹರಾಜು ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದ್ದು ಈ ಬಾರಿ ಅತಿ ಹೆಚ್ಚು ಮೊತ್ತಕ್ಕೆ ಕೂಗಿ ಪಡೆಯಲಾಯಿತು. ಹಿಂದೂ ಮಹಾಗಣಪತಿ ಉತ್ಸವದ ಶೋಭಾಯಾತ್ರೆಗೂ ಮೊದಲು ಭಗವಾಧ್ವಜ, ಹೂವಿನ ಹಾರ ಹಾಗೂ ತಿರುಪತಿ ದೇವಸ್ಥಾನದ ಮಾದರಿ ಪ್ರತಿಕೃತಿ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಚಿತ್ರದುರ್ಗ: ಹಿಂದೂ ಮಹಾಗಣಪತಿ ಭಗವಾಧ್ವಜ ಹರಾಜು ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದ್ದು ಈ ಬಾರಿ ಅತಿ ಹೆಚ್ಚು ಮೊತ್ತಕ್ಕೆ ಕೂಗಿ ಪಡೆಯಲಾಯಿತು. ಹಿಂದೂ ಮಹಾಗಣಪತಿ ಉತ್ಸವದ ಶೋಭಾಯಾತ್ರೆಗೂ ಮೊದಲು ಭಗವಾಧ್ವಜ, ಹೂವಿನ ಹಾರ ಹಾಗೂ ತಿರುಪತಿ ದೇವಸ್ಥಾನದ ಮಾದರಿ ಪ್ರತಿಕೃತಿ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಭಗವಾಧ್ವಜವನ್ನು ಬಿಜೆಪಿ ಮುಖಂಡ ಹನುಮಂತೇಗೌಡ 6 ಲಕ್ಷ ರು.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು. ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯನ್ನು ವಜ್ರ ಮಹೇಶ್ 5.25 ಲಕ್ಷ ರು., ಗಣಪತಿಯ ಫಲಾಹಾರವನ್ನು ಐಶ್ವರ್ಯಾ ಗ್ರೂಪ್ ಕಿರಣ್ ಕುಮಾರ್ 1.25 ಲಕ್ಷ ರು., ಕೈಯಲ್ಲಿ ರಚಿಸಿರುವ ಗಣಪತಿ ಕಲಾಕೃತಿಯನ್ನು ಮಂಜುನಾಥ್ 1.05 ಲಕ್ಷ ರು. ಹಾಗೂ ಗಣಪತಿಯ ಹೂವಿನ ಹಾರವನ್ನು ಚಿತ್ರಹಳ್ಳಿ ಲವಕುಮಾರ್ 1 ಲಕ್ಷ ರು.ಗೆ ಹರಾಜಿನಲ್ಲಿ ಪಡೆದುಕೊಂಡರು.