ಕನ್ನಡಪ್ರಭ ವಾರ್ತೆ ಬೇಲೂರುವಿಶ್ವವಿಖ್ಯಾತ ಪ್ರವಾಸಿ ತಾಣ ಬೇಲೂರಿನ ಬಸ್ ನಿಲ್ದಾಣದ ರಸ್ತೆ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ರಸ್ತೆಯ ಎರಡು ಬದಿಯ ಚರಂಡಿಗಳು ಕಸ ಮತ್ತು ಕೊಳೆತ ಹಣ್ಣು ತರಕಾರಿಗಳಿಂದ ತುಂಬಿ ಗಬ್ಬು ನಾರುತ್ತಿದೆ.ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಹಣ್ಣು ತರಕಾರಿ ವ್ಯಾಪಾರ ಮಾಡುವ ಫೂಟ್ಪಾತ್ ವ್ಯಾಪಾರಿಗಳು ಕೊಳೆತ ತರಕಾರಿಯ ಉಳಿದ ತರಕಾರಿಗಳನ್ನು ಚರಂಡಿ ಒಳಗೆ ಹಾಕುತ್ತಿದ್ದು ಚರಂಡಿಯಲ್ಲಿ ಕೊಳೆತು ದುರ್ನಾತ ಬೀರುತ್ತದೆ. ಇನ್ನು ಮಳೆ ಬಂದ ಸಂದರ್ಭದಲ್ಲಿ ನೀರು ಹರಿದು ತ್ಯಾಜ್ಯದ ವಸ್ತುಗಳು ಕೊಚ್ಚಿಕೊಂಡು ಹೋಗದೆ ಅಲ್ಲಿಯೇ ಕಟ್ಟಿ ಹರಿಯುವ ತ್ಯಾಜ್ಯದ ನೀರು ಕೂಡ ರಸ್ತೆಗೆ ಬರುತ್ತಿದೆ. ದುರ್ವಾಸನೆಯಿಂದ ಪ್ರವಾಸಿಗರು, ಭಕ್ತರು, ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ.ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಹಾರ ಪ್ಲಾಸ್ಟಿಕ್ ಇತರೆ ಕಸದಿಂದ ತುಂಬಿಹೋಗಿ ಚರಂಡಿ ಭರ್ತಿಯಾಗಿದೆ. ಇದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇಷ್ಟಾದರೂ ಸಂಬಂಧಪಟ್ಟ ಪುರಸಭೆ ಸ್ವಚ್ಛತೆಗೆ ಮುಂದಾಗಿಲ್ಲ. ಇನ್ನು ದೇವಸ್ಥಾನದ ರಸ್ತೆಯ ಎರಡೂ ಬದಿಯ ಚರಂಡಿಗಳು ದಶಕಗಳೇ ಕಳೆದರೂ ಸ್ವಚ್ಛತೆಯ ಭಾಗ್ಯ ದೊರೆತಿಲ್ಲ. ಮೇ ತಿಂಗಳ ಕೊನೆಯ ವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ದೇವಸ್ಥಾನದ ರಸ್ತೆ , ಪ್ಲಾಸ್ಟಿಕ್, ಖಾಲಿ ಬಾಟಲು ಕಸಗಳಿಂದ ಸಂಪೂರ್ಣ ಭರ್ತಿಯಾಗಿದ್ದು ಮಳೆಯ ನೀರು ಚರಂಡಿಯಲ್ಲಿ ಹರಿಯದೆ ರಸ್ತೆ ಮೇಲೆ ಹರಿಯುತ್ತಿದ್ದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಪುರಸಭೆ ಚರಂಡಿ ಸ್ವಚ್ಛತೆಗೆ ಮುಂದಾಗುತ್ತಾರೋ ಕಾದು ನೋಡಬೇಕಿದೆ.
ಚನ್ನಕೇಶವ ಸ್ವಾಮಿ ದೇಗುಲದ ರಸ್ತೆಯ ಚರಂಡಿಗಳಲ್ಲಿ ಕಸದ ರಾಶಿ
ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ರಸ್ತೆಯ ಎರಡು ಬದಿಯ ಚರಂಡಿಗಳು ಕಸ ಮತ್ತು ಕೊಳೆತ ಹಣ್ಣು ತರಕಾರಿಗಳಿಂದ ತುಂಬಿ ಗಬ್ಬು ನಾರುತ್ತಿದೆ. ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಹಣ್ಣು ತರಕಾರಿ ವ್ಯಾಪಾರ ಮಾಡುವ ಫೂಟ್ಪಾತ್ ವ್ಯಾಪಾರಿಗಳು ಕೊಳೆತ ತರಕಾರಿಯ ಉಳಿದ ತರಕಾರಿಗಳನ್ನು ಚರಂಡಿ ಒಳಗೆ ಹಾಕುತ್ತಿದ್ದು ಚರಂಡಿಯಲ್ಲಿ ಕೊಳೆತು ದುರ್ನಾತ ಬೀರುತ್ತದೆ. ಇನ್ನು ಮಳೆ ಬಂದ ಸಂದರ್ಭದಲ್ಲಿ ನೀರು ಹರಿದು ತ್ಯಾಜ್ಯದ ವಸ್ತುಗಳು ಕೊಚ್ಚಿಕೊಂಡು ಹೋಗದೆ ಅಲ್ಲಿಯೇ ಕಟ್ಟಿ ಹರಿಯುವ ತ್ಯಾಜ್ಯದ ನೀರು ಕೂಡ ರಸ್ತೆಗೆ ಬರುತ್ತಿದೆ. ದುರ್ವಾಸನೆಯಿಂದ ಪ್ರವಾಸಿಗರು, ಭಕ್ತರು, ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.