ತಾಲೂಕಿನ ಸಾಣೂರು ಗ್ರಾಮದ ಮುದ್ದಣ್ಣ ನಗರದಲ್ಲಿ ಗುರುವಾರ ತಡರಾತ್ರಿ 1.30ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಸಂಪೂರ್ಣವಾಗಿ ಹಾನಿಗೀಡಾದ ಘಟನೆ ಸಂಭವಿಸಿದೆ.
ಕಾರ್ಕಳ: ತಾಲೂಕಿನ ಸಾಣೂರು ಗ್ರಾಮದ ಮುದ್ದಣ್ಣ ನಗರದಲ್ಲಿ ಗುರುವಾರ ತಡರಾತ್ರಿ 1.30ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಸಂಪೂರ್ಣವಾಗಿ ಹಾನಿಗೀಡಾದ ಘಟನೆ ಸಂಭವಿಸಿದೆ.
ಮುದ್ದಣ ನಗರದ ನಿವಾಸಿ ವಾರಿಜಾ ಅವರ ಮನೆಯ ಅಡುಗೆ ಕೋಣೆಯ ಹೊರ ಭಾಗದಲ್ಲಿರುವ ಕೊಠಡಿಯಲ್ಲಿ ಇಡಲಾಗಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ಮನೆಯ ಗೋಡೆ ಕುಸಿದು ಬಿದ್ದಿದೆ. ಒಳಗಿದ್ದ ಪೀಠೋಪಕರಣ, ವಾಷಿಂಗ್ ಮೆಷಿನ್, ಪಾತ್ರೆ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.ಅವಘಡ ಸಂಭವಿಸಿದ ಸಮಯದಲ್ಲಿ ಮನೆಯಲ್ಲಿದ್ದವರು ಸುರಕ್ಷಿತವಾಗಿ ಹೊರ ಬಂದಿರುವುದರಿಂದ ಯಾವುದೇ ಪ್ರಾಣ ಹಾನಿ ಅಥವಾ ಗಾಯ ಸಂಭವಿಸಿಲ್ಲ. ಘಟನೆಯಲ್ಲಿ ಸುಮಾರು 2 ಲಕ್ಷ ರು. ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.