ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದು ಕೊಟ್ಟರೆ ಸಿಗುತ್ತದೆ ಉಚಿತ ಆಹಾರ!ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಆಫರ್ ಮಂಗಳೂರಿನ ಫುಡ್ ಶಾಪ್ ಇಂಥದ್ದೊಂದು ಆಫರ್ ಪ್ರಕಟಿಸಿದೆ.
ಮಂಗಳೂರು: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದು ಕೊಟ್ಟರೆ ಸಿಗುತ್ತದೆ ಉಚಿತ ಆಹಾರ!ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಆಫರ್ ಮಂಗಳೂರಿನ ಫುಡ್ ಶಾಪ್ ಇಂಥದ್ದೊಂದು ಆಫರ್ ಪ್ರಕಟಿಸಿದೆ.
ಮಂಗಳೂರಿನ ಹೋಟೆಲ್ ಉದ್ಯಮ ಸಂಸ್ಥೆಯೊಂದು ಸ್ಪೆಷಲ್ ಆಫರ್ ಪ್ರಕಟಿಸಿದ್ದು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿದವರಿಗೆ ಉಚಿತವಾಗಿ ಆಹಾರ ನೀಡಲಾಗುವುದು ಎಂಬ ಆಮಿಷ ಒಡ್ಡಲಾಗಿದೆ.ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊಟ್ಟರೆ 50 ಪ್ಲೇಟ್ ಮೊಮೊಸ್ ಉಚಿತ, ಇನ್ನೊಂದು ಸಂಸ್ಥೆಯಿಂದ 25 ರೋಲ್ ಉಚಿತ ಆಹಾರದ ಆಫರ್ ನೀಡಿದ್ದಾರೆ. ಮಂಗಳೂರಿನ ವೋಕ್ ಅಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆ ಈ ಆಫರ್ ನೀಡಿದೆ. ಈ ಸಂಸ್ಥೆ ಬೆಂಗಳೂರು ಸೇರಿದಂತೆ ಹಲವು ಕಡೆ ಔಟ್ಲೆಟ್ ಹೊಂದಿದೆ. ಹತ್ತಿರದ ಯಾವುದೇ ಔಟ್ಲೆಟ್‌ಗೆ ತೆರಳಿದರೂ ಈ ಆಫರ್ ಸಿಗಲಿದೆ. ಗ್ಯಾಸ್ ಅಭಾವ ಹಿನ್ನೆಲೆಯಲ್ಲಿ ಈ ಸಂಸ್ಥೆ ಆಫರ್ ಮೊರೆ ಹೋಗಿದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಆಫರ್ ಬಗ್ಗೆ ಸಂಸ್ಥೆ ಪೋಸ್ಟ್ ಹಾಕಿದೆ. ಗ್ಯಾಸ್ ಅಭಾವದ ಬೆನ್ನಲ್ಲೇ ಈ ಆಫರ್ ಘೋಷಣೆ ಮಾಡಿದೆ. ಆಫರ್‌ನ ಕಾನೂನಾತ್ಮಕ ಸಮಸ್ಯೆ ಬಗ್ಗೆ ಅರಿವಿದ್ದರೂ ಸಾಮಾಜಿಕ ತಾಣಗಳಲ್ಲಿ ಆಫರ್ ವೈರಲ್ ಆಗಿದೆ.
