ಸಾರಾಂಶ
ಚಾರ್ಮಡಿ, ಸಂಪಾಜೆ ಮೂಲಕ ಸಂಚರಿಸಲು ಡಿಸಿ ಆದೇಶ
ಕನ್ನಡಪ್ರಭ ವಾರ್ತೆ ಸಕಲೇಶಪುರರಾಷ್ಟ್ರೀಯ ಹೆದ್ದಾರಿ ೭೫ ರ ಶಿರಾಡಿ ಘಾಟ್‌ನ ಡಬಲ್ ಟರ್ನ್ ಸಮೀಪ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿದೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ೭೫ ರ ಸಂಚಾರವನ್ನು ೨೪ ಗಂಟೆಗಳ ಕಾಲ ನಿಷೇಧಿಸಲಾಗಿದೆ.
ಮಂಗಳವಾರ ಮಧ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಸಮೀಪ ಮಗುಚಿಬಿದ್ದಿರುವ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೊರಿಕೆಯಾಗುತ್ತಿತ್ತು. ಸ್ಥಳಕ್ಕೆ ತೆರಳಿದ ಗ್ರಾಮಾಂತರ ಠಾಣೆ ಪೋಲಿಸರು ಅಪಾಯ ಸಂಭವಿಸುವ ಸಾದ್ಯತೆ ಹೆಚ್ಚಿರುವುದರಿಂದ ಮಂಗಳವಾರ ಮದ್ಯರಾತ್ರಿಯಿಂದಲೇ ಹೆದ್ದಾರಿ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು ಗುರುವಾರ ಮುಂಜಾನೆವರೆಗೆ ಸಂಚಾರಕ್ಕೆ ನಿಷೇಧವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ವಾಹನಗಳು ಚಾರ್ಮಡಿಘಾಟ್ ಹಾಗೂ ಮಡಿಕೇರಿ-ಸಂಪಾಜೆ ಮಾರ್ಗದ ಮೂಲಕ ತೆರಳುವಂತೆ ಸೂಚಿಸಲಾಗಿದೆ.ಭಾರಿ ಅಪಾಯ: ಶಿರಾಡಿಘಾಟ್ ನಡುವೆ ಅನಿಲ ಸೊರಿಕೆಯಾಗುತ್ತಿದ್ದು ಟ್ಯಾಂಕರ್ ಬ್ಲಾಸ್ಟ್ ಆಗುವ ಸಾದ್ಯತೆ ಹೆಚ್ಚಿದೆ. ಬ್ಲಾಸ್ಟ್ ಆದರೆ ಸಮೀಪದ ಅರಣ್ಯಕ್ಕೆ ಬೆಂಕಿ ಹಬ್ಬಲಿದೆ ಎನ್ನಲಾಗಿದೆ. ಸಕಲೇಶಪುರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವಸಕಲೇಶಪುರ: ಕುಡಿಯುವ ನೀರು ಹಾಗೂ ಜಾನುವಾರು ಮೇವಿಗೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಶಾಸಕ ಸಿಮೆಟ್ ಮಂಜು ಹೇಳಿದರು.ಬುಧವಾರ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಟಾಸ್ಕ್ ಪೋರ್ಸ್ (ಬರ ನಿರ್ವಹಣೆ) ಸಭೆಯಲ್ಲಿ ಮಾತನಾಡಿ, ಕಳೆದ ಸಾಲಿನಲ್ಲಿ ಸರಾಸರಿ ಮಳೆಯಾಗದಿರುವುದು ಮಲೆನಾಡಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೆ ಕುಡಿಯುವ ನೀರಿನ ಸಮಸ್ಯೆ ಆರಂಭಗೊಳ್ಳಲು ಕಾರಣವಾಗಿದೆ. ಈಗಾಗಲೇ ೧೮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗ ಬಹುದಾದ ೫೪ ಗ್ರಾಮಗಳನ್ನು ಗುರುತಿಸಲಾಗಿದ್ದು ಇಂತಹ ಗ್ರಾಮಗಳಿಗೆ ಶೀಘ್ರವಾಗಿ ಕೊಳವೆ ಬಾವಿ ಕೊರೆಯಲು ಚಿಂತಿಸಲಾಗಿದೆ. ಸಾದ್ಯವಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಸರಾಭರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂದರು. ತಾಲೂಕಿನ ೫೧೦೦ ರೈತರಿಗೆ ಅತಿವೃಷ್ಟಿ ಹಾನಿಯ ೮೬ ಲಕ್ಷ ರು. ಮೊದಲ ಕಂತಿನ ಪರಿಹಾರದ ಹಣ ನೀಡಲಾಗಿದೆ. ತಾಲೂಕಿನಲ್ಲಿರುವ ೩೧೮೮೨ ಜಾನುವಾರಿಗೆ ಮುಂದಿನ ೯೬ ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹವಿದೆ. ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಹುದಾದ ಗ್ರಾಮಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಲು ಅವಕಾಶವಿದೆ ಎಂದು ಪಶುಪಾಲನ ಇಲಾಖೆಯ ಜವರಯ್ಯ ಹೇಳಿದರು. ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಆದಿತ್ಯ ಉಪಸ್ಥಿತರಿದ್ದರು.ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದು ಅನಿಲ ಸೋರಿಕೆಯಾಗಿರುವುದು.