ಸಾರಾಂಶ
ನಾಡಿನಾದ್ಯಂತ ಶನಿವಾರ ಗೌರಿ- ಗಣೇಶ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಹೊನ್ನಾಳಿ ನಿವಾಸದಲ್ಲಿ ಕೂಡ ಗೌರಿ ಮತ್ತು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಕುಟುಂಬದವರು ವಿಶೇಷ ಪೂಜೆ, ನೈವೈದ್ಯಗಳನ್ನು ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ನಾಡಿನಾದ್ಯಂತ ಶನಿವಾರ ಗೌರಿ- ಗಣೇಶ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಹೊನ್ನಾಳಿ ನಿವಾಸದಲ್ಲಿ ಕೂಡ ಗೌರಿ ಮತ್ತು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಕುಟುಂಬದವರು ವಿಶೇಷ ಪೂಜೆ, ನೈವೈದ್ಯಗಳನ್ನು ಸಮರ್ಪಿಸಿದರು.ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಈ ಸಂದರ್ಭ ಮಾತನಾಡಿ, ಗೌರಿ ಗಣೇಶ ಹಬ್ಬ ಕುಟುಂಬದವರು, ಹಿಂದೂ ಸಮಾಜದವರು ಒಟ್ಟಿಗೆ ಸೇರಿ ಸೌಹಾರ್ದದಿಂದ ಹಬ್ಬ ಆಚರಿಸುವ ಮೂಲಕ ನಾಡಿನ ಸಂಸ್ಕೃತಿ, ಪರಂಪರೆಗಳನ್ನು ಪ್ರತಿಬಿಂಬಿಸುವ ಕೆಲಸ ಮಾಡಬೇಕು. ಈ ಹಬ್ಬ ಆಚರಣೆ ಮೂಲಕ ಎಲ್ಲರೂ ಒಗ್ಗಟ್ಟಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು.
ಗಣೇಶ ಹಬ್ಬ ಆಚರಣೆ ವೇಳೆ ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲರೂ ಪ್ರೀತಿ- ವಿಶ್ವಾಸಗಳಿಂದ ವರ್ತಿಸಬೇಕು. ಗೌರಿ, ಗಣೇಶ ಮೂರ್ತಿಗಳ ವಿಸರ್ಜನೆ ವೇಳೆಯಲ್ಲಿ ಎಲ್ಲರೂ ಅತ್ಯಂತ ಜಾಗರೂಕರಾಗಿ, ಗಂಗೆಯಲ್ಲಿ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ಹೇಳಿದರು.ಹಬ್ಬದ ಅಂಗವಾಗಿ ಸಹೋದರರು, ಸಹೋದರಿಯರು ಹಾಗೂ ಕುಟುಂಬದವರು ಸೇರಿ ವಿಜೃಂಭಣೆಯಿಂದ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ನಾಡಿನ ಸಮಸ್ತ ಜನರಿಗೆ ಶುಭಾಷಯ ಕೋರುತ್ತೇನೆ. ಎಲ್ಲರಿಗೂ ಸುಖ- ಶಾಂತಿಯನ್ನು ಹಾಗೂ ಸಮೃದ್ಧಿಯನ್ನು ತಾಯಿ ಗೌರಿ ಮತ್ತು ವಿಘ್ನನಿವಾರಕ ಗಣೇಶ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ರೇಣುಕಾಚಾರ್ಯ ಈ ಸಂದರ್ಭ ಹೇಳಿದರು.
- - - (* ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)-8ಎಚ್.ಎಲ್.ಐ2:ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಹೊನ್ನಾಳಿಯ ನಿವಾಸದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಕುಟುಂಬದವರೆಲ್ಲರೂ ಸೇರಿ ಪೂಜೆ ಸಲ್ಲಿಸಿದರು.