ಕೊಪ್ಪಳದ ಗವಿಸಿದ್ದೇಶ್ವರ ಉತ್ಸವ ಮೂರ್ತಿ ಮೆರವಣಿಗೆ

| Published : Jan 26 2024, 01:45 AM IST

ಕೊಪ್ಪಳದ ಗವಿಸಿದ್ದೇಶ್ವರ ಉತ್ಸವ ಮೂರ್ತಿ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಂದಿಕೋಲು, ಡೊಳ್ಳು, ಭಜನೆ, ಭಾಜಾ-ಭಜಂತ್ರಿ, ಪಂಜು, ಇಲಾಲು ಹಾಗೂ ನಾಡಿನ ವೈಭವವನ್ನು ಬಿಂಬಿಸುವ ಅನೇಕ ಜಾನಪದ ವಿಶೇಷ ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ಮೆರಗು ತಂದವು.

ಕೊಪ್ಪಳ: ನಗರದ ಗವಿಸಿದ್ಧೇಶ್ವರ ಜಾತ್ರಾ ಅಂಗವಾಗಿ ಉತ್ಸವ ಮೂರ್ತಿಯ ಮೆರವಣಿಗೆಯು ಗುರುವಾರ ಸಂಜೆ 5 ಗಂಟೆಗೆ ಆರಂಭಗೊಂಡು ಗವಿಮಠ ತಲುಪಿತು.ಜಡೇಗೌಡರ ಮನೆಯಿಂದ ಪ್ರಾರಂಭಗೊಂಡು ಕೋಟೆ ಮಠದಿಂದ ಪಲ್ಲಕ್ಕಿ ಹೊರಟು ಗಡಿಯಾರ ಕಂಬ ವೃತ್ತದಲ್ಲಿ, ಮುದ್ದಾಬಳ್ಳಿಯಿಂದ ಬರುವ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯೂ ಹಲಗೇರಿಗ್ರಾಮದ ಭಕ್ತ ಲಿಂ.ವೀರನಗೌಡ ಪಾಟೀಲ ಮತ್ತು ಧರ್ಮಪತ್ನಿ ಗಿರಿಜಮ್ಮ ಪಾಟೀಲರ ಮನೆಯಿಂದ ಬರುವ ಕಳಸ ಹಾಗೂ ಮಂಗಳಾಪುರದಿಂದ ಬರುವ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು ಜವಾಹರ್ ರಸ್ತೆಯಲ್ಲಿ ಕೂಡಿಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ಕವಲೂರು ಓಣಿ, ಸಿದ್ಧೇಶ್ವರ ವೃತ್ತದ ಗವಿಶ್ರೀ ನಗರದ 3ನೇ ಮುಖ್ಯರಸ್ತೆ ಮೂಲಕ ಭವ್ಯ ಮೆರವಣಿಗೆ ಬಹಳ ಸಡಗರ, ಸಂಭ್ರಮದಿಂದ ಜರುಗಿತು.ಇದರಲ್ಲಿ ನಂದಿಕೋಲು, ಡೊಳ್ಳು, ಭಜನೆ, ಭಾಜಾ-ಭಜಂತ್ರಿ, ಪಂಜು, ಇಲಾಲು ಹಾಗೂ ನಾಡಿನ ವೈಭವವನ್ನು ಬಿಂಬಿಸುವ ಅನೇಕ ಜಾನಪದ ವಿಶೇಷ ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ಮೆರಗು ತಂದವು. ಈ ಮೆರವಣಿಗೆಯಲ್ಲಿ ಸಹಸ್ರಾರು ಸದ್ಭಕ್ತರು ಹಾಗೂ ಗೌಡರ ಮನೆತನದವರು ಪಾಲ್ಗೊಂಡಿದ್ದರು.