ಗಾಯತ್ರಿ ಸಮೂಹದಿಂದ ಜಪಾನುಷ್ಠಾನ

| Published : Jan 12 2024, 01:46 AM IST

ಸಾರಾಂಶ

ಲೋಕ ಕಲ್ಯಾಣಕ್ಕಾಗಿ ೨೦೦೩ ರಿಂದ ೩೦ ವರ್ಷಗಳ ಕಾಲ ಅವ್ಯಾಹತವಾಗಿ ನಡೆಯುತ್ತಿರುವ ಸಾಮೂಹಿಕ ಗಾಯತ್ರಿ ಜಪಾನುಷ್ಠಾನ ಕೇವಲ ಕೋವಿಡ್ ಸಂದರ್ಭದಲ್ಲಿ ಮಾತ್ರ ಸ್ಥಗಿತಗೊಳಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಮಹಾಲಕ್ಷ್ಮೀ ದೇವಾಲಯದ ಸಮೀಪದ ಶ್ರೀ ರಾಘವೇಂದ್ರರಾವ್ ಚಾಳ್‌ನ ಶ್ರೀ ಕೃಷ್ಣಾಂಜನೇಯ ದೇವಸ್ಥಾನದ ಆವರಣದಲ್ಲಿ ಗಾಯತ್ರಿ ಸಮೂಹದಿಂದ ಪ್ರತಿ ತಿಂಗಳು ನಡೆಸುವ ಜಪಾನುಷ್ಠಾನ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆ.೬-೪೫ ಗಂಟೆಗೆ ಆರಂಭಗೊಂಡ ಜಪಾನುಷ್ಠಾನ ೮-೩೦ ಗಂಟೆಗೆ ಶಿಸ್ತಿನಿಂದ ಸಂಪನ್ನಗೊಂಡಿತು.

ಲೋಕ ಕಲ್ಯಾಣಕ್ಕಾಗಿ ೨೦೦೩ ರಿಂದ ೩೦ ವರ್ಷಗಳ ಕಾಲ ಅವ್ಯಾಹತವಾಗಿ ನಡೆಯುತ್ತಿರುವ ಸಾಮೂಹಿಕ ಗಾಯತ್ರಿ ಜಪಾನುಷ್ಠಾನ ಕೇವಲ ಕೋವಿಡ್ ಸಂದರ್ಭದಲ್ಲಿ ಮಾತ್ರ ಸ್ಥಗಿತಗೊಳಿಸಲಾಗಿತ್ತು. ವಿಶೇಷವೆಂದರೆ ೨೦೨೫ ರಲ್ಲಿ ಗಾಯತ್ರಿ ತಪೋಭೂಮಿ ತಡಸನಲ್ಲಿ ಜರುಗಲಿರುವ ಗಾಯತ್ರಿದೇವಿ ಪ್ರತಿಷ್ಠಾನದ ೨೫ನೇ ಬೆಳ್ಳಿ ಹಬ್ಬದ ಸಂಭ್ರಮಕ್ಕಾಗಿ ವಿಜಯಪುರದ ಭಕ್ತ ಸಮೂಹ ೨೫ ಲಕ್ಷ ಜಪ ಸಮರ್ಪಿಸಲು ಸಂಕಲ್ಪಿಸಿದ್ದರು. ಆದರೆ ಸೌಭಾಗ್ಯ ಎನ್ನುವಂತೆ ಈ ವರೆಗೆ ೪೦-೪೨ ಲಕ್ಷ ಜಪ ಅನುಷ್ಠಾನವಾಗಿದೆ ಎಂದು ಗಾಯತ್ರಿ ಸಮೂಹದ ಟ್ರಸ್ಟಿ ರಾಜು ಪದಕಿ ತಿಳಿಸಿದರು.

ಚಾಳ್ ನಿವಾಸಿ ಶ್ರೀಕೃಷ್ಣ ಪಡಗಾನೂರ, ಉಮೇಶ ಕುಲಕರ್ಣಿ, ವಿಜಯೇಂದ್ರ ದೇಶಪಾಂಡೆ ಮಾತನಾಡಿದರು. ನಿವೃತ್ತ ಉಪನ್ಯಾಸಕ ರಾಘವೇಂದ್ರ ಕುಲಕರ್ಣಿ ಸ್ವಸ್ಥ್ಯ ಆರೋಗ್ಯಕ್ಕೆ ಪೂರಕ ಸಲಹೆಗಳನ್ನು ನೀಡಿದರು. ಜಪಾನುಷ್ಠಾನದಲ್ಲಿ ಸುಮಾರು ೫೦-೬೦ ಗಾಯತ್ರಿ ಉಪಾಸಕರು ಸಾಧಕರು ಭಾಗವಹಿಸಿದ್ದರು.