ಸಾರಾಂಶ
ರಾಮನವಮಿ ಹಿನ್ನೆಲೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ನಗರದ ಪಿ.ಜೆ. ಬಡವಣೆಯ ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಆರಳಿಮರ ವೃತ್ತದಲ್ಲಿ ಹಿಂದೂ ಸಂಘಟನೆ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ, ಪ್ರಸಾದ ವಿತರಣೆಗೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ, ದಾವಣಗೆರೆ
ರಾಮನವಮಿ ಹಿನ್ನೆಲೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ನಗರದ ಪಿ.ಜೆ. ಬಡವಣೆಯ ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.ಅನಂತರ ಆರಳಿಮರ ವೃತ್ತದಲ್ಲಿ ಹಿಂದೂ ಸಂಘಟನೆ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ, ಪ್ರಸಾದ ವಿತರಣೆಗೆ ಚಾಲನೆ ನೀಡಿದರು.
ಅಯೋಧ್ಯೆ ಶ್ರೀರಾಮನಿಗೆ ಭವ್ಯದೇವಾಲಯ ನಿರ್ಮಾಣ ಮಾಡಬೇಕು ಎಂಬುದು 500 ವರ್ಷಗಳ ಹೋರಾಟ. ಆ ಹೋರಾಟಕ್ಕೆ ಈಗ ಫಲ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೋಟ್ಯಂತರ ಭಾರತೀಯರು ಅದರ ರೂವಾರಿಗಳು ಎಂದ ಅವರು, ರಾಮ ನಾಮ ಜಪ ಮಾಡಿದರೆ ಜೀವನದಲ್ಲಿ ಭಯ ಎಂಬುವುದೇ ಇರುವುದಿಲ್ಲ ಎಂದರು.ಪಾಲಿಕೆ ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್, ಜಿ.ಎಸ್.ಅಶ್ವಿನಿ, ಸಹೋದರಿ ಪ್ರೇಮ, ಹಿಂದೂ ಸಂಘಟನೆಯ ಸತೀಶ್, ಹರೀಶ್, ಸಚಿನ್, ಬಿಜೆಪಿ ಮುಖಂಡರು, ಹಿಂದೂ ಸಂಘಟನೆ ಕಾರ್ಯಕರ್ತರು, ಶ್ರೀರಾಮ ಸೇನೆ ಸದಸ್ಯರು ಇದ್ದರು.
- - - -17ಕೆಡಿವಿಜಿ45ಃ:ದಾವಣಗೆರೆಯಲ್ಲಿಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅರಳಿಮರ ವೃತ್ತದಲ್ಲಿ ಹಿಂದೂ ಸಂಘಟನೆ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ವಿತರಣೆಗೆ ಚಾಲನೆ ನೀಡಿದರು.