ಶಿರಾಳಕೊಪ್ಪ-ಶಿಕಾರಿಪುರ ಮಧ್ಯದ ಟೋಲ್ ತೆರವಿಗೆ ಸಜ್ಜು

| Published : Aug 27 2024, 01:34 AM IST

ಶಿರಾಳಕೊಪ್ಪ-ಶಿಕಾರಿಪುರ ಮಧ್ಯದ ಟೋಲ್ ತೆರವಿಗೆ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ತಡಸದಿಂದ ಶಿವಮೊಗ್ಗ ರಾಜ್ಯ ಹೆದ್ದಾರಿ ಇದಾಗಿದ್ದು, ಶಿಕಾರಿಪುರ-ಶಿರಾಳಕೊಪ್ಪ ಮಧ್ಯೆ ಕುಟ್ರಳ್ಳಿ ಬಳಿ ಟೋಲ್ ಗೇಟ್ ಮಾಡಿ ಈ ಭಾಗದ ರೈತರಿಗೆ, ಕೂಲಿ ಕಾಮಿರ್ಕರಿಗೆ, ಸಣ್ಣಪುಟ್ಟ ಸಂತೆ ಮಾಡುವ ಜನರಿಗೆ ಹಾಗೂ ಸಾಮಾನ್ಯಜನರಿಗೆ ಇದರಿಂದ ತೀವ್ರ ತೊಂದರೆ

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಶಿರಾಳಕೊಪ್ಪ- ಶಿಕಾರಿಪುರ ಮಧ್ಯೆ ನಿಮಾರ್ಣಗೊಂಡ ಟೋಲ್ ಗೇಟ್‌ನಿಂದ ಸ್ಥಳೀಯರಿಗೆ ತೀವ್ರ ತೊಂದರೆ ಆಗುತಿದ್ದು, ತಕ್ಷಣ ಟೋಲ್ ರದ್ದು ಮಾಡಬೇಕು, ಇಲ್ಲವಾದರೆ ನಾವೇ ಕಿತ್ತುಹಾಕುತ್ತೇವೆ ಎಂದು ಟೋಲ್ ವಿರುದ್ಧ ಹೋರಾಟಕ್ಕೆ ಸ್ಥಳಿಯರು ಸಜ್ಜಾಗಿದ್ದಾರೆ.

ತಡಸದಿಂದ ಶಿವಮೊಗ್ಗ ರಾಜ್ಯ ಹೆದ್ದಾರಿ ಇದಾಗಿದ್ದು, ಶಿಕಾರಿಪುರ-ಶಿರಾಳಕೊಪ್ಪ ಮಧ್ಯೆ ಕುಟ್ರಳ್ಳಿ ಬಳಿ ಟೋಲ್ ಗೇಟ್ ಮಾಡಿ ಈ ಭಾಗದ ರೈತರಿಗೆ, ಕೂಲಿ ಕಾಮಿರ್ಕರಿಗೆ, ಸಣ್ಣಪುಟ್ಟ ಸಂತೆ ಮಾಡುವ ಜನರಿಗೆ ಹಾಗೂ ಸಾಮಾನ್ಯಜನರಿಗೆ ಇದರಿಂದ ತೀವ್ರ ತೊಂದರೆ ಆಗುತ್ತಿದ್ದು, ತಾಲೂಕಿನ ಹಾಗೂ ಪಕ್ಕದ ಸೊರಬದ ಜನರು ಹೋರಾಟ ಮಾಡಲು ಸಿದ್ಧರಾಗಿದ್ದು, ಅದಕ್ಕಾಗಿ ಸಮಿತಿಯೂ ರಚಿತವಾಗಿದೆ.

ಶಿರಾಳಕೊಪ್ಪ ಪಟ್ಟಣದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹೋರಾಟ ಕೈಗೆತ್ತಿಕೊಳ್ಳಲು ಟೋಲ್ ವಿರೋಧಿ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಶಿಕಾರಿಪುರದ ನ್ಯಾಯವಾದಿ ಶಿವರಾಜ್, ಸಂಚಾಲಕರಾಗಿ ಸೊರಬದ ನ್ಯಾಯವಾದಿ ವಿನಯ್ ಪಾಟೀಲ್ ಆಯ್ಕೆ ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಿರಾಳಕೊಪ್ಪದ ರೈತಸಂಘದ ಅಧ್ಯಕ್ಷ ನವೀದ್ ಆಯ್ಕೆಯಾಗಿದ್ದು, ೫ ಜನರನ್ನು ಉಪಾಧ್ಯಕ್ಷರನ್ನಾಗಿ, ೬ ಜನರನ್ನು ಸಹ ಕಾರ್ಯ ದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಸಭೆಯನ್ನು ಉದ್ದೇಶಿಸಿ ಸಮಿತಿ ಅಧ್ಯಕ್ಷ ಶಿವರಾಜ್ ಮಾತನಾಡಿ, ಇಲ್ಲಿ ಮಾಡಿರುವ ಟೋಲ್‌ನಿಂದ ಸ್ಥಳೀಯರಿಗೆ, ಅಕ್ಕಪಕ್ಕದ ರೈತರಿಗೆ, ರೋಗಿಗಳಿಗೆ ಹಾಗೂ ಸಾಮಾನ್ಯರಿಗೆ ದಿನನಿತ್ಯ ಓಡಾಟ ಮಾಡುವವರಿಗೆ ಆರ್ಥಿಕವಾಗಿ ತೀವ್ರ ತೊಂದರೆ ಆಗುತ್ತಿದೆ. ಇಂತಹ ಅವೈಜ್ಞಾನಿಕ ಟೋಲ್ ಗೇಟ್‌ ಕಿತ್ತೊಗಿಯಲೇ ಬೇಕಾಗಿದೆ. ಆದ್ದರಿಂದ ವಿವಿಧ ಸಂಘಟನೆಗಳು, ಸ್ಥಳೀಯರು ಈ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಹಿರಿಯರಾದ ಡಾ.ಮುರಘರಾಜ್, ರೈತ ಸಂಘದ ಮುಖಂಡ ಜಯಪ್ಪಗೌಡ, ರಾಜ್ಯ ರೈತಸಂಘದ ಜಿಲ್ಲಾ ಅಧ್ಯಕ್ಷ ಹಾಲಪ್ಪಪಗೌಡ, ಹಿರಿಯ ರೈತ ಮುಖಂಡ ಪುಟ್ಟನಗೌಡ, ಕೆಪಿಸಿಸಿ ಸದಸ್ಯ ಚಂದ್ರಣ್ಣ ಹಿರೇಜಂಬೂರು, ಬಿಜೆಪಿ ಮುಖಂಡ ರಟ್ಟಿಹಳ್ಳಿ ಲೋಕೇಶ್, ಹಾಗೂ ನೂರಾರು ರೈತರು ಭಾಗವಹಿಸಿದ್ದರು.