ಕೋಡ್ಕಣಿಯಲ್ಲಿ ಗೀತಾಪ್ರವಚನ ಮಾಲಿಕೆ

| Published : Nov 26 2024, 12:49 AM IST

ಸಾರಾಂಶ

ಪ್ರತಿಯೊಬ್ಬರೂ ಭಗವದ್ಗೀತೆಯ ಅರ್ಥ ಸಹಿತ ಪಠಣ ಮಾಡುವ ಮೂಲಕ ನೆಮ್ಮದಿಯ ಬದುಕು ಹೊಂದಬಹುದು.

ಕುಮಟಾ: ಭಗವದ್ಗೀತೆಯ ಜ್ಞಾನದಿಂದ ಮಾತ್ರ ಸ್ವರ್ಣಿಮ ಭಾರತದ ಕನಸು ನನಸಾಗಲು ಸಾಧ್ಯ ಎಂದು ದೀವಗಿಯ ಶ್ರೀಮದ್ಭಗವದ್ಗೀತಾ ಅಧ್ಯಯನ ಕೇಂದ್ರದ ಸಂಚಾಲಕಿ ಎ.ಆರ್. ಭಾರತಿ ತಿಳಿಸಿದರು.ತಾಲೂಕಿನ ಕೋಡ್ಕಣಿಯ ವಿಶ್ವಂಭರ ಮಹಾ ಸಿದ್ಧಿವಿನಾಯಕ ಸಭಾಭವನದಲ್ಲಿ ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಶ್ರೀಮದ್ಭಗವದ್ಗೀತಾ ಅಧ್ಯಯನ ಕೇಂದ್ರದ ವತಿಯಿಂದ ನಾಲ್ಕು ದಿನದ ಗೀತಾಪ್ರವಚನ ಮಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರವಚನ ಮಾಡಿದರು. ಪ್ರತಿಯೊಬ್ಬರೂ ಭಗವದ್ಗೀತೆಯ ಅರ್ಥ ಸಹಿತ ಪಠಣ ಮಾಡುವ ಮೂಲಕ ನೆಮ್ಮದಿಯ ಬದುಕು ಹೊಂದುವಂತೆ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಆರ್. ನಾಯ್ಕ, ಉಪಾಧ್ಯಕ್ಷ ಮುರ್ಕುಂಡಿ ಎಚ್. ನಾಯ್ಕ, ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಗಣಪತಿ ಪಟಗಾರ, ಉದ್ಯಮಿ ಮಾರುತಿ ಸಿ. ಆಚಾರಿ ಮಾತನಾಡಿ, ಗೀತಾ ಪ್ರವಚನದ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದರು.ವೇದಿಕೆಯಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಉಪಾಧ್ಯಕ್ಷ ಮಂಜುನಾಥ ಆರ್ ನಾಯ್ಕ, ಪಂಚಾಯಿತಿ ಸದಸ್ಯೆ ಕಲ್ಪನಾ ಎಂ. ನಾಯ್ಕ, ಶಶಿಹಿತ್ಲ ಅಂಬಿಗ ಸಮಾಜದ ಯಜಮಾನ ಗಿರೀಶ ಎಂ. ಅಂಬಿಗ, ಕೋಡ್ಕಣಿ ನಾಮಧಾರಿ ಸಮಾಜದ ಯಜಮಾನ ವೆಂಕಟ್ರಮಣ ಡಿ. ನಾಯ್ಕ, ಕೋಡ್ಕಣಿ ಪಟಗಾರ ಸಮಾಜದ ಯಜಮಾನ ಲಿಂಗಪ್ಪ ಡಿ. ಪಟಗಾರ, ಮಹಾ ಸಿದ್ಧಿವಿನಾಯಕ ದೇವಸ್ಥಾನ ಸಮಿತಿ ಸದಸ್ಯ ವೆಂಕಟೇಶ ಎನ್. ಅಂಬಿಗ ಉಪಸ್ಥಿತರಿದ್ದರು. ಶ್ರೀಮದ್ಭಗವದ್ಗೀತಾ ಕೇಂದ್ರದ ವಿದ್ಯಾರ್ಥಿನಿ ತುಳಸಿ ಪಿ. ಗೌಡ ಅವರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಅಂಬಿಗ ಸ್ವಾಗತಿಸಿ, ನಿರ್ವಹಿಸಿದರು. ರಾಜೇಶ ಅಂಬಿಗ, ಗಣಪತಿ ಆಚಾರಿ, ವಿನಾಯಕ ಮಡಿವಾಳ, ಬೀರಪ್ಪ ಎಸ್. ಅಂಬಿಗ ಇತರರು ಇದ್ದರು.ರಾಮಂದಿರದ ಕಾರ್ತಿಕ ದೀಪೋತ್ಸವ

ಗೋಕರ್ಣ: ಇಲ್ಲಿನ ಮುಖ್ಯ ಕಡಲತೀರದ ಬಳಿ ಇರುವ ಸೀತಾರಾಮ ಲಕ್ಷ್ಮಣ ಮಂದಿರದ ಕಾರ್ತಿಕ ದೀಪೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.ಬೆಳಗ್ಗೆ ವಿವಿಧ ದೈವಿಕ ಕಾರ್ಯ ನೆರವೇರಿತು. ಸಂಜೆ ದೇವರ ಉತ್ಸವ ರಥಬೀದಿ, ಗಂಜೀಗದ್ದೆ ಮೂಲಕ ಮೇಲಿನಕೇರಿಯ ಮಾರುತಿಕಟ್ಟೆಗೆ ತಲುಪಿ ಅಲ್ಲಿಂದ ಕೋಟಿತೀರ್ಥ, ನಾಗಬೀದಿ, ಮಣಿಭದ್ರ ರಸ್ತೆಯಿಂದ ಮಂದಿರಕ್ಕೆ ಮರಳಿತು.ನಂತರ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಉತ್ಸವ ಬರುವ ಮಾರ್ಗದಲ್ಲಿನ ನಿವಾಸಿಗಳು ಮಾವಿನ ತೋರಣ, ರಂಗೋಲಿಗಳಿಂದ ಅಲಂಕರಿಸಿ ದೇವರಿಗೆ ಆರತಿ ನೀಡಿ ವಂದಿಸಿದರು. ಇಲ್ಲಿನ ಹರಿಹರೇಶ್ವರ ವೇದ ವಿದ್ಯಾಪೀಠಕ್ಕೆ ಉತ್ಸವ ಆಗಮಿಸಿ ಪೂಜೆ ಸ್ವೀಕರಿಸಿತು. ದೇವರಿಗೆ ಹೂವಿನ ಅಲಂಕಾರ ಮಂದಿರಕ್ಕೆ ವಿದ್ಯುತ್ ದೀಪಾಲಂಕಾರ ಭಕ್ತರನ್ನು ಆಕರ್ಷಿಸಿತು.