ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಮಾದರಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಅಂಬರಹಳ್ಳಿ ಗೀತಾ ಸತೀಶ್, ಉಪಾಧ್ಯಕ್ಷರಾಗಿ ಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಹಿಂದೆ ಇದ್ದ ಅಧ್ಯಕ್ಷೆ ಸುಧಾ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷೆ ಸ್ಥಾನಕ್ಕೆ ಗೀತಾ ತೀಶ್, ಉಪಾಧ್ಯಕ್ಷೆ ಸ್ಥಾನಕ್ಕೆ ಲಕ್ಷ್ಮಿ ಹೊರತು ಪಡಿಸಿ ಬೇರ್‍ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ತಾಪಂ ಇಒ ರಾಮಲಿಂಗಯ್ಯ ಆಯ್ಕೆಗೊಳಿಸಿದ್ದಾರೆ.
ನೂತನ ಅಧ್ಯಕ್ಷೆ ಗೀತಾ ಸತೀಶ್ ಮಾತನಾಡಿ, ನಾನು ಅಧ್ಯಕ್ಷರಾಗಿ ಆಯ್ಕೆಯಾಗಲು ಸದಸ್ಯರು, ಮುಖಂಡರು ಸಹಕಾರ ನೀಡಿದ್ದಾರೆ. ಹುದ್ದೆಗೆ ಯಾವುದೇ ಚ್ಯುತಿಬಾರದ ರೀತಿಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತೇನೆ ಎಂದರು.ಇದೇ ವೇಳೆ ನೂತನ ಅಧ್ಯಕ್ಷೆ-ಉಪಾಧ್ಯಕ್ಷೆಯನ್ನು ಸದಸ್ಯರು, ಮುಖಂಡರು ಅಭಿನಂದಿಸಿ ಗೌರವಿಸಿದರು. ಗ್ರಾಪಂ ಮಾಜಿ ಅಧ್ಯಕ್ಷರಾದ ಎ.ಸಿ.ಮಹೇಶ್, ರೇಣುಕಾ, ಎಂ.ಇ.ಕೃಷ್ಣ, ಸುಧಾ, ಚನ್ನೇಗೌಡ, ಸದಸ್ಯರಾದ ಎಂ.ಎಸ್.ಉಮೇಶ್, ಸಿದ್ದಶೆಟ್ಟಿ, ಪವಿತ್ರ, ಮಂಚಶೆಟ್ಟಿ, ದೇವಿರಮ್ಮ, ದೇವಮ್ಮ, ಪೂರ್ಣಿಮಾ, ಶಿವಲಿಂಗಯ್ಯ, ಮುಖಂಡರಾದ ಚನ್ನಶೇಖರ್, ಕೆಂಪಣ್ಣ, ಎ.ಜಿ.ಕೃಷ್ಣ, ಚೌಡೇಶ್, ಸುರೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಓದುಲಿಂಗ, ಸತೀಶ್, ಶಿವಕುಮಾರ್ ಸೇರಿದಂತೆ ಹಲವರಿದ್ದರು.ನಾಳೆ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಭಾರತೀನಗರ:ಕ್ಯಾತಘಟ್ಟ ಗ್ರಾಮದಲ್ಲಿ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಆ.24 ರಂದು ಬೆಳಗ್ಗೆ 11 ಗಂಟೆಗೆ ಸಮುದಾಯ ಭವನದಲ್ಲಿ ನಡೆಯಲಿದೆ.ಸಂಘದ ಅಧ್ಯಕ್ಷ ಕೆ.ಟಿ.ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲ್ಲಿದ್ದಾರೆ. ಅತಿಥಿಗಳಾಗಿ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಪಿ.ಸಂದರ್ಶ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಧರಣೀಕುಮಾರ್, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಂ.ಪ್ರಶಾಂತ್, ಉಪಾಧ್ಯಕ್ಷೆ ಎಂ.ಎಸ್.ಕಲ್ಪನಾ ಸೇರಿದಂತೆ ನಿರ್ದೇಶಕರುಗಳು ಭಾಗವಹಿಸಲ್ಲಿದ್ದಾರೆ.ಸಂಘದ ಸರ್ವ ಸದಸ್ಯರು ಮಹಾಸಭೆಗೆ ಆಗಮಿಸುವಂತೆ ಮುಖ್ಯಕಾರ್ಯನಿರ್ವಹಕ ಅಧಿಕಾರಿ ಕೆ.ಎಸ್.ಅಂದಾನಿಗೌಡ ಕೋರಿದ್ದಾರೆ.