ಸಾರಾಂಶ
ಸಾಲಿಗ್ರಾಮ ದೇಗುಲದ ಕೂಟ ಬಂಧು ಭವನದಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಯುವ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.
ಕನ್ನಡಪ್ರಭ ವಾರ್ತೆ ಕೋಟ
ಮಕ್ಕಳ ಭೌತಿಕ ಬೆಳವಣಿಗೆಗೆ ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ್ ಹೇಳಿದರು.ಅವರು ಇಲ್ಲಿನ ಸಾಲಿಗ್ರಾಮ ದೇಗುಲದ ಕೂಟ ಬಂಧು ಭವನದಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಯುವ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಯ್ಯ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಹಿರಿಯ ಕೃಷಿಕ ಪಾರಂಪಳ್ಳಿ ರಘು ಮಧ್ಯಸ್ಥ, ಎ.ಪಿ. ಅಡಿಗ ಅಸೋಸಿಯೇಟ್ಸ್ ಉಳ್ತೂರು ಇದರ ಗಣೇಶ್ ಅಡಿಗ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಪಿ.ವೈ. ಹೇರ್ಳೆ ಸ್ವಾಗತಿಸಿದರು. ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಂಚಾಲಕಿ ವನಿತಾ ಉಪಾಧ್ಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಮುದ್ದುಕೃಷ್ಣ ಸ್ಪರ್ಧೆಯು ಮೂರು ವಿಭಾಗದಲ್ಲಿ ನಡೆಯಿತು. ವಿಜೇತರಿಗೆ ಬಹುಮಾನಗಳನ್ನು, ಇತರರಿಗೆ ಪ್ರಶಂಸಾ ಪತ್ರಗಳನ್ನು ನೀಡಲಾಯಿತು. ತೀರ್ಪುಗಾರರಾಗಿ ಅಮೃತಾ ಉಪಾಧ್ಯಾ, ಸುಹಾಸ್ ಕಡಬ, ಶುಭ ಭಾಗವತ್ ಭಾಗವಹಿಸಿದ್ದರು.