ಕನ್ನಡಪ್ರಭ ವಾರ್ತೆ ಬೀದರ್
2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಕನಸು ಹೊಂದಿದೆ ಎಂದು ಖ್ಯಾತ ವೈದ್ಯ ಡಾ. ಅಶೋಕ ನಾಗುರೆ ಹೇಳಿದರು.ನಗರದ ಎಸ್.ಬಿ.ಪಾಟೀಲ ದಂತ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯೋ ತ್ಸವದಲ್ಲಿ ಮಾತನಾಡಿ, ಈ ಕನಸಿನ ಸಾಕಾರಕ್ಕೆ ದೇಶದ ಯುವಶಕ್ತಿ, ಅದರಲ್ಲೂ ಜೆನ್-ಜಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಸೂರ್ಯಕಾಂತ ಪಾಟೀಲ್, ಪ್ರಾಂಶುಪಾಲರಾದ ಡಾ. ಚಂದ್ರಶೇಖರ ಗೌಡ ಪಾಟೀಲ, ಪ್ರಮುಖರಾದ ಡಾ. ಸುನಂದಾ, ಡಾ. ಶರತ್ಚಂದ್ರ ಪಾಟೀಲ್, ಡಾ. ಸಿದ್ದಣ್ಣ ಗೌಡ, ಡಾ. ಸಿದ್ಧಾರ್ಥ, ಡಾ. ಅಮರನಾಥ್ ಪಾಶಾಪುರೆ, ಡಾ. ಪೂಜಾ ಮಡಕಿ, ಡಾ. ಪ್ರಸನ್ನ ಕುಮಾರಿ, ಡಾ. ವಿನಿತಾ, ಡಾ. ದೀಪಕ, ಡಾ. ಷಣ್ಮುಖ್ ಜಮ್ಶೆಟ್ಟಿ, ಸುರೇಶ್ ಶಿಗ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.--
ಚಿತ್ರ 16ಬಿಡಿಆರ್63:
ಬೀದರ್ ನಗರದ ಎಸ್.ಬಿ. ಪಾಟೀಲ ದಂತ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಶನಿವಾರ ಸ್ವಾತಂತ್ರ್ಯೋ ತ್ಸವದ ಧ್ವಜಾರೋಹಣ ಜರುಗಿತು.--