ಇಲ್ಲಿನ ಖಾಜಾ ಬಂದಾನವಾಜ್ ವಿವಿ ವಿಜ್ಞಾನ ನಿಕಾಯದ ಗಣಕವಿಜ್ಞಾನ ವಿಭಾಗದ ವತಿಯಿಂದ ವಿಜ್ಞಾನ ನಿಕಾಯದ ಸಭಾಂಗಣದಲ್ಲಿ ‘ಜೆನ್‌ಎಐ ಮತ್ತು ಸೇಲ್ಸ್‌ಫೋರ್ಸ್ ರೆವೊಲ್ಯೂಷನ್’ 2 ದಿನಗಳ ಪ್ರಾತ್ಯಕ್ಷಿಕೆ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ​ ಕಲಬುರಗಿ

ಇಲ್ಲಿನ ಖಾಜಾ ಬಂದಾನವಾಜ್ ವಿವಿ ವಿಜ್ಞಾನ ನಿಕಾಯದ ಗಣಕವಿಜ್ಞಾನ ವಿಭಾಗದ ವತಿಯಿಂದ ವಿಜ್ಞಾನ ನಿಕಾಯದ ಸಭಾಂಗಣದಲ್ಲಿ ‘ಜೆನ್‌ಎಐ ಮತ್ತು ಸೇಲ್ಸ್‌ಫೋರ್ಸ್ ರೆವೊಲ್ಯೂಷನ್’ 2 ದಿನಗಳ ಪ್ರಾತ್ಯಕ್ಷಿಕೆ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

​ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಕ್ಲೌಡ್ ಆಧಾರಿತ ಸಿಆರ್‌ಎಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮದ ಅಗತ್ಯತೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಮತ್ತು ತರಗತಿಯ ಕಲಿಕೆಯನ್ನು ಪ್ರಾಯೋಗಿಕ ಅನುಭವದೊಂದಿಗೆ ಜೋಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು. ಮುಖ್ಯ ಅತಿಥಿ ಕೆಬಿಎನ್ ವಿವಿಯ ಸಮ ಉಪಕುಲಪತಿ ಪ್ರೊ.ಸೈಯದ್ ಅಶ್ಫಾಕ್ ಅಹಮದ್‌ ಉದ್ಘಾಟಿಸಿದರು. ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿವಿ ಕಂಪ್ಯೂಟರ್ ಸೈನ್ಸ್ ಶಾಲೆಯ ಡೀನ್, ಪ್ರಾಧ್ಯಾಪಕ ಡಾ.ಆರ್.ಎಸ್.ಹೆಗಡೆ ಆಗಮಿಸಿದ್ದರು.

​ಬೆಂಗಳೂರಿನ ಅರ್ಲಿಗ್ ಟೆಕ್ನಾಲಜೀಸ್‌ನ ಸೇಲ್ಸ್‌ಫೋರ್ಸ್ ಡೆವಲಪರ್‌ಗಳಾದ ಮೊಹಮ್ಮದ್ ಕುತುಬುದ್ದೀನ್ ಬಿಲಾಲ್ , ಮೊಹಮ್ಮದ್ ನೋಮನ್ ಹಾಗೂ ಕಲಬುರಗಿ ಇನ್ವಿಡಿಟ್ ಟೆಕ್ನಾಲಜೀಸ್‌ನ ಸಂಸ್ಥಾಪಕ ನಜೀರ್‌ಉಲ್ಲಾ ಹುಸೇನಿ ತಾಂತ್ರಿಕ ಗೋಷ್ಠಿಗಳನ್ನು ನಡೆಸಿಕೊಟ್ಟರು. ಸಂಗ್ರಹಿಸಿದ ಬೃಹತ್ ಡೇಟಾದ ಮಾದರಿಗಳಿಂದ ಹೊಸ ವಿಷಯವನ್ನು ರಚಿಸುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಭಾಗವಾದ ‘ಜನರೇಟಿವ್ ಎಐ’ ನ ಮೂಲತತ್ವಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಗ್ರಾಹಕ ನಿರ್ವಹಣೆ , ಮಾರಾಟ, ಮಾರ್ಕೆಟಿಂಗ್ ಮತ್ತು ಸೇವಾ ಕಾರ್ಯಾ ಚರಣೆಗಳನ್ನು ಸುಧಾರಿಸಲು ಎಐ ಅನ್ನು ಸೇಲ್ಸ್‌ಫೋರ್ಸ್‌ನೊಂದಿಗೆ ಹೇಗೆ ಸಂಯೋಜಿಸಬಹುದೆಂದು ತೋರಿಸಿಕೊಡಲಾಯಿತು.

​ಕಲಬುರಗಿಯ ವಿವಿಧ ಕಾಲೇಜುಗಳಿಂದ ಒಟ್ಟು 150 ನೋಂದಾಯಿತ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಂಯೋಜಕಿ ಡಾ. ಆಶಾಲತಾ ಆರ್‌, ಡಾ. ಸ್ವಾಗತಿಸಿದರು. ಡಾ ಅಹೆಲಮ್ ತಿಕೋಟಿಕರ್ ಮತ್ತು ಶ್ರೀಮತಿ ಶೀರಿನ್ ಸುಲ್ತಾನ ನಿರೂಪಿಸಿದರು.