ಸಾರಾಂಶ
ಕಳೆದ ಸಾಲಿನ ರೋಟರಿಯ ಜಿಲ್ಲಾ ಗವರ್ನರ್ ನೀಡಿದ ಪ್ರಶಂಸಾ ಪತ್ರಗಳನ್ನು ನಿಕಟಪೂರ್ವ ಅಧ್ಯಕ್ಷ ಚೇತನ್ ಶೇಟ್ ತಂಡಕ್ಕೆ ನೀಡಲಾಯಿತು.
ಕುಮಟಾ: ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಇತ್ತೀಚೆಗೆ ರೋಟರಿ ಮತ್ತು ರೋಟರಿ ಏನ್ಸ್ ಕ್ಲಬ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಸಹಾಯಕ ವೃದ್ಧರಿಗೆ ಆಹಾರ ಸೇವೆ ಮಾಡುತ್ತಿರುವ ಹೊಲನಗದ್ದೆಯ ರೇಣುಕಾ ಹೆಗಡೆ ಅವರಿಗೆ ಉತ್ತಮ ಪ್ರೇರಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ರೇಣುಕಾ ಹೆಗಡೆ ಮಾತನಾಡಿ, ಸಮಾಜದಲ್ಲಿ ನನ್ನ ಕಿಂಚಿತ್ ಸೇವಾ ಕಾರ್ಯವನ್ನು ಗುರುತಿಸಿ ಉತ್ತಮ ಪ್ರೇರಕಿ ಪ್ರಶಸ್ತಿ ನೀಡಿರುವುದು ಸಂತಸ ಉಂಟು ಮಾಡಿದೆ. ನನ್ನ ಕಾರ್ಯಕ್ಕೆ ಹೊಲನಗದ್ದೆ ಭಾಗದ ಸಜ್ಜನರು ಪ್ರೇರಣೆಯಾಗಿದ್ದಾರೆ ಎಂದರು.
ರೋಟರಿ ಅಧ್ಯಕ್ಷ ಎನ್.ಆರ್. ಗಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿ ನಡೆದು ಬಂದ ದಾರಿಯನ್ನು ಅಸಿಸ್ಟಂಟ್ ಗವರ್ನರ್ ವಸಂತ ರಾವ್ ವಿವರಿಸಿದರು. ಕಳೆದ ಸಾಲಿನ ರೋಟರಿಯ ಜಿಲ್ಲಾ ಗವರ್ನರ್ ನೀಡಿದ ಪ್ರಶಂಸಾ ಪತ್ರಗಳನ್ನು ನಿಕಟಪೂರ್ವ ಅಧ್ಯಕ್ಷ ಚೇತನ್ ಶೇಟ್ ತಂಡಕ್ಕೆ ನೀಡಲಾಯಿತು.ಜಿ.ಎಸ್. ಹೆಗಡೆ ಪ್ರಾರ್ಥಿಸಿದರು. ಗುರುರಾಜ ಶೆಟ್ಟಿ ರೋಟರಿಯ ಧ್ಯೇಯವಾಕ್ಯ ನುಡಿದರು. ಕಾರ್ಯದರ್ಶಿ ರಾಮದಾಸ ಗುನಗಿ ಸ್ವಾಗತಿಸಿ, ರೋಟರಿಯ ಮಾಸಿಕ ವರದಿ ವಾಚಿಸಿದರು. ಏನ್ಸ್ ಕಾರ್ಯದರ್ಶಿ ಶೈಲಾ ಗುನಗಿ ಪರಿಚಯಿಸಿದರು. ಡಾ. ಶ್ರೀದೇವಿ ಭಟ್ ನಿರೂಪಿಸಿದರು. ಕೋಶಾಧಿಕಾರಿ ಸಂದೀಪ ನಾಯಕ ವಂದಿಸಿದರು.
ಏನ್ಸ್ ಅಧ್ಯಕ್ಷೆ ವಿಜಯಲಕ್ಷ್ಮಿ ನಾಯ್ಕ, ರೋಟರಿ ಸದಸ್ಯರಾದ ಎಂ.ಬಿ. ಪೈ, ಡಾ. ಸಚಿನ್ ನಾಯಕ, ಜಯಶ್ರೀ ಕಾಮತ, ಡಾ. ಆಜ್ಞಾ ನಾಯಕ, ವಸಂತ ಶಾನಭಾಗ, ರೇಣುಕಾ ಹೆಗಡೆ, ನೋಬಿನ್ ಹೆಗಡೆ ಇತರರು ಇದ್ದರು.