ಶಾಸಕ ಚವ್ಹಾಣ್‌ ನೇತೃತ್ವದಲ್ಲಿ ಅ.10ರಂದು ಜೆಸ್ಕಾಂ ಸಭೆ

| Published : Oct 08 2025, 01:00 AM IST

ಸಾರಾಂಶ

ಗುಲ್ಬರ್ಗಾ ವಿದ್ಯುತ್‌ ಪ್ರಸರಣ ಕಂಪನಿಯ ಔರಾದ್‌ ಉಪ ವಿಭಾಗ ವ್ಯಾಪ್ತಿಯಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿ, ಕರ್ತವ್ಯ ನಿಯಮಾವಳಿಗಳ ಉಲ್ಲಂಘನೆ ಹಾಗೂ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳ ವಾಸ್ತವ್ಯದ ಕುರಿತು ''''ಕನ್ನಡಪ್ರಭ''''ದಲ್ಲಿ ಕಳೆದೆರಡು ವಾರಗಳಿಂದ ಪ್ರಕಟಗೊಂಡ ಸರಣಿ ವರದಿಯಿಂದ ಎಚ್ಚೆತ್ತುಕೊಂಡ ಶಾಸಕ ಪ್ರಭು ಚವ್ಹಾಣ್‌ ಇಲಾಖೆಯ ಸಭೆ ನಡೆಸಲು ಮಹೂರ್ತ ಫಿಕ್ಸ್‌ ಮಾಡಿದ್ದಾರೆ.

ಅನೀಲಕುಮಾರ ದೇಶಮುಖ

ಕನ್ನಡಪ್ರಭ ವಾರ್ತೆ, ಔರಾದ್‌

ಗುಲ್ಬರ್ಗಾ ವಿದ್ಯುತ್‌ ಪ್ರಸರಣ ಕಂಪನಿಯ ಔರಾದ್‌ ಉಪ ವಿಭಾಗ ವ್ಯಾಪ್ತಿಯಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿ, ಕರ್ತವ್ಯ ನಿಯಮಾವಳಿಗಳ ಉಲ್ಲಂಘನೆ ಹಾಗೂ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳ ವಾಸ್ತವ್ಯದ ಕುರಿತು ''''''''''''''''ಕನ್ನಡಪ್ರಭ''''''''''''''''ದಲ್ಲಿ ಕಳೆದೆರಡು ವಾರಗಳಿಂದ ಪ್ರಕಟಗೊಂಡ ಸರಣಿ ವರದಿಯಿಂದ ಎಚ್ಚೆತ್ತುಕೊಂಡ ಶಾಸಕ ಪ್ರಭು ಚವ್ಹಾಣ್‌ ಇಲಾಖೆಯ ಸಭೆ ನಡೆಸಲು ಮಹೂರ್ತ ಫಿಕ್ಸ್‌ ಮಾಡಿದ್ದಾರೆ.

ಅ. 10ರಂದು ಬೆಳಿಗ್ಗೆ 11ಕ್ಕೆ ಪಟ್ಟಣದಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಮುಖವಾಗಿ ಜೆಸ್ಕಾಂ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಿ, ಎಇಇ, ಶಾಖಾಧಿಕಾರಿಗಳು, ಲೆಕ್ಕಾಧಿಕಾರಿಗಳು, ಲೈನಮೆನ್‌ಗಳು, ಹೆಚ್ಚುವರಿ ಲೈನ್‌ ಕಂಟ್ರೋಲರ್‌ಗಳು, ಕರ ವಸೂಲಿಗಾರರು ಸೇರಿದಂತೆ ಇಲಾಖೆಯ ಕೆಳ ಹಂತದ ಸಿಬ್ಬಂದಿಯಿಂದ ಆಡಳಿತದ ಮುಖ್ಯಸ್ಥರವರೆಗೆ ಬುಲಾವ್‌ ನೀಡಲಾಗಿದೆ.

ಕಮಲನಗರ ಹಾಗೂ ಔರಾದ್‌ ತಾಲೂಕು ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿದ್ದು ಎರಡು ತಾಲೂಕಿನಲ್ಲಿ ಸಮರ್ಪಕ ವಿದ್ಯುತ್‌ ಸರಬರಾಜಿನ ವ್ಯವಸ್ಥೆಗೆ ಕೈಗೊಳ್ಳಬಹುದಾದ ಕ್ರಮಗಳು, ಆಡಳಿತ ಸುಧಾರಣೆ ಮತ್ತು ''''''''''''''''ಕನ್ನಡಪ್ರಭ'''''''''''''''' ಪ್ರಕಟಿಸಿರುವ ಎಲ್ಲಾ ಸರಣಿ ವರದಿಗಳ ಸಮಗ್ರ ಮಾಹಿತಿಯನ್ನು ಚರ್ಚಿಸಿ ಇಲಾಖೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.

''''''''ಕನ್ನಡಪ್ರಭ'''''''' ಸರಣಿ ವರದಿ:

ಜೆಸ್ಕಾಂ ಅಧಿಕಾರಿಗಳು ಸಂಜೆಯಾಗ್ತಿದ್ದಂತೆ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡುತ್ತಿರುವ ಪದ್ದತಿಯಿಂದಾಗಿ ಔರಾದ್‌ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಳ ಹಂತದ ಸಿಬ್ಬಂದಿಗಳು ವಿದ್ಯುತ್‌ ಸರಬರಾಜು ಮಾಡುವ ವ್ಯವಸ್ಥೆಯಲ್ಲಿ ಖಾಸಗಿ ''''''''''''''''ಕರೆಂಟ್‌ ಮ್ಯಾನ್‌''''''''''''''''ಗಳ ಬಳಕೆ, ಲೈನ್‌ ಕಂಟ್ರೋಲ್‌ (ಎಲ್‌ಸಿ) ಪಡೆಯಲು ಲೈನಮೆನ್‌ಗಳ ಪರದಾಟ, ಟ್ರಾನ್ಸಫಾರಂಗಳ ದುರಾವಸ್ಥೆ, ವಿದ್ಯುತ್‌ ತಂತಿಗಳ ಅವಾಂತರ ಸೇರಿದಂತೆ ಖೇರಡಾ ಶಾಖೆಯ ಚಿಮ್ಮೆಗಾಂವ್‌ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್‌ ದೋಷದಿಂದಾಗಿ ಮೂರು ದಿನಗಳ ಕಾಲ ಜನರು ಕತ್ತಲೆಯಲ್ಲಿ ಬದುಕುವಂಥ ಸ್ಥಿತಿ ನಿರ್ಮಾಣವಾದರೂ ಅಧಿಕಾರಿಗಳು ಚಕಾರವೆತ್ತದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದದ್ದನ್ನು ''''''''''''''''ಕನ್ನಡಪ್ರಭ'''''''''''''''' ವಿವರವಾಗಿ ವರದಿ ಮಾಡಿತ್ತು.

----

ಔರಾದ್‌ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ದೋಷದ ಕುರಿತು ''''''''''''''''ಕನ್ನಡಪ್ರಭ'''''''''''''''' ವಿಸ್ತೃತವಾಗಿ ವರದಿ ಮಾಡಿದೆ. ನಿರಂತರ ಮಳೆಯಿಂದ ಸಾಕಷ್ಟು ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ಸೌಲಭ್ಯಗಳಲ್ಲಿ ವಿದ್ಯುತ್‌ ಕೂಡ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಜೆಸ್ಕಾಂ ಇಲಾಖೆಯಲ್ಲಿ ಆದ ಏರುಪೇರುಗಳನ್ನು ಸರಿಪಡಿಸಿ ಅದಕ್ಕೆ ಚುರುಕು ಮುಟ್ಟಿಸುವ ನಿಟ್ಟನಲ್ಲಿ ಸಭೆ ಕರೆಯಲಾಗಿದೆ.

- ಪ್ರಭು ಚವ್ಹಾಣ್‌, ಶಾಸಕರು, ಔರಾದ್‌