ವೃದ್ಧೆಯ ₹ 5000 ವಿದ್ಯುತ್‌ ಬಿಲ್‌ ಪಾವತಿಸಿದ ಜೆಸ್ಕಾಂ ಸಿಬ್ಬಂದಿ

| Published : Jul 02 2025, 11:52 PM IST

ವೃದ್ಧೆಯ ₹ 5000 ವಿದ್ಯುತ್‌ ಬಿಲ್‌ ಪಾವತಿಸಿದ ಜೆಸ್ಕಾಂ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಹಳೆಯ ಬಾಕಿ ಅಭಿಯಾನ ಪ್ರಾರಂಭಿಸಿರುವ ಜೆಸ್ಕಾಂ ಮಾದಿನೂರು ಗ್ರಾಮಕ್ಕೆ ಹೋಗಿದ್ದ ವೇಳೆ ಬಿಲ್ ಪಾವತಿಸುವ ಶಕ್ತಿ ಅನ್ನಮ್ಮನಿಗೆ ಇರಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಹಾಗೂ ಮಗನ ಆನಾರೋಗ್ಯದಿಂದ ತೊಂದರೆಯಲ್ಲಿ ಇರುವುದನ್ನು ಅರಿತು ಅವರೇ ಬಿಲ್ ಪಾವತಿಸಿದ್ದಾರೆ.

ಕೊಪ್ಪಳ:

ತಾಲೂಕಿನ ಮಾದಿನೂರು ಗ್ರಾಮದಲ್ಲಿ ಅನ್ನಮ್ಮ ಬಡಿಗೇರ ಎನ್ನುವವರ ಬಾಕಿ ₹ 5000 ವಿದ್ಯುತ್ ಬಿಲ್‌ನ್ನು ತಾವೇ ಪಾವತಿಸುವ ಮೂಲಕ ಜೆಸ್ಕಾಂ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ಅನ್ನಮ್ಮ ಅವರಿಗೆ ಇದೀಗ ಗೃಹಜ್ಯೋತಿಯಿಂದ ವಿದ್ಯುತ್ ಉಚಿತವಾಗಿ ದೊರೆಯುತ್ತಿದೆ. ಆದರೆ, ಹಳೆಯ ಬಾಕಿ ₹ 5000 ಇತ್ತು. ಹಳೆಯ ಬಾಕಿ ಅಭಿಯಾನ ಪ್ರಾರಂಭಿಸಿರುವ ಜೆಸ್ಕಾಂ ಮಾದಿನೂರು ಗ್ರಾಮಕ್ಕೆ ಹೋಗಿದ್ದ ವೇಳೆ ಬಿಲ್ ಪಾವತಿಸುವ ಶಕ್ತಿ ಅನ್ನಮ್ಮನಿಗೆ ಇರಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಹಾಗೂ ಮಗನ ಆನಾರೋಗ್ಯದಿಂದ ತೊಂದರೆಯಲ್ಲಿ ಇರುವುದನ್ನು ಅರಿತು ಅವರೇ ಬಿಲ್ ಪಾವತಿಸಿದ್ದಾರೆ.

ಜೆಸ್ಕಾಂ ಅಧಿಕಾರಿ ಕಲ್ಲಪ್ಪ ಅವರ ನೇತೃತ್ವದಲ್ಲಿ ಪವರ್‌ಮನ್‌ ಮಂಜುನಾಥ ಸೇರಿದಂತೆ 6ಕ್ಕೂ ಹೆಚ್ಚು ಸಿಬ್ಬಂದಿ ತಾವೇ ಎಲ್ಲರೂ ಕೂಡಿ ಬಿಲ್ ಪಾವತಿಸಿದರು.