ಉತ್ತಮ ಶಿಕ್ಷಣ ಪಡೆದು ದೇಶದ ಸತ್ಪ್ರಜೆಗಳಾಗಿ: ರಫೀಕ್‌ಖಾನ್

| Published : Nov 19 2025, 01:45 AM IST

ಸಾರಾಂಶ

ಉತ್ತಮ ಶಿಕ್ಷಣವನ್ನು ಪಡೆದು ದೇಶದ ಸತ್ಪ್ರಜೆಗಳಾಗಿ ಮೂಡಿಬರಬೇಕು ಎಂದು ರಫೀಕ್‌ ಖಾನ್‌ ಹೇಳಿದರು.

ಕನ್ನಡ ಪ್ರಭ ವಾರ್ತೆ ಸುಂಟಿಕೊಪ್ಪ

ನೆಹರೂ ದೇಶ ಮತ್ತು ಮಕ್ಕಳನ್ನು ಅತೀವಾಗಿ ಪ್ರೀತಿಸಿದಂತೆ ನೀವು ಉತ್ತಮ ಶಿಕ್ಷಣವನ್ನು ಪಡೆದು ದೇಶದ ಸತ್ಪ್ರಜೆಗಳಾಗಿ ಮೂಡಿಬರಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಫೀಕ್‌ಖಾನ್ ಹೇಳಿದರು.

ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಫೀಕ್‌ಖಾನ್ ಅವರು ಚಾಚ ನೆಹರು ಅವರ ಆದರ್ಶ ಗುಣಗಳನ್ನು ವಾಚಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳು ಶ್ರದ್ಧೆಯಿಂದ ಪಾಠಪ್ರವಚನಗಳತ್ತ ಚಿತ್ತವನ್ನು ಹರಿಸಿ ವ್ಯಾಸಂಗ ಮಾಡುವುದರಿಂದ ಉನ್ನತ ಶಿಕ್ಷಣಗಳಿಗೆ ಅನುಕೂಲರವಾದ ವಾತರಣ ಸೃಷ್ಟಿಯಾಗಲಿದೆ. ನೀವುಗಳು ಉನ್ನತ ಶಿಕ್ಷಣಗಳನ್ನು ಪಡೆಯುವ ಮೂಲಕ ದೇಶದ ಉನ್ನತ ಹುದ್ದೆಗಳಲ್ಲಿ ಪಡೆದುಕೊಂಡಾಗ ಮಾತ್ರ ಪೋಷಕರ, ಗ್ರಾಮ, ಶಿಕ್ಷಣ ನೀಡಿದ ಶಾಲೆಗಳ ಕೀರ್ತಿಯನ್ನು ಹೆಚ್ಚಿಸಬಹುದಾಗಿದೆ ಎಂದು ಅವರು ನುಡಿದರು. ಇದೇ ಸಂದರ್ಭ ಈ ಶಾಲೆಗೆ ಅಗತ್ಯತೆಗಳು ಮನವರಿಕೆಯಾಗಿದ್ದು ಮುಂದೆ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಎಂ.ಬಿಜು ಪೋಷಕರಿಗೆ ಅಯೋಜಿತ ಕ್ರೀಡಾಕೂಟವನ್ನು ಉದ್ಘಾಟಿಸಿ ಮಕ್ಕಳ ದಿನಾಚರಣೆಯ ಶುಭವನ್ನು ಕೋರಿದರು. ಶಾಲೆಯ ಸಹಶಿಕ್ಷಕಿ ಪ್ರೀತಿ ಜಾಯ್ಸ್ ಪೀಠೋ ದಿನದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಬಹುಮಾನ ದಾನಿಗಳಾದ ಅಯ್ಯಪ್ಪ, ಶಾಲಾ ಮುಖ್ಯೋಪಾಧ್ಯಾಯನಿ ಜೋವಿಟಾ ವಾಸ್, ವ್ಯವಸ್ಥಾಪಕರಾದ ಜೆಸ್ಸಿವೇಗಸ್ ಇದ್ದರು. 1986-87 ನೇ ಸಾಲಿನ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಪ್ರತಿ ವರ್ಷದಂತೆ ನೀಡಲಾಗುವ ವಿಶೇಷ ಭೋಜನವನ್ನು ನೀಡಿದರು. ಪೋಷಕರು ಮಕ್ಕಳ ಪೋಷಣೆ ಆರೈಕೆ ಮತ್ತು ಬೆಳವಣಿಗೆಗೆ ಸಿಮೀತವಾಗಿರದೆ, ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕರಿಗೆ ವಿಶೇಷ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪೋಷಕರು ಕ್ರೀಡೆಯಲ್ಲಿ ಭಾಗವಹಿಸಿರುವುದನ್ನು ಮಕ್ಕಳ ಸೀಳೆ, ಕೇಕೆ ಹಾಕುತ್ತ ಪೋಷಕರನ್ನು ಹುರಿದುಂಬಿಸುವ ಮೂಲಕ ರಸದೌತಣವೇ ಕಂಡು ಬಂದಿತ್ತು.ಮೊದಲಿಗೆ ಶಾಲಾ ಶಿಕ್ಷಕರು ಪ್ರಾರ್ಥಿಸಿದರು. ಸ್ಟಿಸ್ಟರ್ ವೀಣಾ ನಿರೂಪಿಸಿದರು. ಮುಖ್ಯೋಪಾಧ್ಯಾಯನಿ ಜೋವಿಟಾ ವಾಸ್ ಸ್ವಾಗತಿಸಿದರು.