ಸಾರಾಂಶ
ಇತ್ತೀಚಿನ ದಿನಗಳಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿರುವ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಯುತ್ತಿದ್ದು ಅವರನ್ನು ನೆನಪಿಸಿಕೊಂಡು ಅವರು ತಮ್ಮ ಜೀವನ ಮುಡಿಪಾಗಿಟ್ಟು ನಮಗೆ ದೊರಕಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು
ಕುಷ್ಟಗಿ: ಸ್ಟೂಡೇಟ್ ಲೈಪ್ ಇಸ್ ಗೋಲ್ಡನ್ ಲೈಪ್ ಆಗಿದ್ದು, ವಿದ್ಯಾರ್ಥಿ ಜೀವನ ಸರಿಯಾಗಿ ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಬದುಕು ನಡೆಸಲು ಮುಂದಾಗಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ, ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಎಂದೆಂದಿಗೂ ಜಾತಿಬೇಧ, ದ್ವೇಷದ ಮನೋಭಾವನೆ ತೋರಬಾರದು ಎಲ್ಲರೊಂದಿಗೆ ಸ್ನೇಹ ಸೌರ್ಹಾರ್ದತೆಯೊಂದಿಗೆ ಬೆಳೆಯಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿರುವ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಯುತ್ತಿದ್ದು ಅವರನ್ನು ನೆನಪಿಸಿಕೊಂಡು ಅವರು ತಮ್ಮ ಜೀವನ ಮುಡಿಪಾಗಿಟ್ಟು ನಮಗೆ ದೊರಕಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಹೋರಾಟಗಾರರನ್ನು ಸ್ಮರಿಸುತ್ತಿರಬೇಕು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡು ಮುಂದಿನ ದಿನಮಾನಗಳಲ್ಲಿ ಭವಿಷ್ಯದಲ್ಲಿ ಯಶಸ್ಸು ಕಾಣಲು ಮುಂದಾಗಬೇಕು ಎಂದರು.
ಕಾಲೇಜು ಪ್ರಾಚಾರ್ಯ ಡಾ. ಎಸ್.ವಿ.ಡಾಣಿ ಮಾತನಾಡಿ, ವಿದ್ಯಾರ್ಥಿಗಳು ದುಶ್ವಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಶಿಕ್ಷಣ ಪಡೆದುಕೊಂಡು ಸುಂದರ ಜೀವನ ನಡೆಸುವ ಮೂಲಕ ಹೆತ್ತ ತಂದೆ ತಾಯಿಗಳಿಗೆ ಹಾಗೂ ಶಿಕ್ಷಣ ಕಲಿಸಿದ ಶಿಕ್ಷಕರಿಗೆ ಉತ್ತಮ ಹೆಸರನ್ನು ತಂದುಕೊಡುವ ಕೆಲಸ ಮಾಡಬೇಕು ಎಂದರು.ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಹಿಟ್ನಾಳ ಕಾಲೇಜಿನ ಪ್ರಾದ್ಯಾಪಕ ಡಾ. ಬಸವರಾಜ ಮಾತನಾಡಿದರು.
ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಧ್ಯಾಪಕ ಅಶೋಕ ಕೆಂಚರಡ್ಡಿ, ಭೋಜರಾಜ್, ಡಾ. ನಾಗೇಂದ್ರಪ್ಪ, ವಿಶ್ವನಾಥ ಕನ್ನೂರ, ವಿದ್ಯಾವತಿ ಗೋಟುರ, ರಾಘವೇಂದ್ರ ಪತ್ತಾರ, ಐ.ಎಚ್. ದ್ಯಾಮವ್ವನಗುಡಿ, ಎಸ್.ಸಿ. ಬಂಡಿಹಾಳ, ಲಕ್ಷ್ಮಣ ಪೂಜಾರ, ಅಮರೇಶ, ಚೌಡಪ್ಪ, ಸುರೇಶ, ನಿಂಗಪ್ಪ ಗೋಟೂರ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.