ಸಾರಾಂಶ
ನರೇಗಾ ಕೂಲಿ ಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ಡ ರೋಜಗಾರ ದಿನ ಹಾಗೂ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಬೀದರ್
ಕೂಲಿಗಾಗಿ ಮಹಾನಗರಗಳಿಗೆ ತೆರಳದೇ ಸ್ವಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಪಡೆದು ನಿರಾಳವಾಗಿ ಜೀವನ ಸಾಗಿಸಬೇಕೆಂದು ನಾಗೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಕುಮಾರ ಪಾಟೀಲ್ ಕರೆ ನೀಡಿದರು.ಅವರು ಬೀದರ ತಾಲೂಕಿನ ನಾಗೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಾಗಾರಿ ಸ್ಥಳದಲ್ಲಿ ನರೇಗಾ ಕೂಲಿ ಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ಡ ರೋಜಗಾರ ದಿನ ಹಾಗೂ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ನರೇಗಾ ಯೋಜನೆ ಅಡಿ ನೀಡುತ್ತಿದ ಕೂಲಿ ಮೊತ್ತವನ್ನು 309ರು.ಗಳಿಂದ 316ಕ್ಕೆ ಏರಿಕೆ ಮಾಡಲಾಗಿದೆ ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆಯಬೇಕೆಂದರು. ನರೇಗಾ ಯೋಜನೆ ಅಡಿ ಲಾಭ ಪಡೆಯುತ್ತಿರುವ ಎಲ್ಲಾ ಫಲಾನುಭವಗಳು ಲೋಕಸಭಾ ಚುನಾವಣೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ತಮ್ಮ ಕುಟುಂಬ ಸದ್ಯರಿಗೆ ಹಾಗೂ ನೆರೆ ಹೊರೆಯವರಿಗೆ ಮತದಾನ ಮಾಡುವಂತೆ ತಿಳಿಸಿ ಎಂದು ಹೇಳಿದರು.ಅಷ್ಟೂರ ಪಿಡಿಒ ಮಾತನಾಡಿ, ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಮತದಾನ ಎಂಬುವದು ಅಡಿಗಲ್ಲು ಇದ್ದ ಹಾಗೆ, ಇದನ್ನು ಸರಿಯಾಗಿ ಹಾಕುವುದು ನಮ್ಮ ಜವಾಬ್ದಾರಿ. ಅಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು. ಇತ್ತೀಚೆಗೆ ಆರೋಗ್ಯ ಹಾಗೂ ಇತರೆ ಸಮಸ್ಯೆಗಿಂತ ಹೆಚ್ಚಾಗಿ ಬೇಜವಾಬ್ದಾರಿತನದಿಂದಾಗಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಆದರಿಂದ ಈ ಪ್ರವೃತ್ತಿ ಬಿಡಬೇಕು ಮತ್ತು ಎಲ್ಲರು ಮತದಾನ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಜಾಬ್ ಕಾರ್ಡ ಹಾಗೂ ಹಣ್ಣು ಹಂಪಲು ವಿತರಿಸಲಾಯಿತು. ಈ ವೇಳೆ ತಾಂತ್ರಿಕ ಸಂಯೋಜಕರಾದ ಸೂರ್ಯಕಾಂತ, ರಾಜಕುಮಾರ ಮೇಟಿ, ತಾಪಂ ಐಇಸಿ ಸಂಯೋಜಕ ಸತ್ಯಜೀತ ಸೇರಿ ಇತರರಿದ್ದರು.
;Resize=(128,128))
;Resize=(128,128))
;Resize=(128,128))