ಗ್ರಾಹಕರು ಯಾವುದೇ ಒಂದು ವಸ್ತು ಖರೀದಿ ಮಾಡಿದಲ್ಲಿ ತಪ್ಪದೆ ರಶೀದಿ ಪಡೆದುಕೊಳ್ಳಬೇಕು
ಕುಕನೂರು: ಗ್ರಾಹಕರು ಯಾವುದೇ ವಸ್ತು ಖರೀಸಿದಾಗ ತಪ್ಪದೇ ರಶೀದಿ ಪಡೆಯಬೇಕು ಎಂದು ಯಲಬುರ್ಗಾ ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ ಹೇಳಿದರು.
ತಾಲೂಕಿನ ಬಳಗೇರಿ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲಬುರ್ಗಾ, ಕಂದಾಯ ಇಲಾಖೆ,ಗ್ರಾಪಂ ಬಳಗೇರಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರು ಯಾವುದೇ ಒಂದು ವಸ್ತು ಖರೀದಿ ಮಾಡಿದಲ್ಲಿ ತಪ್ಪದೆ ರಶೀದಿ ಪಡೆದುಕೊಳ್ಳಬೇಕು. ಅಂದಾಗ ಮಾತ್ರ ನಾವು ಪರಿಹಾರ ಪಡೆದುಕೊಳ್ಳಲು ಹಕ್ಕನ್ನು ಹೊಂದಿರುತ್ತೇವೆ. ರಶೀದಿ ಪಡೆದರೆ ಗ್ರಾಹಕರಿಗೆ ಅನ್ಯಾಯ ಆಗಲು ಸಾಧ್ಯವಿಲ್ಲ. ವ್ಯಾಪಾರದಲ್ಲಿ ಆಗುವ ಮೋಸ, ವಸ್ತುಗಳ ಗುಣಮಟ್ಟ ಕ್ಷೀಣತೆ, ನಕಲಿ ವಸ್ತುಗಳ ಮಾರಾಟ, ಮೋಸದ ಬಗ್ಗೆ ಕಡಿವಾಣ ಬೀಳುತ್ತದೆ ಎಂದರು. ಸಿಡಿಪಿಓ ಬೆಟದೇಶ ಮಾಳೆಕೊಪ್ಪ ಮಾತನಾಡಿ, ವಿಕಲಚೇತನ ಮಕ್ಕಳ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಗೌರಮ್ಮ ವಿರೂಪಾಕ್ಷಪ್ಪ ಕುರ್ತಕೋಟಿ ವಹಿಸಿದ್ದರು. ಎಂಎಸ್ ನಾಯಕರ್, ಬಸವರಾಜ ಮಂಗಳೂರು, ರವಿಕುಮಾರ್, ಮಲ್ಲನಗೌಡ ಎಸ್.ಪಾಟೀಲ್, ಮಹೇಶಗೌಡ, ಮಹಾಂತೇಶ ಇಟಿ, ಗ್ರಾಪಂ ಸದಸ್ಯರಾದ ನಿಂಗಪ್ಪ ಮಾಳೆಕೊಪ್ಪ, ಹನುಮಕ್ಕ ಗೌಡ್ರು, ಶರಣಪ್ಪ ಕುಕನೂರು, ಈರಪ್ಪ ಕರೆಕುರಿ, ನ್ಯಾಯಾಲಯದ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ಇದ್ದರು.