ಭವಿಷ್ಯದ ಆಸ್ತಿ ಭದ್ರತೆಗಾಗಿ ಇ-ಸ್ವತ್ತು ಮಾಡಿಸಿಕೊಳ್ಳಿ: ವಿಶ್ವನಾಥ ಜೆ.ಕೆ.

| Published : Sep 26 2024, 10:09 AM IST

ಸಾರಾಂಶ

ತಮ್ಮ ಸ್ವತ್ತುಗಳಿಗೆ ಇ-ಖಾತೆ ಕಡ್ಡಾಯವಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಗಳನ್ನು ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯಬಹುದು ಎಂದು ಹಿರೇಕೆರೂರು ಉಪ ನೋಂದಣಾಧಿಕಾರಿ ವಿಶ್ವನಾಥ ಜೆ.ಕೆ. ಮನವಿ ಹೇಳಿದರು.

ರಟ್ಟೀಹಳ್ಳಿ: ಪಟ್ಟಣದ ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಭದ್ರತೆಗೆ ಹಾಗೂ ನೆಮ್ಮದಿಗೆ ತಮ್ಮ ಸ್ವತ್ತುಗಳನ್ನು ಇ-ಖಾತಾ ಮಾಡಿಸಿಕೊಳ್ಳಬೇಕು ಎಂದು ಹಿರೇಕೆರೂರು ಉಪ ನೋಂದಣಾಧಿಕಾರಿ ವಿಶ್ವನಾಥ ಜೆ.ಕೆ. ಮನವಿ ಮಾಡಿದರು.

ಪಪಂಗೆ ಭೇಟಿ ನೀಡಿ, ಸಾರ್ವಜನಿಕರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಸ್ವತ್ತುಗಳಿಗೆ ಇ-ಖಾತೆ ಕಡ್ಡಾಯವಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಗಳನ್ನು ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯಬಹುದು. ಇ-ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರ ಗುರುತಿಸಲು ಸಾಧ್ಯ. ನೈಜ ಮಾಲೀಕರಿಗೆ ವಂಚಿಸಿ, ಬೇರೆಯವರಿಂದ ಸ್ವತ್ತುಗಳ ನೋಂದಣಿ ತಪ್ಪಿಸಬಹುದು. ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ, ಕಾನೂನು ತೊಂದರೆಗಳನ್ನು ತಪ್ಪಿಸಬಹುದು ಎಂದರು.

ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಮಾತನಾಡಿ, ಪಟ್ಟಣದ ಜನತೆಗಾಗಿ ಪಪಂ ಸಿಬ್ಬಂದಿ ತಮ್ಮ ಸ್ವತ್ತುಗಳಿಗೆ ಇ-ಖಾತೆ ಮಾಡಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಕಾವೇರಿ-2 ಇ ಆಸ್ತಿ ಸೆ. 23ರಿಂದ ಪ್ರಾರಂಭವಾಗುತ್ತಿದ್ದು, ಸಾರ್ವಜನಿಕರು ತಮ್ಮ ಸ್ವತ್ತಿಗೆ ಇ-ಆಸ್ತಿ ಖಾತಾ (ಪಿ.ಐ.ಡಿ. ನಂ.) ಖಚಿತಪಡಿಸಿಕೊಳ್ಳಬೇಕು. ನೋಂದಣಿ ವೇಳೆ, ಸ್ವತ್ತಿಗೆ ಸಂಬಂಧಿಸಿದ ಗುರುತಿನ ಮಾಹಿತಿಯನ್ನು ಇ-ಆಸ್ತಿ ತಂತ್ರಾಂಶದಿಂದ ಮಾತ್ರ ಪಡೆದುಕೊಳ್ಳಬಹುದು. ಭೌತಿಕ ಖಾತಾಗಳನ್ನು ನೋಂದಣಿಗೆ ಪರಿಗಣಿಸುವುದಿಲ್ಲ. ತಂತ್ರಾಂಶಗಳ ಸಂಯೋಜನಾ ವಿಧಾನ ಹೊರತುಪಡಿಸಿ ಬೇರೆ ಯಾವುದೇ ವಿಧಾನದಿಂದ ನೋಂದಣಿ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪಪಂ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದರು.

ಇದೇ ಸಂದರ್ಭದಲ್ಲಿ ಸೈಕಲ್ಗಾರ, ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಮಂಜು ಸುಣಗಾರ, ಬಸಣ್ಣ ಕವಲೇತ್ತು, ಸಂತೋಷ ಬಿಳಚಿ, ಗಣೇಶಪ್ಪ ಒಂಟಿಗೇರ ಮುಂತಾದವರು ಇದ್ದರು.