ಸಾರಾಂಶ
ಕಸಾಪ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆ
ಕೊರಟಗೆರೆ: ಕನ್ನಡ ಸಾಹಿತ್ಯ ಸಮೃದ್ಧವಾದ ಪರಂಪರೆಯನ್ನು ಹೊಂದಿದ್ದು ಕನ್ನಡಿಗರಾದ ನಾವು ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆಯುವ ಮೂಲಕ ಕನ್ನಡ ನಾಡು ಮತ್ತು ನುಡಿಯ ಹಿರಿಮೆಯನ್ನು ಬೆಳೆಗಿಸೊಣ್ಣ ಎಂದು ಕೊರಟಗೆರೆ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಈರಣ್ಣ ತಿಳಿಸಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ನೂತನವಾಗಿ ಆನೈಲ್‌ನ್ ಮೂಲಕ ಸಾಹಿತ್ಯ ಪರಿಷತ್‌ನ ಆಜೀವ ಸದಸ್ಯತ್ವ ಪಡೆದ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು.ಪ್ರತಿ ಯೊಬ್ಬ ಕನ್ನಡಿಗರೂ ಆನ್‌ಲೈಲ್ ಮೂಲಕ ಅರ್ಜಿ ಸಲ್ಲಿಸಿ ಸದಸ್ಯತ್ವ ಪಡೆಯಬಹುದು. ತಾಲೂಕು ಘಟಕದ ಪರಿಷತ್‌ನ ಪದಾಧಿಕಾರಿಗಳ ಮೂಲಕ ಅರ್ಜಿ ಪಡೆದು ಸದಸ್ಯತ್ವದ ಶುಲ್ಕ ನೀಡುವ ಮೂಲಕ ಆಜೀವ ಸದಸ್ಯತ್ವ ಪಡೆಯಬಹುದು. ಡಿಸೆಂಬರ್ ತಿಂಗಳಲ್ಲಿ ಆಜೀವ ಸದಸ್ಯತ್ವ ಪಡೆದ ಸದಸ್ಯರಿಗೆ ಮುಂದಿನ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಪಡೆಯಬಹುದಾಗಿದೆ. ಆಜೀವ ಸದಸ್ಯತ್ವ ಶುಲ್ಕ 250 ರು. ಆಗಿದ್ದು ಅದರೊಂದಿಗೆ ಸ್ಮಾರ್ಟ್ ಕಾರ್ಡ್ ಶುಲ್ಕ 150 ರು. ಹಾಗೂ ಅರ್ಜಿ ಶುಲ್ಕ 10 ರು. ಒಟ್ಟು ನೂತನ ಸದಸ್ಯರು 410 ರು. ಪಾವತಿಸಿ ಸದಸ್ಯತ್ವ ಪಡೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ತಿಂಗಳ 29, 30 ರಂದು ತುಮಕೂರಿನಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ತಾಲೂಕಿನ ಎಲ್ಲಾ ಸದಸ್ಯರು ಹಾಗೂ ಆಸಕ್ತರು ಪ್ರತಿನಿಧಿಗಳಾಗಿ ಭಾಗವಹಿಸುವಂತೆ ಮನವಿ ಮಾಡಿದರು.ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಶುಂಪಾಲ ನೇರಂ ನಾಗರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ನಿಕಟ ಪೂರ್ವ ಕಸಾಪ ಅಧ್ಯಕ್ಷ ಕೃಷ್ಣಮೂರ್ತಿ, ಪ್ರತಾಪ್‌ರುದ್ರ, ಕಾರ್ಯದರ್ಶಿ ಬಿ. ಹನುಮಂತರೆಡ್ಡಿ, ಖಜಾಂಚಿ ದ್ರಾಕ್ಷಾಯಿಣಿ ರಾಜಣ್ಣ, ಲಕ್ಷ್ಮಿಪುತ್ರ ಇದ್ದರು.ಫೋಟೊ;ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಕಸಾಪ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆಯ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಈರಣ್ಣ ಹೊಸದಾಗಿ ಸದಸ್ಯತ್ವ ಪಡೆದವರಿಗೆ ಸ್ಮಾರ್ಟ್ ಕಾಡ್ ವಿತರಿಸಿದರು.