ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಿ

| Published : Jun 29 2024, 12:32 AM IST

ಸಾರಾಂಶ

ತಾಂತ್ರಿಕ ಪದವಿ ಪಡೆದ, ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಅಮರೇಶ್ ನುಗಡೋಣಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುತಾಂತ್ರಿಕ ಪದವಿ ಪಡೆದ, ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಅಮರೇಶ್ ನುಗಡೋಣಿ ತಿಳಿಸಿದರು.ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಕನ್ನಡ ವಿಭಾಗ ಹಾಗೂ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಏರ್ಪಡಿಸಿದ್ದ ಡಾ. ಎಚ್.ಎಮ್ ಗಂಗಾಧರಯ್ಯ ಉಪನ್ಯಾಸ ಮಾಲೆ-17ರಲ್ಲಿ ಕಥಾ ರಚನೆ- ಒಂದು ಮಾದರಿ ಚಿಂತನೆ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೊದಲಿನ ದಿನಗಳಲ್ಲಿ ಹಿರಿಯರು ಕಥೆ ಹೇಳುವುದು ರೂಢಿ. ಇದರಿಂದ ಜ್ಞಾನ ,ಅರಿವು, ಒಳ್ಳೆಯ ಸಂದೇಶ ಜೊತೆಗೆ ದಯೆ, ಸಹಾಯ ,ಕರುಣೆಯಂತಹ ಹಲವಾರು ತತ್ವಗಳು ಮಕ್ಕಳ ಬೆಳವಣಿಗೆ ಪೂರವಾಗಿದ್ದವು. ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಸಹ ಸಾಹಿತ್ಯ ಮುಖ್ಯ ಪಾತ್ರ ವಹಿಸುತ್ತಿದೆ ಎಂದರು.ಉದಾರೀಕರಣದ ನಂತರ ಕಾಲಘಟ್ಟದಲ್ಲಿ ಕನ್ನಡ ತಾಂತ್ರಿಕ ಬರವಣಿಗೆ ಉತ್ತುಂಗಕ್ಕೆ ತಲುಪಿದೆ. ಸಾಹಿತ್ಯ ಅಧ್ಯಯನ ಮಾಡದ ಇರುವ ಇತರೆ ವಿದ್ಯಾರ್ಥಿಗಳು ಬರವಣಿಗೆ ಮುಂದಾಗುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವುದನ್ನು ನಾವಿಂದು ಕಾಣಬಹುದಾಗಿದೆ. ಸಾಹಿತ್ಯ ರಚನೆಗೆ ಪರಿಕಲ್ಪನೆ ಮುಖ್ಯ. ಅದನ್ನು ಸೃಜನಶೀಲತೆಯಿಂದ ಬಳಸಿ ಸಿಕ್ಕ ಚಿಕ್ಕ ಅವಕಾಶಗಳನ್ನು ಬಳಸಿಕೊಂಡು ಮಾತೃಭಾಷೆಯಲ್ಲಿ ಸಾಹಿತ್ಯ ಸೃಷ್ಟಿಸಬಹುದು ಎಂದು ಹೇಳಿದರು.ತಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಕಲ್ಪನೆಯ ಮೂಲಕ ವಾಸ್ತವಿಕತೆಗೆ ಹತ್ತಿರವಾಗುವಂತ ಕಥೆ- ಸಾಹಿತ್ಯ ರಚನೆ ಮಾಡುವ ಪರಿಯನ್ನು ಉದಾಹರಣೆ ಜೊತೆಗೆ ವಿದ್ಯಾರ್ಥಿಗಳಿಗೆ ತಿಳಿಸಿದದರು. ಕಥೆ ರಂಜನೆಯಷ್ಟೆ ಆಗಬಾರದು. ಅದರಲ್ಲಿ ತಿಳುವಳಿಕೆ, ಅರಿವು, ಜಾಗೃತಿ, ಸಂದೇಶ ಇರಬೇಕು ಎಂದು ಕತೆ ಬರವಣಿಗಾರರಿಗೆ ಸೂಚಿಸಿದರು.ಪ್ರಾಂಶುಪಾಲ ಡಾ. ಹೇಮಲತಾ ಪಿ ಮಾತನಾಡಿ, ಪುಸ್ತಕಗಳನ್ನು ನಾವು ಕೇವಲ ಪರೀಕ್ಷೆ ಹಾಗೂ ಅಂಕಗಳ ದೃಷ್ಟಿಕೋನದಿಂದ ಓದದೆ, ಕಥೆಯ ರಚನೆಯನ್ನು ಅರ್ಥಮಾಡಿಕೊಂಡು ಅದನ್ನು ಆಧುನಿಕರಣ ಮಾಡಿ ಹೊಸತನದೊಂದಿಗೆ ಹೇಳಬಹುದಾದ ಸಾಧ್ಯತೆಗಳಿವೆ. ನಮ್ಮಲ್ಲಿ ಸೃಜನಶೀಲತೆಯನ್ನು ಬೆಳೆಸಿಕೊಂಡು ಕಥೆ ರಚನೆಯನ್ನು ಪ್ರಾರಂಭಿಸಬೇಕು. ನಮ್ಮನ್ನು ನಾವು ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ರಮೇಶ್ ಎಂ.ವಿ., ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಐಕ್ಯೂಎಸಿ ಸಂಯೋಜಕ ಸಯ್ಯದ್ ಬಾಬು ಎಚ್.ಬಿ, ಆಶಾ, ವಿದ್ಯಾರ್ಥಿನಿ ಮೃದುಲಾ ಇದ್ದರು.