ಬ್ರಿಟಿಷರ ಶಿಕ್ಷಣದ ಮಾನಸಿಕತೆಯಿಂದ ಹೊರಬನ್ನಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

| Published : Sep 15 2025, 01:01 AM IST

ಬ್ರಿಟಿಷರ ಶಿಕ್ಷಣದ ಮಾನಸಿಕತೆಯಿಂದ ಹೊರಬನ್ನಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಶಿರಸಿ: ಬ್ರಿಟಿಷರ ಶಿಕ್ಷಣದ ಮಾನಸಿಕತೆಯಿಂದ ಹೊರಬಂದು ಸ್ವಾವಲಂಬಿ ಜೀವನ ಸಾಗಿಸಬೇಕು ಎಂಬ ಮೂಲ ಉದ್ದೇಶದಿಂದ ಕೇಂದ್ರ ಸರ್ಕಾರವು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಮುಖ್ಯ ಅಂಚೆಕಚೇರಿಯಲ್ಲಿ ಭಾರತೀಯ ಅಂಚೆ ಇಲಾಖೆಯ ಪ್ರಧಾನಮಂತ್ರಿ ವಿಶ್ವಕರ್ಮ ಟೂಲ್ ಕಿಟ್ ಹಾಗೂ ಅಪಘಾತ ವಿಮಾ ಪರಿಹಾರದ ಚೆಕ್‌ನ್ನು ವಿತರಿಸಿ, ಅವರು ಮಾತನಾಡಿದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ದೇಶದ ಭವಿಷ್ಯ ಯೋಚಿಸಿ, ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಿತ ಕಾರ್ಯಕ್ರಮವಾಗಿ ರೂಪಿಸಿದ್ದಾರೆ. ಮೊದಲ ಹಂತದಲ್ಲಿ 18 ವಿಭಾಗದಲ್ಲಿ ಅರ್ಜಿ ಕರೆಯಲಾಗಿತ್ತು. ಟೇಲರಿಂಗ್ ಹೆಚ್ಚಿನ ಅರ್ಜಿ ಬಂದಿತ್ತು. ಆದರೆ ಅದಕ್ಕೆ ಆದ್ಯತೆ ನೀಡಿಲ್ಲ.‌ ಸುಮಾರು 10 ಸಾವಿರ ಜನರು ಅರ್ಹರು ಎಂದು ಗುರುತಿಸಲಾಗಿದೆ. ಸುಮಾರು 5 ಸಾವಿರ ಜನರಿಗೆ ತರಬೇತಿ ನೀಡಲಾಗಿದ್ದು,‌ ಒಂದು ದಿನಕ್ಕೆ ₹500 ನೀಡಿ ತರಬೇತಿ ನೀಡಲಾಗುತ್ತದೆ. ತರಬೇತಿ ಹೊಂದಿದ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ತಲಾ ₹1 ಲಕ್ಷದಂತೆ ₹35 ಕೋಟಿ ನೀಡಿದ್ದೇವೆ. 15 ತಿಂಗಳೊಳಗೆ ಭರಣ ಮಾಡಿದರೆ ₹2 ಲಕ್ಷ ನೀಡುತ್ತಾರೆ.‌ ಅದನ್ನು 30 ತಿಂಗಳ ಒಳಗಡೆ ಮರುಪಾವತಿ ಮಾಡಬೇಕು ಎಂದರು.

ಶಿರಸಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ. ಪ್ರಾಸ್ತಾವಿಕ ಮಾತನಾಡಿ, ವಿಶ್ವಕರ್ಮರ ಕುಲ ಕಸಬು ಹೆಚ್ಚಿಸಿಕೊಳ್ಳಲು ತರಬೇತಿ ಹಾಗೂ ಸಲಕರಣೆ ಕಿಟ್‌ಗಳನ್ನು ಭಾರತ ಸರ್ಕಾರ ವಿತರಣೆ ಮಾಡುತ್ತಿದೆ. ಶಿರಸಿ ಹಾಗೂ ಕಾರವಾರ ವಿಭಾಗದ ಎಲ್ಲ ತಾಲೂಕಿನಲ್ಲಿ 5179 ಟೂಲ್‌ ಕಿಟ್ ವಿತರಣೆ ಮಾಡಲಾಗಿದೆ. ಕಳೆದ 3 ವರ್ಷಗಳಿಂದ 10 ಮರಣ ಪ್ರಕರಣಗಳಲ್ಲಿ ತಲಾ ₹10 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. 54 ಅಪಘಾತಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ವೆಚ್ಚ ನೀಡಿದ್ದೇವೆ. 579 ಫಲಾನುಭವಿಗಳಿಗೆ ವಿಶ್ವಕರ್ಮಕ ಕಿಟ್ ವಿತರಣೆ ಮಾಡಿದ್ದೇವೆ. ಅಪಘಾತ ವಿಮೆಯಲ್ಲಿ ವಾರ್ಷಿಕ ₹20 ಭರಣ ಮಾಡಿದರೆ ₹2 ಲಕ್ಷ ಪರಿಹಾರ ಸಿಗುತ್ತದೆ. 565 ವಾರ್ಷಿಕ ಕಂತು ಭರಣ ಮಾಡಿದರೆ ₹10 ಲಕ್ಷ ಪರಿಹಾರ ಸಿಗುತ್ತಿತ್ತು. 8805 ಜನರಿಗೆ ಅಪಘಾತ ವಿಮೆಯ ಪರಿಹಾರ ವಿತರಣೆ ಮಾಲಾಗಿದೆ ಎಂದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ನಾಮರ್ದೇಶಿತ ಸದಸ್ಯ ಗುರುಪ್ರಸಾದ ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ್ ಭಟ್, ಪ್ರಮುಖರಾದ ಆರ್‌.ಡಿ.ಹೆಗಡೆ ಜಾನ್ಮನೆ, ನಾಗರಾಜ ನಾಯ್ಕ, ಆರ್‌.ವಿ.ಹೆಗಡೆ ಚಿಪಗಿ ಇದ್ದರು. ಅಧಿಕಾರಿ ಸವಿತಾ ಭಟ್ಟ ಸ್ವಾಗತಿಸಿದರು. ಅಂಚೆ ಸಿಬ್ಬಂದಿ ಭವ್ಯಾ ಭಟ್ಟ ಪ್ರಾರ್ಥಿಸಿದರು.