ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಪ್ರತಿಭೆ ಇದ್ದಾಗ ಜೀವನ ಸಾಗಿಸಲು ಉತ್ತಮ ಉದ್ಯೋಗಗಳು ದೊರಕುತ್ತವೆ. ಹಳ್ಳಿಗಾಡಿನ ಮಕ್ಕಳು ಕೀಳರಿಮೆ ಬಿಟ್ಟು ಗುಣಾತ್ಮಕ ಶಿಕ್ಷಣ ಪಡೆದು ಸ್ವಾಲಂಬಿ ಜೀವನ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಪ್ರತಿಭೆ ಇದ್ದಾಗ ಜೀವನ ಸಾಗಿಸಲು ಉತ್ತಮ ಉದ್ಯೋಗಗಳು ದೊರಕುತ್ತವೆ. ಹಳ್ಳಿಗಾಡಿನ ಮಕ್ಕಳು ಕೀಳರಿಮೆ ಬಿಟ್ಟು ಗುಣಾತ್ಮಕ ಶಿಕ್ಷಣ ಪಡೆದು ಸ್ವಾಲಂಬಿ ಜೀವನ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆ, ಎನ್‌ಎಸ್‌ಎಸ್ ,ಯುವ ರೆಡ್ ಕ್ರಾಸ್ ಐಕ್ಯೂಎಸಿ ಉದ್ಯೋಗ ಕೋಶ ವಾಣಿಜ್ಯ ಶಾಸ್ತ್ರ ವಿಭಾಗದ ಕಂಪ್ಯೂಟರ್ ಲ್ಯಾಬ್ ಮತ್ತು ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಕೌಶಲ ಆಧಾರಿತ ಶಿಕ್ಷಣ ಜವಾಬ್ದಾರಿಯುತ ಉದ್ಯೋಗಗಳಿಗೆ ಅವಶ್ಯಕವಾದ ನೈಪುಣ್ಯತೆ ಕಲಿಸುತ್ತದೆ. ಇದರಿಂದ ವೃತ್ತಿ ನೈಪುಣ್ಯ ಸಾಧ್ಯ. ಕಂಪ್ಯೂಟರ್ ಶಿಕ್ಷಣ ಪ್ರಸ್ತುತ ಜಗತ್ತಿನೊಂದಿಗೆ ಸ್ಪರ್ಧೆ ನೀಡಲು ಅವಕಾಶ ಕೊಡುತ್ತದೆ. ಇದನ್ನು ಅರಿತು ವಿಜ್ಞಾನ, ಅಕ್ಷರ ಜ್ಞಾನ, ನೈಪುಣ್ಯತೆ ಬೇರತಾಗ ಜೀವ ಸಫಲವಾಗುತ್ತದೆ. ಕಲಿತ ವಿದ್ಯೆ ಸಮಾಜಕ್ಕೆ ಕೊಡುಗೆಯಾದರೆ ಸಾಮಾಜಿಕ ಜೀವನದಲ್ಲಿ ಯಶಸ್ವಿಯಾಗಬಹುದು ಎಂದರು.ವಿದ್ಯಾರ್ಥಿಗಳು ಭವಿಷ್ಯ ರೂಪಿಸಲು ಕಾಲೇಜಿನಲ್ಲಿ ಸುಸಜ್ಜಿತ ವಾಣಿಜ್ಯ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿದ್ದು, . ವಿವೇಚನೆಯಂದ ಬಳಸಿ ತಾಂತ್ರಕತೆಯಲ್ಲೂ ತಮ್ಮ ಚಾಪು ಮೂಡಿಸಿ ಕಾಲೇಜಿಗೆ ಅವಶ್ಯವಿರುವ ಎಲ್ಲ ಮೂಲ ಭೂತ ಸೌಕರ್ಯಗಳನ್ನು ಒದಗಿಸಿ ಕೊಡಲು ಬದ್ಧ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಧುಗಿರಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಕಟ್ಟಾ ನರಸಿಂಹಮೂರ್ತಿ ಮಾತನಾಡಿ, ಯುವ ಜನತೆ ಟಿ.ವಿ. ಮೊಬೈಲ್ ಗಳಿಗೆ ದಾಸರಾಗದೇ ತಮ್ಮ ಸುತ್ತಮುತ್ತಲ ಆಗು ಹೋಗುಗಳಿಗೆ ಸ್ಪಂದಿಸುತ್ತಾ ವಿವೇಚನಾ ಶಕ್ತಿಯನ್ನು ಬೆಳಸಿಕೊಂಡು ಜ್ಞಾನ ಸಂಪಾದಿಸುತ್ತಾ ಉತ್ತಮ ಸತ್ಪ್ರಜೆಗಳಾಗಿ ಬದುಕು ನಡೆಸಿ ಎಂದರು.ಪ್ರಾಂಶುಪಾಲ ಪ್ರೊ. ಡಾ.ಕೆ.ಎಸ್.ಕುಮಾರ್ ಅಧ್ಯಕ್ಷತೆ ಮಾತನಾಡಿ, ಇಲ್ಲಿನ ಶಾಸಕರಾದ ಕೆ.ಎನ್.ರಾಜಣ್ಣರವರು ಈ ಕಾಲೇಜನ್ನು ಮಾದರಿಯಾಗಿ ಪರಿವರ್ತಿಸಿದ್ದು, ಕಾಲೇಜಿಗೆ ಅವಶ್ಯವಿರುವ ಬೋಧಕ ,ಬೋಧಕೇತರ ಸಿಬ್ಬಂದಿ , ಹೊಸ ಕೋರ್ಸ್‌ಗಳನ್ನು ಮತ್ತು ಮೂಲಕೌಕರ್ಯ ಒದಗಿಸಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಕೊಂಡು ಉನ್ನತ ವ್ಯಾಸಂಗ ಮಾಡುವಂತೆ ಕರೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಡಿ.ಎಸ್.ಮುನೀಂದ್ರ ಕುಮಾರ್ 24-25ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿದರು.ಸಮಾರಂಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಲಾಲಪೇಟೆ ಮಂಜುನಾಥ್, ಡಿವೈಎಸ್‌ಪಿ ಮಂಜುನಾಥ್ ಇಓ ಲಕ್ಷ್ಮಣ್, ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರೊ.ಮಂಜುನಾಥ್,ಪ್ರಾಧ್ಯಾಪಕ ಡಾ.ಎಂ.ಗೋವಿಂದಾರಯ, ಮುರುಳೀಧರ್,ಡಾ.ವಿಜಯಲಕ್ಷ್ಮೀ,ವೇದಲಕ್ಷ್ಮೀ,ಡಾ.ಬುಡುಸನಹಳ್ಳಿ ಡಾ.ಮಂಜುನಾಥ್, ಡಾ.ರಂಜಿತಾ, ಡಾ.ದುರ್ಗಪ್ಪ, ಡಾ.ಶ್ರೀನಿವಾಸಪ್ಪ, ಡಾ.ಲತಾ , ಎನ್.ರಾಮಮೂರ್ತಿ, ನಟರಾಜು, ಡಾ.ನಂದಿನಿ, ಭಾರ್ಗವಿ, ಮಂಜುನಾಥ್ ,ದರ್ಶನ್ . ಚಂದ್ರಶೇಖರ್ ವ್ಯವಸ್ಥಾಪಕಿ ಚಂದ್ರಕಲಾ ಉಪಸ್ಥಿತರಿದ್ದರು.