ಸಾರಾಂಶ
ಆದಿಶಕ್ತಿ ದುಷ್ಟರನ್ನು ಸಂಹಾರ ಮಾಡಿದ ರೀತಿ ಮನುಷ್ಯನ ಒಳಗಿರುವ ದುಷ್ಟ ಬುದ್ಧಿಯನ್ನು ದೂರ ಮಾಡಿ ಎಲ್ಲರನ್ನೂ ಗೌರವಿಸುವಂತಹ ಸಂಸ್ಕಾರ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ ಹೇಳಿದರು. ಶಿರಾದಲ್ಲಿ ವಿಜಯದಶಮಿ ಅಂಗವಾಗಿ ಬನ್ನಿ ಉತ್ಸವದಲ್ಲಿ ಮಾತನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಸಲಹೆಕನ್ನಡಪ್ರಭ ವಾರ್ತೆ ಶಿರಾ ಆದಿಶಕ್ತಿ ದುಷ್ಟರನ್ನು ಸಂಹಾರ ಮಾಡಿದ ರೀತಿ ಮನುಷ್ಯನ ಒಳಗಿರುವ ದುಷ್ಟ ಬುದ್ಧಿಯನ್ನು ದೂರ ಮಾಡಿ ಎಲ್ಲರನ್ನೂ ಗೌರವಿಸುವಂತಹ ಸಂಸ್ಕಾರ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ ಹೇಳಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಅಂಭಾದೇವಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಬನ್ನಿ ಉತ್ಸವದಲ್ಲಿ ಮಾತನಾಡಿದರು. ಭಕ್ತರ ಇಷ್ಟಾರ್ಥ ಸಿದ್ಧಿಗೊಳಿಸುವ ಶ್ರೀ ಅಂಬಾದೇವಿ ನಾಡಿಗೆ ಕರುಣಿಸಲಿ, ಉತ್ತಮ ಮಳೆ ಬೆಳೆಯಾಗಿ ಅನ್ನದಾತನ ಬದುಕು ಬಂಗಾರವಾಗಲಿ ಎಂದು ಶ್ರೀ ಅಂಬಾ ದೇವಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.ದೇವಸ್ಥಾನ ಪ್ರಧಾನ ಅರ್ಚಕ ಶಶಿಧರ್ ಮಾತನಾಡಿ, ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಶ್ರೀ ಅಂಬಾದೇವಿ ಆಶೀರ್ವಾದ ಹೆಚ್ಚಾಗಿರುವ ಕಾರಣ ಹೊಸಹಳ್ಳಿ ಶ್ರೀ ಅಂಬಾದೇವಿ ದೇವಸ್ಥಾನ ಭಕ್ತರ ನಂಬಿಕೆ ದೈವಿಕ ಎಂದರು.ಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ್ ವಿಜಯದಶಮಿ ಬನ್ನಿ ಉತ್ಸವ ನೆರವೇರಿಸಿದರು. ವಿಜಯದಶಮಿ ಅಂಗವಾಗಿ ಪ್ರಧಾನ ಅರ್ಚಕ ಶಶಿಧರ್ ಹಾಗೂ ಭಗೀರಥಿ ಮುತ್ತೈದೆಯರಿಗೆ ಬಾಗಿನ, ನೂರಾರು ಮಹಿಳೆಯರಿಗೆ ಸೀರೆ ವಿತರಣೆ ಮಾಡಿ ದಸರಾ ಹಬ್ಬಕ್ಕೆ ಮೆರಗು ನೀಡಿದರು. ಮುಖಂಡ ಟಿ. ರಾಮಚಂದ್ರಪ್ಪ, ಲಕ್ಷ್ಮಣ್, ನಿವೃತ್ತ ಸಾರಿಗೆ ಅಧಿಕಾರಿ ತಿಮ್ಮರಾಯಪ್ಪ, ತಾಪಂ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ರಂಗಸ್ವಾಮಿ, ಗ್ರಾಪಂ ಮಾಜಿ ಸದಸ್ಯ ನಾಗರಾಜು, ಮುಖಂಡ ಸಿದ್ದಲಿಂಗಪ್ಪ, ನಟರಾಜ್, ಪರಮೇಶ್ , ಜಯಣ್ಣ, ಬೆಸ್ಕಾಂ ಮಹಾಲಿಂಗಪ್ಪ, ಕ್ಯಾದಿಗುಂಟೆ ಮುದ್ದರಾಜು, ಎಚ್.ಎಸ್. ಪ್ರಕಾಶ್, ಎನ್.ಕರಿಯಣ್ಣ, ಸೋಮಶೇಖರ್, ರಾಜಕುಮಾರ್ ಭಾಗವಹಿಸಿದ್ದರು.