ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ: ನಾಗರಾಜ

| Published : Oct 02 2024, 01:19 AM IST

ಸಾರಾಂಶ

ವಡಗೇರಾ ತಾಲೂಕಿನ ಹಯ್ಯಾಳ ಬಿ. ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮಣ್ಣು ಪರೀಕ್ಷೆ ಮಾಡಿಸಿಕೊಂಡ ರೈತರಿಗೆ ಮಣ್ಣಿನ ಆರೋಗ್ಯ ತಪಾಸಣೆ ಚೀಟಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ವಡಗೇರಾ

ಮಣ್ಣಿನ ಆರೋಗ್ಯಕ್ಕೆ ರೈತರು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ ರೈತರಿಗೆ ಸಲಹೆ ನೀಡಿದರು.

ತಾಲೂಕಿನ ಹಯ್ಯಾಳ ಬಿ. ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಹತ್ವಕಾಂಕ್ಷಿ ಯೋಜನೆ ಅಡಿಯಲ್ಲಿ ಮಣ್ಣಿನ ಆರೋಗ್ಯ ತಪಾಸಣೆ ಚೀಟಿ ವಿತರಿಸಿ ಮಾತನಾಡಿ, ಬೆಳೆಗಳ ಉತ್ತಮ ಬೆಳವಣಿಗೆಗೆ 16 ಪೋಷಕಾಂಶಗಳ ಅವಶ್ಯಕತೆಯಿದ್ದು, ಇವುಗಳಲ್ಲಿ ಬಹುಪಾಲು ಪೋಷಕಾಂಶಗಳು ಮಣ್ಣಿನಿಂದ ದೊರೆಯುತ್ತವೆ. ಆದ್ದರಿಂದ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆ ತೆಗೆಯಬಹುದು ಎಂದರು.

ಮಣ್ಣಿನ ಪರೀಕ್ಷೆಯಿಂದ ತಮ್ಮ ಭೂಮಿಯ ಮಣ್ಣಿನ ವಿವರ ಪೋಷಕಾಂಶಗಳ ಲಭ್ಯತೆ ಮತ್ತು ಅವುಗಳ ಕೊರತೆ ನೀಗಿಸಲು ಸಹಕಾರಿಯಾಗುತ್ತದೆ. ಮಣ್ಣಿನ ಪರೀಕ್ಷೆಗಳ ಆಧಾರಿತದ ಮೇಲೆ ಗೊಬ್ಬರ ಬಳಸಲು ಅನುಕೂಲವಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ರೈತರು ಇದ್ದರು.