ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸರ್ಕಾರದಿಂದ ಅನುದಾನ ಪಡೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವ ಶಾಸಕರಿಗೂ ಅನುದಾನ ಸಿಗುತ್ತಿಲ್ಲ. ಅದರ ಮಧ್ಯೆ ಯಾವ ಇಲಾಖೆಯಲ್ಲಿ ಹಣವಿದೆ ಎಂಬುದು ಹುಡುಕಾಡಿ ತರುತ್ತಿದ್ದೇನೆ. ಅನುದಾನ ಸಿಗುತ್ತಿಲ್ಲವೆಂದು ಸುಮ್ಮನೇ ಕೂಡದೇ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಹೇಳಿದರು.ಗುತ್ತಿಹಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಇಂಜನಿಯರಿಂಗ್ ಉಪವಿಭಾಗ ಮುದ್ದೇಬಿಹಾಳದ ೨೦೨೪-೨೫ನೇ ಸಾಲಿನ ೩೦೫೪ ಟಾಸ್ಕ್ ಪೋರ್ಸ್ ಅನುದಾನದಡಿ ₹೧೮ ಲಕ್ಷ ವೆಚ್ಚದಲ್ಲಿ ಗುತ್ತಿಹಾಳ ಕ್ರಾಸ್‌ದಿಂದ ಗ್ರಾಮದ ರಸ್ತೆ ಸುಧಾರಣೆ ಕಾರ್ಯಕ್ಕೆ ಭೂಮಿಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಗುತ್ತಿಹಾಳ ಗ್ರಾಮದ ರಸ್ತೆಯೂ ಸಂಪೂರ್ಣ ಕೆಸರು ಗದ್ದೆಯಾಗಿತ್ತು. ಹೀಗಾಗಿ, ಸದ್ಯ ತಾತ್ಕಾಲಿಕವಾಗಿ ಗರಸು ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಶಾಶ್ವತ ರಸ್ತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಜನರ ಬೇಡಿಕೆಯಂತೆ ದೇವಸ್ಥಾನಗಳಿಗೂ ಅನುದಾನ ಇಟ್ಟಿದ್ದೇನೆ. ಮತ್ತು ಬಾಡಿಹಾಳ ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕೂ ಅನುದಾನ ಮಿಸಲಿದೆ. ನೀವು ಕೇಳುವುದರಲ್ಲಿ ತಪ್ಪಿಲ್ಲ, ಅತ್ಯವಶ್ಯಕ ಬೇಡಿಕೆಯನ್ನು ಮಾಡಿಕೊಡುತ್ತೇನೆ ಎಂದು ಹೇಳಿದರು.ಜೆಡಿಎಸ್ ತಾಲೂಕಾಧ್ಯಕ್ಷ ಮಡುಸಾಹುಕಾರ ಬಿರಾದಾರ ಮಾತನಾಡಿ, ಗ್ಯಾರೆಂಟಿ ಹೆಸರಿನಲ್ಲಿ ಯಾವ ಶಾಸಕರಿಗೂ ಅನುದಾನ ಸಿಗುತ್ತಿಲ್ಲ. ಅಂತಹದರಲ್ಲಿಯೇ ಇಲಾಖೆಗಳಿಗೆ ಪೈಲ್‌ನೊಂದಿಗೆ ಸುತ್ತಾಡಿ ಸಿಕ್ಕ ಅನುದಾನವನ್ನು ತರುವಲ್ಲಿ ಶಾಸಕ ರಾಜುಗೌಡರು ಪ್ರಯತ್ನ ನಡೆಸಿದ್ದಾರೆ. ರಸ್ತೆ ಅಭಿವೃದ್ದಿಗೆ ಮತ್ತು ಕುಡಿಯುವ ನೀರಿಗೆ ಹೆಚ್ಚಿಗೆ ಒತ್ತು ಕೊಡುತ್ತಿದ್ದಾರೆ. ನಿಮ್ಮೇಲ್ಲರ ಸಹಕಾರದಿಂದ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಇಡೇರಿಸಲು ಸಾಧ್ಯವಾಗಲಿದೆ ಎಂದರು.ಈ ವೇಳೆ ಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಸರೋಜಿನಿ ಮಸರಕಲ್ಲ, ಮುಖಂಡರಾದ ರುಗಳಾದ ವೇ.ಮಲ್ಲಯ್ಯ ಹಿರೇಮಠ, ಬಸನಗೌಡ ಹಳ್ಳಿಪಾಟೀಲ, ಸಾಹೇಬಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ರಾಮನಗೌಡ ಜಂಬಗಿ, ಉಮೇಶ ಮೈಲೇಶ್ವರ, ವಿರೇಶ ಕಾರನೂರ, ಬಸನಗೌಡ ಪಾಟೀಲ, ಪ್ರಭುಗೌಡ ಪಾಟೀಲ, ನಿಂಗಣ್ಣ ಕಲ್ಬುರ್ಗಿ, ಬಸವರಾಜ ಜಂಬಗಿ, ಬಸನಗೌಡ ಪಾಟೀಲ, ಸಿದ್ದನಗೌಡ ಲಕ್ಕುಂಡಿ, ನಿಂಗನಗೌಡ ಬಿರಾದಾರ, ಅನೀಲ ಗೊಟಗುಣಕಿ, ಅಪ್ಪು ಕುಳಗೇರಿ, ಶಂಕರ ಕಟ್ಟಿಮನಿ, ಬಂದಗೀಸಾ ನಾಯ್ಕೋಡಿ, ಗುರಲಿಂಗಪ್ಪ ಪತ್ತೆಪೂರ, ಹುಸೇನ, ಯಮನಪ್ಪ ಮಾದರ, ನಾನಾಗೌಡ ಬಿರಾದಾರ, ರಾಜೇಸಾ ನದಾಪ, ಬಸವರಾಜ ಬಿರಾದಾರ, ಇಂಜನಿಯರ್ ಸಂತೋಷ, ಗುತ್ತಿಗೆದಾರ ಬಸನಗೌಡ ಮೊದಲಾದವರು ಇದ್ದರು. ಪಿಡಿಒ ಪ್ರಭು ಚನ್ನೂರ ಸ್ವಾಗತಿಸಿ ನಿರೂಪಿಸಿದರು.
;Resize=(128,128))
;Resize=(128,128))