ಪರೀಕ್ಷೆ ಮಾಡಿಸಿದರೆ ಸ್ತನ ಕ್ಯಾನ್ಸರ್‌ ಅಪಾಯ ತಡೆಯಬಹುದು

| Published : Mar 19 2024, 12:52 AM IST

ಸಾರಾಂಶ

ಪರೀಕ್ಷೆ ಮಾಡಿಸಿ ಕೊಂಡರೆ ಸ್ತನ ಕ್ಯಾನ್ಸರ್‌ ಅಪಾಯದಿಂದ ಪಾರಾಗಬಹುದು ಎಂಬ ಅರಿವು ಮೂಡುವ ಅಗತ್ಯವಿದೆ ಎಂದು ಸೀನಿಯರ್ ಛೇಂಬರ್ ಇಂಟರನ್ಯಾಷನಲ್ ತರೀಕೆರೆ ಪ್ರಗತಿ ಸಂಸ್ಥೆ ಅಧ್ಯಕ್ಷರಾದ ಕಲ್ಪನಾ ಸುಧಾಮ ಹೇಳಿದರು.

ತರೀಕೆರೆಯಲ್ಲಿ ಉಚಿತ ಸ್ತನ ಕ್ಯಾನ್ಸ್ ರ್ ತಪಾಸಣಾ ಶಿಬಿರದಲ್ಲಿ ಕಲ್ಪನಾ ಸುಧಾಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಪರೀಕ್ಷೆ ಮಾಡಿಸಿ ಕೊಂಡರೆ ಸ್ತನ ಕ್ಯಾನ್ಸರ್‌ ಅಪಾಯದಿಂದ ಪಾರಾಗಬಹುದು ಎಂಬ ಅರಿವು ಮೂಡುವ ಅಗತ್ಯವಿದೆ ಎಂದು ಸೀನಿಯರ್ ಛೇಂಬರ್ ಇಂಟರನ್ಯಾಷನಲ್ ತರೀಕೆರೆ ಪ್ರಗತಿ ಸಂಸ್ಥೆ ಅಧ್ಯಕ್ಷರಾದ ಕಲ್ಪನಾ ಸುಧಾಮ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿ, ಇದು ನಮ್ಮ ಸಮಾಜದ ಜನತೆಗೆ ಅತ್ಯಾವಶ್ಯಕ.ಈ ನಿಟ್ಟಿನಲ್ಲಿ ಶಿಬಿರ ಏರ್ಪಡಿಸಲಾಗಿದೆ. ಜನತೆಗೆ ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿಯಾಗಿ ಉಚಿತ ವೈದ್ಯಕೀಯ ಸೌಲಭ್ಯ ದೊರೆಯಬೇಕು ಎಂದು ಆಶಿಸಿದರು.

ಇದರ ಸದುಪಯೋಗವನ್ನು 48 ಜನ ಪಡೆದುಕೊಂಡರು. ಅವರಲ್ಲಿ ಕೆಲವರಿಗೆ ಕಾಯಿಲೆ ಕುರುಹು ಕಂಡು ಪರೀಕ್ಷಿಸಿದರು.ಶಿವಮೊಗ್ಗ ನಾರಾಯಣ ಹೃದಯಾಲಯ ಡಾ.ಮಧಿಹಾ ಶಿಬಿರ ಉದ್ಘಾಟನೆ ನೆರವೇರಿಸಿದರು. ಶಿವಮೊಗ್ಗ ನಾರಾಯಣ ಹೃದಯಾಲಯ ಆಸ್ಪತ್ರೆ ಕ್ಯಾನ್ಸರ್ ಪರೀಕ್ಷಿಸಲು ಮಾಮೂಗ್ರಫಿ ಬಸ್, ಮತ್ತು ಟೆಕ್ನಿಷಿಯನ್ ಗಣೇಶ್, ಡಾ. ಮಧಿಹಾ, ಅತಿಹಾ ಇಬ್ಬರು ಟೆಕ್ನಿಷಿಯನ್ಸ್ ಹಾಜರಿದ್ದರು,

ಈ ಕಾರ್ಯಕ್ರಮಕ್ಕೆ ಇನ್ನೆರವೀಲ್ ಅಧ್ಯಕ್ಷೆ ಗೀತಾ ಹರ್ಷ, ಕಾರ್ಯದರ್ಶಿ ಆಶಾ ಭೋಸ್ಲೆ, ಖಜಾಂಚಿ ವಿಶಾಲಾಕ್ಷಿ ಮಂಜುನಾಥ್, ಸಹಕಾರ್ಯದರ್ಶಿ ತಿಮ್ಮಕ್ಕ ಗಾಳಪ್ಪ ಭಾಗವಹಿಸಿದ್ದರು.

18ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ ತರೀಕೆರೆ ಪ್ರಗತಿ ಸಂಸ್ಥೆ ಅಧ್ಯಕ್ಷರಾದ ಕಲ್ಪನಾ ಸುಧಾಮ ರವರಿಂದ ಏರ್ಪಡಿಸಿದ್ದ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಶಿವಮೊಗ್ಗ ನಾರಾಯಣ ಹೃದಯಾಲದ ಡಾ.ಮದೀಹ ನೆರವೇರಿಸಿದರು.