ಹೊನ್ನಾಳಿ: ಮುಕ್ತೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಜಿ.ಎಚ್.ಹನುಮಂತಪ್ಪ

| Published : Feb 02 2025, 01:01 AM IST

ಹೊನ್ನಾಳಿ: ಮುಕ್ತೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಜಿ.ಎಚ್.ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್. ಹನುಮಂತಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಭೂ ಸೇನಾ ನಿಗಮದ (ಕೆ.ಆರ್.ಐ.ಡಿ,ಎಲ್.) ಸಹಾಯಕ ಕಾರ್ಯಪಾಲಕ ಆಭಿಯಂತರ ನಿತಿನ್ ಜಾಧವ್ ಘೋಷಣೆ ಮಾಡಿದ್ದಾರೆ.

- ಸವಿತಾ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ- - - ಹೊನ್ನಾಳಿ: ತಾಲೂಕಿನ ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್. ಹನುಮಂತಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಭೂ ಸೇನಾ ನಿಗಮದ (ಕೆ.ಆರ್.ಐ.ಡಿ,ಎಲ್.) ಸಹಾಯಕ ಕಾರ್ಯಪಾಲಕ ಆಭಿಯಂತರ ನಿತಿನ್ ಜಾಧವ್ ಘೋಷಣೆ ಮಾಡಿದರು.

ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 11 ಸದಸ್ಯರ ಬಲವಿದೆ. ಅಧ್ಯಕ್ಷೆಯಾಗಿದ್ದ ಆರ್.ಸವಿತಾ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಜಿ.ಎಚ್. ಹುನುಮಂತಪ್ಪ ಅವರೋಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಇದ್ದ ಕಾರಣ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್.ಹನುಮಂತಪ್ಪ ಆವಿರೋಧವಾಗಿ ಅಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಆರ್.ಸವಿತಾ, ಕೆ.ಎಸ್. ಕಲ್ಲೇಶ್, ಯಶೋಧಮ್ಮ, ಎ.ಕೆ.ಬಾಲಪ್ಪ, ಜಿ.ಸಿ. ಪುಪ್ಪಾ, ಕೆ.ಬಿ.ಮಹಾಂತೇಶ, ರಮೀಜಾ ಬಿ, ಸರೋಜಮ್ಮ, ಹನುಮಂತಪ್ಪ ಟಿ.ಬಿ. ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಮುಖಂಡರಾದ ಚಂದಪ್ಪ, ಮರುಳಸಿದ್ದಪ್ಪ ಇನ್ನಿತರ ಮುಖಂಡರು ಇದ್ದರು.

ಚುನಾವಣ ಪ್ರಕ್ರಿಯೇ ಮುಗಿದ ನಂತರ ಸ್ಥಳಕ್ಕೆ ಅಗಮಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

- - - -30ಎಚ್ಎಲ್.ಐ1.ಜೆಪಿಜಿ:

ಹೊನ್ನಾ‍ಳಿ ತಾಲೂಕು ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎಚ್.ಹನುಮಂತಪ್ಪ ಅವರನ್ನು ಗ್ರಾಪಂ ಉಪಾದ್ಯಕ್ಷೆ, ಸದಸ್ಯರು, ಗ್ರಾಮದ ಮುಖಂಡರು ಅಭಿನಂದಿಸಿದರು.