ಸಾರಾಂಶ
ಪಂಜದ ಕೊರಗ ಸಮುದಾಯದ ಏಳು ಕುಟುಂಬದ 15 ಪುರುಷರು ಹಾಗೂ 10 ಮಹಿಳೆಯರು ಸೇರಿದಂತೆ ಒಟ್ಟು 25 ಜನರನ್ನು ಮರಳಿ ಮಾತೃ ಧರ್ಮಕ್ಕೆ ಕರೆ ತರಲಾಯಿತು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಪಂಜದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮ ರಕ್ಷಾ ಯಜ್ಞ ಕಾರ್ಯಕ್ರಮ ನಡೆಯಿತು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದವರನ್ನು ಈ ಕಾರ್ಯಕ್ರಮದಲ್ಲಿ ಮಾತೃ ಧರ್ಮಕ್ಕೆ ಕರೆ ತರಲಾಗಿದೆ.ಕೆಲವು ವರ್ಷಗಳ ಹಿಂದೆ ಈ ಪರಿಸರದಲ್ಲಿ, ಕ್ರೈಸ್ತ ಮತಕ್ಕೆ ಮತಾಂತರಗೊಂಡ ಪಂಜದ ಕೊರಗ ಸಮುದಾಯದ ಏಳು ಕುಟುಂಬದ 15 ಪುರುಷರು ಹಾಗೂ 10 ಮಹಿಳೆಯರು ಸೇರಿದಂತೆ ಒಟ್ಟು 25 ಜನರನ್ನು ಮರಳಿ ಮಾತೃ ಧರ್ಮಕ್ಕೆ ಕರೆ ತರಲಾಯಿತು. ಮರಳಿ ಬಂದ ಕುಟುಂಬಗಳಿಗೆ ಬಟ್ಟೆಗಳು, ದಿನಸಿ ಸಾಮಗ್ರಿಗಳು, ವಿವಿಧ ದೇವರ ಫೋಟೋಗಳು, ಮತ್ತು ಗೃಹ ಉಪಯೋಗಿ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಟೊ, ಮಾಹಿತಿ ಹರಿದಾಡುತ್ತಿದೆ.
ಈ ಸಮಾರಂಭದಲ್ಲಿ ಧರ್ಮ ಪ್ರಸಾರ ದಕ್ಷಿಣ ಮಧ್ಯ ಕ್ಷೇತ್ರಿಯ ಪ್ರಮುಖ್ ಸೂರ್ಯನಾರಾಯಣ, ಧರ್ಮ ಪ್ರಸಾರದ ಪ್ರಾಂತ ಪ್ರಮುಖ್ ಸುನಿಲ್ ಕೆ.ಆರ್., ಬಜರಂಗದಳದ ಮಂಗಳೂರು ವಿಭಾಗ್ ಸಂಯೋಜಕ್ ಪುನೀತ್ ಅತ್ತಾವರ, ವಿಶ್ವಹಿಂದೂ ಪರಿಷತ್ ನ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಮಾತೃಶಕ್ತಿಯ ಜಿಲ್ಲಾ ಪ್ರಮುಖ್ ಶ್ರೀಮತಿ ಗೀತಾ ಕಡಬ, ವಿಶ್ವಹಿಂದೂ ಪರಿಷತ್ ಕಡಬ ಪ್ರಖಂಡ ಕಾರ್ಯದರ್ಶಿ ಜಯಂತ್ ಕಲ್ಲುಗುಡ್ಡೆ,ಜೊತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ , ಧರ್ಮಪ್ರಸಾರದ ಜಿಲ್ಲಾ ಪ್ರಮುಖ್ ಮೂಲ ಚಂದ್ರ ಕಾಂಚಾಣ,
ಬಜರಂಗದಳದ ಪ್ರಖಂಡ ಸಂಚಾಲಕ ಸಂತೋಷ್ ಉಪ್ಪಿನಂಗಡಿ ಮತ್ತು ಪ್ರಮುಖರಾದ ಪ್ರಮೋದ್ ನಂದಿಗೂರಿ, ನಿತ್ಯಾನಂದ ಮೇಲ್ಮನೆ, ಸತ್ಯನಾರಾಯಣ ಹೆಗ್ಗಡೆ ನಡುಮಜಲು, ಕಿರಣ್ ಪಂಜ ಸೇರಿದಂತೆ ಮುಂತಾದವರು ಇದ್ದರು.