ಉಡುಪಿ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಗಿಂಡಿ ನರ್ತನ ಸೇವೆ

| Published : Apr 02 2025, 01:03 AM IST

ಉಡುಪಿ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಗಿಂಡಿ ನರ್ತನ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವ (125ನೇ ವರ್ಷದ) ಆಚರಣೆ ಪ್ರಯುಕ್ತ 125 ದಿನಗಳ ಕಾಲ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ಹಾಗೂ ಯುಗಾದಿ ಹಬ್ಬದ ಪರ್ವಕಾಲದಲ್ಲಿ, ಭಜನಾ ಆರಾಧ್ಯ ದೇವರಾದ ವಿಠೋಭ ರುಖುಮಾಯಿ ಸನ್ನಿಧಿಯಲ್ಲಿ ಇತಿಹಾಸ ಪ್ರಸಿದ್ಧ ‘ಗಿಂಡಿ ನರ್ತನ ಸೇವೆ’ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವ (125ನೇ ವರ್ಷದ) ಆಚರಣೆ ಪ್ರಯುಕ್ತ 125 ದಿನಗಳ ಕಾಲ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ಹಾಗೂ ಯುಗಾದಿ ಹಬ್ಬದ ಪರ್ವಕಾಲದಲ್ಲಿ, ಭಜನಾ ಆರಾಧ್ಯ ದೇವರಾದ ವಿಠೋಭ ರುಖುಮಾಯಿ ಸನ್ನಿಧಿಯಲ್ಲಿ ಇತಿಹಾಸ ಪ್ರಸಿದ್ಧ ‘ಗಿಂಡಿ ನರ್ತನ ಸೇವೆ’ ನಡೆಯಿತು.

ನಾಡಾ ಸತೀಶ್ ನಾಯಕ್, ಚೇಂಪಿ ರಾಮಚಂದ್ರ ಅನಂತ ಭಟ್ ಉಡುಪಿ ಮತ್ತು ಪ್ರಶಾಂತ್ ಆಚಾರ್ಯ ಬಸ್ರೂರು ಅವರು ಗಿಂಡಿ ನರ್ತನ ಸೇವೆಯನ್ನು ನೆಡೆಸಿಕೊಟ್ಟರು. ಹಿಮ್ಮೇಳನದ ಹಾಡುಗಾರಿಕೆಯಲ್ಲಿ ಸಗ್ರಿ ಗಣೇಶ್ ನಾಯಕ್, ಸಗ್ರಿ ವಿನೀತ್ ನಾಯಕ್, ಹಾರ್ಮೋನಿಯಂನಲ್ಲಿ ಪಾಂಡುರಂಗ ದತ್ತ ಕಿಣಿ, ತಬಲಾದಲ್ಲಿ ಜಯದೇವ್ ಭಟ್ ಕಲ್ಯಾಣಪುರ ಸಹಕರಿಸಿದರು.ಈ ಸಂದರ್ಭ ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್, ಮೊಕ್ತೇಸರ ಪಿ.ವಿ. ಶೆಣೈ ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿ.ಎಸ್.ಬಿ. ಮಹಿಳಾ ಮಂಡಳಿ ಸದಸ್ಯರು, ಯುವಕ ಮಂಡಳಿಯ ಸದಸ್ಯರು ಹಾಗೂ ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.