ಬೀರೂರುಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಬಿ.ಗಿರೀಶ್, ಉಪಾಧ್ಯಕ್ಷರಾಗಿ ಎಚ್.ವೆಂಕಟಗಿರಿಯಪ್ಪ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಿಂದ ಅವಿರೋಧ ಆಯ್ಕೆ ಘೋಷಣೆ
ಕನ್ನಡಪ್ರಭ ವಾರ್ತೆ, ಬೀರೂರುಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಬಿ.ಗಿರೀಶ್, ಉಪಾಧ್ಯಕ್ಷರಾಗಿ ಎಚ್.ವೆಂಕಟಗಿರಿಯಪ್ಪ ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಸಂಘಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಮಾರ್ಗದ ಮಧು, ಕೆ.ಆರ್. ರಂಗಪ್ಪ, ಒ. ತಿಮ್ಮೇಗೌಡ, ಜಗದೀಶ್ ಕೆ.ಎಚ್, ಎನ್. ಮೋಹನ್ ಕುಮಾರ್, ಕಾಂತರಾಜ್ ಬಿ.ಎಂ, ಎಂ.ಕುಮಾರ್, ಎ.ಬಿ. ಮಂಜುಳ ರಾಜಪ್ಪ, ಆರ್.ಶಾಂಭವಿ, ಕೆ.ಆರ್. ಷಣ್ಮುಖ ಹಾಜರಿದ್ದರು.ನೂತನ ಅಧ್ಯಕ್ಷ ಮಾರ್ಗದ ಎಂ.ಬಿ. ಗಿರೀಶ್ ಮಾತನಾಡಿ, ಸರ್ವ ಸದಸ್ಯರ ಸಹಕಾರ ಪಡೆದು ಕೃಷಿಕರಿಗೆ ಅಗತ್ಯವಾಗಿರುವ ಗೊಬ್ಬರ ಪೂರೈಕೆ, ಸಾಲ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಸಂಘದ ಬಲವರ್ಧನೆಗೆ ಶ್ರಮಿಸಲಾಗುವುದು ಎಂದರು.ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಸುದರ್ಶನ್, ಮಾಜಿ ಉಪಾಧ್ಯಕ್ಷ ಎನ್.ಎಂ. ನಾಗರಾಜ್, ಮಾಜಿ ಸದಸ್ಯರಾದ ರಘು, ಬಿ.ಆರ್. ಮೋಹನ್ ಕುಮಾರ್, ಮುಖಂಡರಾದ ಸವಿತಾ ರಮೇಶ್, ವಿಕ್ರಂ, ಸುಪ್ರಿತ್, ವಿನಾಯಕ್, ಶಬರೀಶ್, ಕೃಷ್ಣಮೂರ್ತಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.18 ಬೀರೂರು1ಬೀರೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ನೂತನ ಅಧ್ಯಕ್ಷರಾಗಿ ಎಂ.ಬಿ.ಗಿರೀಶ್ ಹಾಗೂ ಉಪಾಧ್ಯಕ್ಷರಾಗಿ ಎಚ್.ವೆಂಕಟಗಿರಿಯಪ್ಪ ಅವಿರೋಧವಾಗಿ ಆಯ್ಕೆಯಾದರು.