ತಂದೆ ಜತೆಯಲ್ಲಿದ್ದ ಮಗು ಕ್ಷಣಾರ್ಧದಲ್ಲಿ ಅಪಹರಣ

| Published : Aug 01 2024, 12:34 AM IST

ತಂದೆ ಜತೆಯಲ್ಲಿದ್ದ ಮಗು ಕ್ಷಣಾರ್ಧದಲ್ಲಿ ಅಪಹರಣ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತಂದೆಯ ಜತೆ ನಿಂತಿದ್ದ ಸಗೀನಾ (೪) ವರ್ಷದ ಹೆಣ್ಣು ಮಗುವನ್ನು ಕ್ಷಣಾರ್ಧದಲ್ಲಿ ಅಪಹರಿಸಲಾಗಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನೋರ್ವ ಮಗುವಿನ ಕೈಹಿಡಿದು ಕರೆದ್ಯೊಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತಂದೆಯ ಜತೆ ನಿಂತಿದ್ದ ಸಗೀನಾ (೪) ವರ್ಷದ ಹೆಣ್ಣು ಮಗುವನ್ನು ಕ್ಷಣಾರ್ಧದಲ್ಲಿ ಅಪಹರಿಸಲಾಗಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಪೇಟೆ ಬೀದಿಯ ಎಚ್.ಎನ್.ಮೆಡಿಕಲ್ಸ್ ಮಾಲೀಕ ಜೀಷಿನ್ ಹೈದರ್ ಅವರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತುರ್ತಾಗಿ ಬೇಕಿದ್ದ ಔಷಧಿ ಪಡೆಯಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸಂಜೆ ೪ ಗಂಟೆ ಸುಮಾರಿನಲ್ಲಿ ಬಸ್ ಆಗಮಿಸಿದಾಗ ಬಸ್ ಚಾಲಕನ ಹತ್ತಿರ ಪಾರ್ಸಲ್ ಪಡೆಯುವ ಸಂದರ್ಭದಲ್ಲಿ ಮಗುವಿನ ಕೈ ಬಿಟ್ಟಿದ್ದಾರೆ. ಆ ಕ್ಷಣದಲ್ಲಿ ಸಗೀನಾಳನ್ನು ಅಪಹರಿಸಿದ್ದಾರೆ. ಕಳ್ಳನೋರ್ವ ಮಗುವಿನ ಕೈಹಿಡಿದು ಕರೆದ್ಯೊಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.