ಲಕ್ಷ್ಮೇಶ್ವರ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪದಡಿ ಇಬ್ಬರು ಯುವಕರನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕುಂದ್ರಳ್ಳಿ ಗ್ರಾಮದ ಬಾಲಕಿ ಶನಿವಾರ ಲಕ್ಷ್ಮೇಶ್ವರ ಪಟ್ಟಣಕ್ಕೆ ಟ್ಯೂಶನ್ ಕ್ಲಾಸ್‌ಗೆ ಬಂದಿದ್ದ ವೇಳೆ ಅದೇ ಗ್ರಾಮದ ಇಬ್ಬರು ಯುವಕರು ಕೂಡಿಕೊಂಡು ಪಟ್ಟಣದ ಪೋಸ್ಟ್ ಆಫೀಸ್ ಬಳಿ ಬಾಲಕಿಗೆ ನಿಮ್ಮ ಅಣ್ಣ ಕರೆಯುತ್ತಿದ್ದಾನೆ ಬಾ ಎಂದು ಗೂಡ್ಸ್ ವಾಹನದಲ್ಲಿ ಒತ್ತಾಯಪೂರ್ವಕವಾಗಿ ಕೂಡಿಸಿಕೊಂಡು ಶಿಗ್ಲಿ ರಸ್ತೆಯ ಹೊಲದ ಬಳಿ ವಾಹನವನ್ನು ನಿಲ್ಲಿಸಿ ಅತ್ಯಾಚಾರ ಮಾಡಿದ್ದಾರೆ.ಈ ಕುರಿತು ಬಾಲಕಿಯ ದೊಡ್ಡಮ್ಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಅಲ್ಲಾಭಕ್ಷಿ ಕೊಪ್ಪದ ಅತ್ಯಾಚಾರ ಮಾಡಿದ್ದು, ಆಸೀಫ್ ನಧಾಪ ಎಂಬಾತ ಆತನಿಗೆ ಸಹಾಯಕನಾಗಿ ವಾಹನ ಚಾಲನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಿಎಸ್‌ಐ ನಾಗರಾಜ ಗಡದ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಬೈಕ್- ಆಟೋ ಡಿಕ್ಕಿ: ಸವಾರ ಸಾವುಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ಕಾಲೇಜು ಹತ್ತಿರ ಬೈಕ್ ಮತ್ತು ಆಟೋ ನಡೆದ ಅಪಘಾತದಲ್ಲಿ ಬೈಕ್ ಸವಾರ ಪಟ್ಟಣದ ನಿವಾಸಿ ಸಿದ್ದನಗೌಡ ಸಿದ್ರಾಮಗೌಡ ಬಳ್ಳೊಳ್ಳಿ(63) ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.ಬೈಕ್ ಸವಾರ ಸಿದ್ದನಗೌಡ ಬಳ್ಳೊಳ್ಳಿ ಅವರು ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಬರುತ್ತಿರುವ ವೇಳೆ ಹಿಂದಿನಿಂದ ಬಂದ ಆಟೋ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಸಿದ್ದನಗೌಡ ಅವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.ತಕ್ಷಣವೇ ಅಲ್ಲಿದ್ದ ಸ್ಥಳೀಯರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್‌ಗೆ ಕಳುಹಿಸಿಕೊಡಲಾಗಿತ್ತು. ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್‌ಗೆ ತಂದು ಚಿಕಿತ್ಸೆ ನೀಡುವ ವೇಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.