ಸಾರಾಂಶ
ಮಕ್ಕಳ ಋತುಚಕ್ರದ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಹದಿಹರೆಯದ ಹೆಣ್ಣು ಮಕ್ಕಳು ಮಾಸಿಕ ಸಮಸ್ಯೆ ಬಗ್ಗೆ ಮುಜುಗರ ಪಡುವ ಕಾರಣ ಹಲವು ಸಮಸ್ಯೆಗಳಲ್ಲಿ ಸಿಲುಕುತ್ತಿದ್ದಾರೆ ಸುನೀತಾ ಕಿರಣ್ ಎಂದು ಅಭಿಪ್ರಾಯಪಟ್ಟರು.ತರೀಕೆರೆ ಕೆಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಹೆಣ್ಣು ಮಕ್ಕಳ ಋತುಚಕ್ರದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಋತುಚಕ್ರದ ಬಗ್ಗೆ ಗೌಪ್ಯತೆ, ಮುಜುಗರ, ನಾಚಿಕೆ, ಸಂಕೋಚದ ಸ್ವಭಾವದಿಂದ ಸ್ವಯಂ ಕಷ್ಟಕ್ಕೆ ಸಿಲುಕಿ ನಲುಗುವ ಸಂದರ್ಭಗಳು ಎದುರಾಗುತ್ತಿವೆ. ಹೆಣ್ಣು ಮಕ್ಕಳು ಇಂತಹ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯಬೇಕು. ಇದು ಹೆಣ್ಣಿನ ಬದುಕಿಗೆ ಅತ್ಯಗತ್ಯವಾದ ವಿಷಯ. ಗ್ರಾಮೀಣ ಪ್ರದೇಶಗಳಲ್ಲಿ ಋತು ಸಂಬಂಧಿತ ವಿಷಯದಲ್ಲಿ ಹೆಚ್ಚಿನ ಅರಿವು ಹೊಂದಬೇಕು. ಪೋಷಕರು ಸಹ ಈ ವಿಚಾರದಲ್ಲಿ ಜವಾಬ್ದಾರಿ ತೋರಬೇಕು ಎಂದರು.ಮಗುವಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ನಾನ್ನುಡಿಯಂತೆ ಮಕ್ಕಳಿಗೆ ತಾಯಿ ಋತುಮತಿ ಯಾದ ಸಮಯದಲ್ಲಿ ಹೇಳುವ ಬುದ್ದಿಮಾತುಗಳನ್ನು ತಿಳಿಸಿರುತ್ತಾರೆ ಆದರೆ ನಿಮ್ಮಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ವೈಜ್ಞಾನಿಕ ಕಾರಣಗಳ ಮೂಲಕ ವೈದ್ಯರ ಸಲಹೆ ಪಡೆಯಬೇಕೆಂದರು.ಡಾ.ಸುಮನ ಕಿಶೋರ್ ಮಾತನಾಡಿ. ಋತುಮತಿ ಆದ ಸಮಯದಲ್ಲಿ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ, ಯಾಕಾಗಿ ಆಗುತ್ತೆ, ಹೇಗೆ ಇರಬೇಕು ಎಂಬ ವಿಚಾರಗಳು ಮಾಸಿಕ ಋತು ಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳು ಹಾಗೂ ಪೋಷಕರು ಕೈಗೊಳ್ಳಬೇಕಾದ ಕ್ರಮ, ವಹಿಸಬೇಕಾದ ಸ್ವಚ್ಛತೆ ಋತುಚಕ್ರದ ಶುಚಿತ್ವ ನಿರ್ವಹಣೆ ಹೇಗೆ ಮಾಡಬೇಕು. ಬಳಸಿದ ಸಾನಿಟರಿ ಪ್ಯಾಡ್‌ಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂದು ಮಕ್ಕಳಲ್ಲಿ ಅರಿವು ಮೂಡಿಸಿದರು. ಶಾಲೆಯ ಸಂಸ್ಥಾಪಕಿ ಪೂರ್ಣಿಮಾ ಮಾತನಾಡಿ ಕಸಾಪ ಮಹಿಳಾ ಘಟಕದಿಂದ ಇಂತಹ ಉತ್ತಮ ಕಾರ್ಯಕ್ರಮ ಗಳು ನಡೆಯುತ್ತಿರುವುದು ಶ್ಲಾಘನೀಯ, ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿರುತ್ತಾರೆ ಎಂದು ತಿಳಿಸಿದರು.ಕಾರ್ಯಕ್ರಮ ದಲ್ಲಿ ಶಾಲೆ ಶಿಕ್ಷಕಿಯರಾದ ರಂಜನಿ, ನಾಗಶ್ರೀ, ಲಕ್ಷ್ಮಿ ಭಗವಾನ್, ಲಕ್ಷ್ಮಿ ನಿತಿನ್ ಭಾಗವಹಿಸಿದ್ದರು. ಶಾಲೆಯ ಮಕ್ಕಳು ಕಾರ್ಯಕ್ರಮ ದ ನಿರೂಪಣೆ, ಪ್ರಾರ್ಥನೆ, ವಂದನಾರ್ಪಣೆ ನೆರವೇರಿಸಿಕೊಟ್ಟರು.19 ತರೀಕೆರೆ 1ತರೀಕೆರೆಯ ಕೆಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಹೆಣ್ಣು ಮಕ್ಕಳ ಋತುಚಕ್ರದ ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.