ಸಾರಾಂಶ
ಮಹಾಲಿಂಗಪುರ: ಇಂದಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಂಡು ಮೌಲ್ಯಾಧಾರಿತ ಶಿಕ್ಷಣ ಎಂಬುದು ಅರ್ಥ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಸತ್ಪ್ರಜೆಳಾಗಿ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು. ಬನಶಂಕರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜ್ಞಾನ ಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 26ನೇ ವಾರ್ಷಿಕ ಸ್ನೇಹ ಸಮೇಳನದ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ,ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಉತ್ತಮ ಬದುಕು ನಡೆಸುವುದನ್ನು ಕಲಿಸುವುದು ಮುಖ್ಯ ಎಂದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಇಂದಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಂಡು ಮೌಲ್ಯಾಧಾರಿತ ಶಿಕ್ಷಣ ಎಂಬುದು ಅರ್ಥ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಸತ್ಪ್ರಜೆಳಾಗಿ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಉತ್ತಮ ಬದುಕು ನಡೆಸುವುದನ್ನು ಕಲಿಸುವುದು ಮುಖ್ಯ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.ಬನಶಂಕರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜ್ಞಾನ ಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 26ನೇ ವಾರ್ಷಿಕ ಸ್ನೇಹ ಸಮೇಳನದ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ, ಇಂದು ಶಿಕ್ಷಣ ವ್ಯಾಪಾರದ ವಸ್ತು ಆಗಿರುವುದು ವಿಷಾದಕರ. ಮಕ್ಕಳಿಗೆ ಪಾಠದ ಜೊತೆ ಬದುಕಿನ ಪಾಠ ಬಹಳ ಮುಖ್ಯವಾಗಿದೆ. ಇಂದಿನ
ಕೆಜಿಎಸ್ ಸಮೂಹದ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಎಸ್. ಎನ್. ಬ್ಯಾಳಿ ಮಾತನಾಡಿದರು.ಈರಪ್ಪ ದಿನ್ನಿಮನಿ, ಹಣಮಂತ ಕೊಣ್ಣೂರ, ಶಿವನಗೌಡ ಪಾಟೀಲ, ನಜೀರ್ ಅತ್ತಾರ, ಈಶ್ವರ ವಂದಾಲ, ಸುವರ್ಣ ಕಲಾದಗಿ, ಪರಸಪ್ಪ ಊರಭಿನ್ನವರ, ಅಡಿವೆಪ್ಪ ಹಂದಿಗುಂದ, ಹಣಮಂತ ಶಿರೋಳ, ಮಹಾನಿಂಗ ಕಂಠಿ, ಶ್ರೀಶೈಲಪ್ಪ ವಜ್ಜರಮಟ್ಟಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಅಬೂಬಕರ್ ಐನಾಪುರ ಉಪಸ್ಥಿತರಿದ್ದರು.
ಗಣ್ಯರು ಹಾಗೂ ಉನ್ನತ ಸಾಧನೆ ಮಾಡಿದ ಮಕ್ಕಳು, ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರು, ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು. ಸೌಮ್ಯ ಧರ್ಮಟ್ಟಿ, ವಿ.ಆರ್. ಬಿರನಗಡ್ಡಿ ನಿರೂಪಿಸಿದರು.ಡಿ.ಎಸ್. ಮಳಲಿ ಸ್ವಾಗತಿಸಿ ವಂದಿಸಿದರು. ಪ್ರಪುಲ್ ಕುಳಲಿ ನಿರೂಪಿಸಿದರು.